ಶುಭಮನ್  ಗಿಲ್ ಗೆ ಅವಕಾಶ ಕೊಡಿ; ಕೊಹ್ಲಿಗೆ ಹರ್ಭಜನ್ ಸಲಹೆ

Soma shekhar
ಹ್ಯಾಮಿಲ್ಟನ್: ಮುಂಬರುವ ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ ಮನ್‌ ಸ್ಥಾನದಲ್ಲಿ ಪೃಥ್ವಿ ಶಾ ಅವರ ಬದಲಿಗೆ ಶುಭಮನ್‌ ಗಿಲ್‌ ಅವರನ್ನು ಆಡಿಸುವುದು ಒಳಿತು ಎಂದು ಹರ್ಭಜನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. ಹೌದು, ಯಾಕೆ ಗೊತ್ತಾ!? 
 
ಸೋಲಿನಲ್ಲಿರುವ ಟೀಂ ಇಂಡಿಯಾದ ಜೊತೆಗೆ ಮಾತಿಗಿಳಿದಿರುವ ಭಾರತ ತಂಡದ ಅವಕಾಶ ವಂಚಿತ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ನ್ಯೂಜಿಲೆಂಡ್‌ ಎದುರು ಫೆ.21ರಂದು ಹ್ಯಾಮಿಲ್ಟನ್‌ ನಲ್ಲಿ ಆರಂಭವಾಗಲಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪೃಥ್ವಿ ಶಾ ಬದಲಿಗೆ ಶುಭಮನ್‌ ಗಿಲ್‌ ಅವರನ್ನು ಆಡಿಸಬೇಕು ಎಂದು ಪ್ರಥಮ ಟೆಸ್ಟ್‌ ಗೆ ಅಗತ್ಯವಿರುವ ಪವರ್‌ ಫುಲ್‌ ಪ್ಲೇಯರ್‌ ನನ್ನು ಹೆಸರಿಸಿದ್ದಾರೆ. ಹೌದು, ಸದಾ ಹರ್ಭಜನ್ ತಮ್ಮ ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ. 
 
ಗಿಲ್‌, ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ 'ಎ' ತಂಡದ ಪರ ಪ್ರಥಮ ಅಭ್ಯಾಸ ಟೆಸ್ಟ್‌ ಪಂದ್ಯದಲ್ಲಿ 83 ಮತ್ತು 204 ರನ್‌ಗಳ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಎರಡನೇ ಅಭ್ಯಾಸ ಪಂದ್ಯದಲ್ಲೂ ಶತಕ ಬಾರಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಟೀಮ್‌ ಇಂಡಿಯಾದ ಸ್ಟಾರ್‌ ಓಪನರ್‌ ರೋಹಿತ್‌ ಶರ್ಮಾ ಗಾಯದ ಸಮಸ್ಯೆ ಕಾರಣ ಸರಣಿಯಿಂದ ಹೊರಗುಳಿದಿದ್ದು, ಈ ಮೂಲಕ ಶುಭಮನ್‌ ಗಿಲ್‌ ಗೆ ಭಾರತ ಟೆಸ್ಟ್‌ ತಂಡದಲ್ಲಿ ಮೊದಲ ಬಾರಿ ಸ್ಥಾನ ಲಭ್ಯವಾಗಿದೆ.
 
ಆದರೆ, 16 ಆಟಗಾರರ ಬಳಗದಲ್ಲಿ ಪೃಥ್ವಿ ಶಾ 16 ತಿಂಗಳ ನಂತರ ಸ್ಥಾನ ಪಡೆದಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. "ಭಾರತ ತಂಡದಲ್ಲಿ ಹಲವು ಬಾರಿ ಸ್ಥಾನ ಪಡೆದಿದ್ದರೂ ಟೆಸ್ಟ್‌ ಆಡಲು ಸಾಧ್ಯವಾಗದೇ ಇರುವ ಶುಭಮನ್‌ ಗಿಲ್‌ ಗೆ ಮೊದಲ ಆದ್ಯತೆ ನೀಡಬೇಕು. ಕನ್ನಡಿಗ ಮಯಾಂಕ್‌ ಮತ್ತು ಶುಭಮನ್‌ ಭಾರತದ ಪರ ಇನಿಂಗ್ಸ್‌ ಆರಂಭಿಸಬೇಕು," ಎಂದು ಪಂಜಾಬ್‌ ಮೂಲದ ಬ್ಯಾಟ್ಸ್‌ ಮನ್‌ ಪರ ಹರ್ಭಜನ್‌ ಬ್ಯಾಟ್‌ ಬೀಸಿದ್ದಾರೆ.
 
 

Find Out More:

Related Articles: