ಮಕ್ಕಳಿಗೆ ಕಥೆ ಹೇಳಲೆಂದೇ ಬಂದಿದೆ ಗೂಗಲ್ ಸಂಸ್ಥೆಯ ಹೊಸ ಆಫ್ : ಅಷ್ಟಕ್ಕೂ ಆ ಆಫ್ ನ ವಿಶಿಷ್ಟತೆ ಏನು.?
ಗೂಗಲ್ ಸಂಸ್ಥೆ ಪ್ರತಿನಿತ್ಯ ಒಂದಲ್ಲಾ ಒಂದು ಆವಿಷ್ಕಾರವನ್ನು ಮಾಡುತ್ತಾ, ಅದನ್ನು ಜನರಿಗೆ ಪರಿಚಯಿಸುತ್ತಾ ತನ್ನ ತಂತ್ರಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಂದಿನ ದಿನಮಾನದಲ್ಲಿ ಗೂಗಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬತೆ ಜನರಲ್ಲಿ ದಿನನಿತ್ಯದ ಜೀವನದಲ್ಲಿ ಬೆರೆತು ಹೋಗಿದೆ. ಈ ಗೂಗಲ್ ನ ಪ್ರಯೋಜನವನ್ನು ಪಡೆಯದೇ ಇರುವವರೇ ಈ ಪ್ರಪಂಚದಲ್ಲಿ ಇಲ್ಲ ಎಂಬ ಅಂಶವನ್ನು ಮರೆಯುವಂತಿಲ್ಲ. ಈ ಒಂದು ಹಿರಿಮೆಗೆ ಮತ್ತೊಂದು ಗರಿ ಎಂಬಂತೆ ಗೂಗಲ್ ಸಂಸ್ಥೆ ಮಕ್ಕಳಿಗೆ ಕತೆಯನ್ನು ಹೇಳುವಂತಹ ಹೊಸ ಆಫ್ ಅನ್ನು ಬಿಡುಗಡೆಯನ್ನು ಮಾಡಿದೆ. ಅಷ್ಟಕ್ಕೂ ಗೂಗಲ್ ಬಿಡುಗಡೆಗೊಳಿಸುತ್ತಿರುವ ಆಫ್ ಯಾವುದು ಗೊತ್ತಾ..?
ತಂತ್ರಜ್ಞಾನದ ದೈತ್ಯ ಗೂಗಲ್ ಈವರೆಗೆ ಜನರ ಬಳಕೆಗೆ ಯೋಗ್ಯವಾಗುವಂತಹ ಸಾಕಷ್ಟು ಆಯಪ್ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದೆ. ಇದೀಗ ಮಕ್ಕಳ ಕಲಿಕೆಗೆ ನೆರವಾಗಲು 'ರೀಡ್ ಅಲಾಂಗ್' ಆಯಪ್ ಅನ್ನು ಪರಿಚಯಿಸಿದೆ. ಈ ಆಯಪ್ ಭಾರತದಲ್ಲಿ 'ಬೋಲೊ' ಹೆಸರಿನಲ್ಲಿ ಬಿಡುಗಡೆ ಆಗಿದೆ. 'ರೀಡ್ ಅಲಾಂಗ್' ಆಫ್ ಮಕ್ಕಳ ಕಲಿಕೆಯ ಮೇಲೆ ದೃಷ್ಠಿ ಇರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಆಯಂಡ್ರಾಯ್ಡ್ ಆಪ್ ಇದಾಗಿದ್ದು, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಲಿದೆ.
ಭಾರತದಲ್ಲಿ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡ ನಂತರವೇ 'ರೀಡ್ ಅಲಾಂಗ್' ಆಯಪ್ ಅನ್ನು ಪರಿಚಯಿಸಿದೆ. ಸದ್ಯ 180ಕ್ಕೂ ಹೆಚ್ಚು ದೇಶದಲ್ಲಿ 'ರೀಡ್ ಅಲಾಂಗ್' ಆಯಪ್ ಬಳಕೆಯಲ್ಲಿದೆ. ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಹಿಂದಿ ಭಾಷೆಯಲ್ಲಿ ಸಿಗುತ್ತಿದೆ.
'ಬೋಲೊ' ಆಯಪ್ 'ಬೋಲೊ' ಆಯಪ್ ದಿಯಾ ಫೀಚರ್ ಸಹಾಯವನ್ನು ಪಡೆದುಕೊಂಡು ಮಕ್ಕಳ ಸ್ವತಂತ್ರ ಕಲಿಕೆಗೆ ಮತ್ತು ಓದುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ನೆರವು ಮಾಡುತ್ತದೆ. ಜೊತೆಗೆ ಮಕ್ಕಳು ಜೋರಾಗಿ ಓದಲು ದಿಯಾ ಗೂಗಲ್ನ ಟೆಕ್ಟ್-ಟು-ಸ್ಪೀಚ್ ಮತ್ತು ಸ್ಚೀಚ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಮಕ್ಕಳು ಪದಗಳ ಉಚ್ಚಾರಣೆ ಮತ್ತು ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಲು ಸಹಾಯ ಮಾಡುತ್ತದೆ.
'ರೀಡ್ ಅಲಾಂಗ್' ಆಯಪ್ ಪ್ರಪಂಚದಾದ್ಯಂತ ವೈವಿಧ್ಯಮಯ ಮತ್ತು ಆಸಕ್ತಿದಾಯಕ ಕಥೆಗಳನ್ನು ತೊಡಗಿಸಿಕೊಂಡಿದೆ. ಜೊತೆಗೆ ಮಕ್ಕಳಿಗಾಗಿ ಆಟವನ್ನು ಇದರಲ್ಲಿ ನೀಡಲಾಗಿದೆ. ಮಕ್ಕಳು ಓದುತ್ತಾ, ಆಡುತ್ತಾ ಬ್ಯಾಡ್ಜ್ಗಳನ್ನು ಸಂಗ್ರಹಿಸಬಹುದು. ಇದು ಮಕ್ಕಳನ್ನು ಓದಲು ಪ್ರೇರೆಪಿಸುತ್ತದೆ ಎಂದು ಗೂಗಲ್ ತಿಳಿಸಿದೆ.
ಇನ್ನು ರೀಡ್ ಅಲಾಂಗ್ ಆಯಪ್ ಜಾಹೀರಾತು ರಹಿತವಾಗಿದ್ದು, ಮಕ್ಕಳು ಇಂಟರ್ನೆಟ್ ಇಲ್ಲದೆ ಸಹಃ ಬಳಸಬಹುದಾಗಿದೆ. ಹೆಚ್ಚಿನ ಕಥೆಗಳಿಗಾಗಿ ಪೋಷಕರು ಇಂಟರ್ನೆಟ್ ಬಳಸಬೇಕಾಗುತ್ತದೆ.