ಭಾರತದಲ್ಲಿ ಚೀನೀ ಆಫ್ ಗಳ ನಿಷೇಧಿಸಿದ್ದಕ್ಕೆ ಚೀನಾ ಭಾರತಕ್ಕೆ ಹೇಳಿದ್ದೇನು..?

Soma shekhar

ಲಡಾಕ್ ನಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿದ್ದ 59 ಚೀನೀ ಆಫ್ ಗಳನ್ನು ನಿಷೇಧವನ್ನು ಮಾಡಲಾಗಿತ್ತು ಇದರಿಂದಾಗಿ ಚೀನಾಕ್ಕೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿತ್ತು. ಇದರ ಜೊತೆಗೆ ಕಳೆದ ದಿನಗಳ ಹಿಂದೆ ಮತ್ತೆ 47 ಆಫ್ ಗಳನ್ನು ನಿಷೇಧಿಸಿದೆ ಇದಕ್ಕೆ ಚೀನಾ ಕ್ರೋಧ ಗೊಂಡಿತ್ತು ಭಾರತಕ್ಕೆ ತಾಕೀತು ಮಾಡುವಂತಹ ಧೈರ್ಯವನ್ನು ತೋರಿದೆ. ಅಷ್ಟಕ್ಕೂ ಚೀನಾ ನೀಡಿದ ಆ ತಾಕೀತು ಏನು ಗೊತ್ತಾ..?

 

ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಘೋಷಿಸಿರುವ ಡಿಜಿಟಲ್​ ವಾರ್​ ಅಡಿ ಚೀನಾ ಮೂಲದ ಆಯಪ್​ಗಳನ್ನು ನಿಷೇಧಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಉದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡುವ ಮೂಲಕ ಈ ವಿಷಯದಲ್ಲಿ ತಪ್ಪು ಮಾಡಿದ್ದೀರಿ. ಅದನ್ನು ಸರಿಪಡಿಸಿಕೊಳ್ಳಿ ಎಂದು ತಾಕೀತು ಮಾಡಿದೆ.

 

ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಕೌನ್ಸೆಲರ್​ ಜಿ ರಾಂಗ್​, ಈ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಚೀನಾದ ವಾಣಿಜ್ಯೋದ್ಯಮಿಗಳ ಹಿತಕಾಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಟಿಕ್​ಟಾಕ್​ ಸೇರಿ ಚೀನಾ ಮೂಲದ 59 ಆಯಪ್​ಗಳ ಬಳಕೆಯನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ಈಗ ನಿಷೇಧಿತ ಆಯಪ್​ಗಳ ತದ್ರೂಪಿಗಳಂತೆ ಕಾರ್ಯನಿರ್ವಹಿಸುವ ಟಿಕ್​ಟಾಕ್​ ಲೈಟ್​, ಶೇರ್​ಇಟ್​ ಲೈಟ್​ ಸೇರಿ 47 ಆಯಪ್​ಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಭಾರತ ಇತ್ತೀಚೆಗೆ ನಿರ್ಣಯ ಕೈಗೊಂಡಿದೆ. ಭಾರತದ ಈ ಕ್ರಮ ಚೀನಾವನ್ನು ಕೆರಳಿಸಿದೆ.

 

ವಿಶೇಷವಾಗಿ ವಿಚ್ಯಾಟ್​ (WeChat) ಆಯಪ್​ ನಿಷೇಧಿಸಿರುವ ಭಾರತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಿ ರಾಂಗ್​, ಆಯಪ್​ಗಳ ನಿಷೇಧ ಕುರಿತ ಕ್ರಮಗಳ ಬಗೆಗಿನ ವರದಿಗಳನ್ನು ನಾವು ಗಮನಿಸಿದ್ದೇವೆ. ಭಾರತ ಸರ್ಕಾರ ಜೂ.29ರಂದು ವಿಚ್ಯಾಟ್​ ಸೇರಿ ಚೀನಾ ಮೂಲದ 59 ಆಯಪ್​ಗಳನ್ನು ನಿಷೇಧಿಸಿತ್ತು. ಇದರಿಂದಾಗಿ ಚೀನಾ ಕಂಪನಿಗಳ ನ್ಯಾಯಸಮ್ಮತವಾದ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದವರು ಭಾರತಕ್ಕೆ ಸೂಕ್ತ ರೀತಿಯಲ್ಲಿ ಮನವಿ ಅರ್ಪಿಸಿದ್ದಾರೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಕೋರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

 

ಈ ವಿಷಯವಾಗಿ ಇರುವ ಅಂತಾರಾಷ್ಟ್ರೀಯ ನಿಯಮಗಳು ಮತ್ತು ನೈತಿಕತೆಯನ್ನು ಪಾಲಿಸುವಂತೆ ಅವರು ಭಾರತವನ್ನು ಆಗ್ರಹಿಸಿದ್ದಾರೆ. ಬಾಹ್ಯ ಸಹಕಾರದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನು, ನಿಯಮ-ನಿಬಂಧನೆಗಳನ್ನು ಪಾಲಿಸುವಂತೆ ಚೀನಾದ ಕಂಪನಿಗಳಿಗೆ ನಾವು ಸಲಹೆ ಕೊಡುತ್ತಲೇ ಇರುತ್ತೇವೆ. ಇದೀಗ ಅವುಗಳ ನ್ಯಾಯಸಮ್ಮತ ಹಕ್ಕು ಮತ್ತು ಚೀನಾದ ವಾಣಿಜ್ಯೋದ್ಯಮಿಗಳದ್ದು ಸೇರಿ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಯುವುದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಚೀನಾ ಮೂಲದ ಆಯಪ್​ಗಳನ್ನು ನಿಷೇಧಿಸುವ ಭಾರತದ ಕ್ರಮ ಉದ್ದೇಶಪೂರ್ವಕ ಹಸ್ತಕ್ಷೇಪ ಎಂದು ಬಣ್ಣಿಸಿರುವ ಅವರು, ಚೀನಾದ ಕಂಪನಿಗಳ ವಿರುದ್ಧ ಈ ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರುವುದು ಭಾರತದ ಹಿತಾಸಕ್ತಿ ದೃಷ್ಟಿಯಿಂದ ಸರಿಯಲ್ಲ. ಅಷ್ಟೇ ಅಲ್ಲ, ಚೀನಾದ ಕಂಪನಿಗಳ ಹಿತಾಸಕ್ತಿ ಕಾಪಾಡಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆವು ಎಂದು ಬೆದರಿಕೆ ಹಾಕಿದ್ದಾರೆ.

 

Find Out More:

Related Articles: