ಅಡಿಲೇಡ್: ಸಾಮಾನ್ಯವಾಗಿ ಎಲ್ಲಾ ಆಟಗಾರರು ಅವರ ತಂಡದ ಆಟಗಾರರ ಶಕ್ತಿ ಸಾಮರ್ಥ್ಯ ಗಳನ್ನು ಅರಿತು ಅವರು ಯಾವ ರೀತಿಯ ಸಾಧನೆಗಳನ್ನು ಮಾಡಬಹುದು ಎಂದು ಹೇಳುತ್ತಾರೆ. ಆದರೆ ಆಸ್ಟ್ರೇಲಿಯಾ ದ ಈ ಆಟಗಾರ ಟೀಂ ಇಂಡಿಯಾದ ಡಬಲ್ ಸೆಂಚುರಿಕರ್ ಖ್ಯಾತಿಯ ರೋಹಿತ್ ಶರ್ಮ ಶಕ್ತಿ ಸಾಮಾರ್ಥ್ಯವನ್ನು ಅರಿತು ಅವರು ಮುಂದೆ ಸಾಧಿಸಬಹುದಾದ ಸಾಧನೆ ಯೊಂದನ್ನು ಕುರಿತು ಮಾತನಾಡಿದ್ದಾರೆ. ಹೌದು ಅದು ಯಾರು, ಏನು ಸಾಧನೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಟೆಸ್ಟ್ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಮತ್ತು ದಿ ಗ್ರೇಟ್ ಬ್ರಿಯಾನ್ ಲಾರಾ ಅವರ 400 ರನ್ಗಳ ವಿಶ್ವ ದಾಖಲೆ ಯನ್ನು ಭಾರತದ ರೋಹಿತ್ ಶರ್ಮಾ ಮಾತ್ರ ಮುರಿಯಬಲ್ಲರು ಎಂದು ಆಸ್ಟ್ರೇಲಿಯಾದ ಡ್ಯಾಷಿಂಗ್ ಓಪನರ್ ಡೇವಿಡ್ ವಾರ್ನರ್ ಅಭಿಪ್ರಾಯ ಪಟ್ಟಿದ್ದಾರೆ. ಹೌದು ಈ ಮಾತನ್ನು ಸ್ವತಹ ಅವರೇ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಮ್ಯಾಚ್ನಲ್ಲಿ 335 ರನ್ಗಳಿಸಿದ್ದ ವಾರ್ನರ್, ಸ್ಕೋರ್ 589/3 ಆಗಿದ್ದಾಗ ಆಸ್ಟ್ರೇಲಿಯಾದ ನಾಯಕ ಟಿಮ್ ಪೈನೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ಇದರಿಂದ 65 ರನ್ಗಳಿಂದ ಲಾರಾ ದಾಖಲೆ ಮುರಿಯುವ ಅವಕಾಶವನ್ನು ವಾರ್ನರ್ ಕಳೆದುಕೊಂಡರು. ಇನ್ನಿಂಗ್ಸ್ ಮುಕ್ತಾಯದ ನಂತರ ಮಾತನಾಡಿದ ವಾರ್ನರ್, ಟೆಸ್ಟ್ ಕ್ರಿಕೆಟ್ನಲ್ಲಿ ಲಾರಾ ಅವರ ಔಟಾಗದೆ 400 ರನ್ ಗಳಿಸಿದ ದಾಖಲೆಯನ್ನು ಮುಂದಿನ ದಿನಗಳಲ್ಲಿ ಒಂದಲ್ಲಾ ಒಂದು ದಿನ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಮುರಿಯಬಹುದು. ಅ ಸಾಮರ್ಥ್ಯ ರೋಹಿತ್ ಶರ್ಮಾ ಅವರಲ್ಲಿದೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ನ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ 2004 ರಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 400 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ವಾರ್ನರ್ 335 ರನ್ ಗಳಿಸಿದ್ದು ಮುಂದೊಂದು ದಿನ ಟೀಂ ಇಂಡಿಯಾದ ರೋಹಿತ್ ಶರ್ಮ ಈ ದಾಖಲೆ ಬರ೧ಯುವರೆಂಬ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.