ಇಂದಿನ ಸರ್ವ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಕ್ಷಗಳಿಗೆ ತಿಳಿಸಿದ ಮಾಹಿತಿ ಏನು ಗೊತ್ತಾ..?

Soma shekhar

ಲಡಾಕ್ ನ ಗಡಿ ವಿಚರದಲ್ಲಿ ಚೀನಾ ಕ್ಯಾತೆ ತೆಗೆದಿರುವಂತಹ ಸಂದರ್ಭದಲ್ಲಿ ಚೀನೀಯರು ಭಾರತದ ಯೋಧರಮೇಲೆ ದಾಳಿಮಾಡಿ 20 ಜನ ಯೋಧರನ್ನು ಹತ್ಯ ಮಾಡಿದ್ದಾರೆ ಈ ಕುರಿತು ದೇಶದಲ್ಲಿ ಬಹಳ ಚರ್ಚೆಯಾಗುತ್ತಿದ್ದು ವಿರೋಧ ಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು ತಮ್ಮ ಇರುವಿಕೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರತಿಪಕ್ಷಗಳಿಗೆ  ಈ ದಾಳಿಯ ಕುರಿತಾಗಿ ಚರ್ಚಿಸಲು ಪ್ರಧಾನಿ ಮೋದಿ ಇಂದು ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು. ಈ ಒಂದು ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. 

 

ಡಾಖ್​ನ ಪೂರ್ವ ಭಾಗದ ವಾಸ್ತವ ಗಡಿರೇಖೆಯ ಬಳಿಯ ಭಾರತದ ಭೂಭಾಗವವನ್ನು ಪ್ರವೇಶಿಸಿ ಚೀನಿ ಯೋಧರು ಅತಿಕ್ರಮಿಸಿರಲಿಲ್ಲಚೀನಿ ಯೋಧರು ನಮ್ಮ ಭೂಭಾಗವನ್ನು ಅತಿಕ್ರಮಿಸಿಲ್ಲ ಅಥವಾ ನಮ್ಮ ಯಾವುದೇ ಠಾಣೆಯನ್ನೂ ವಶಪಡಿಸಿಕೊಂಡಿಲ್ಲ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಭಾರತ ಮಾತೆಯನ್ನು ಹೆದುರಿಸಲು ಪ್ರಯತ್ನಿಸಿದವರಿಗೆ ತಕ್ಕ ಪಾಠ ಕಲಿಸಲಾಗಿದೆ. ದೇಶದ ಗಡಿರಕ್ಷಣೆಗಾಗಿ ಏನೆಲ್ಲ ಮಾಡಬೇಕೋ ಅದನ್ನು ನಮ್ಮ ಯೋಧರು ಮಾಡುತ್ತಿದ್ದಾರೆ. ಯೋಧರ ನಿಯೋಜನೆ, ಕಾರ್ಯಾಚರಣೆ ಅಥವಾ ಪ್ರತಿಕಾರ್ಯಾಚರಣೆಯಾಗಿರಲಿ ಎಲ್ಲವನ್ನೂ ಅವರು ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 

ವಾಸ್ತವ ಗಡಿರೇಖೆಯ ಬಳಿ ಚೀನಾ ಎಸಗಿರುವ ಕೃತ್ಯದಿಂದ ಇಡೀ ರಾಷ್ಟ್ರಕ್ಕೇ ನೋವಾಗಿದೆ ಎಂದು ಪ್ರಧಾನಿ ಹೇಳಿದರು. ಅಲ್ಲದೆ, ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಮೂಲಸೌಕರ್ಯದಿಂದಾಗಿ ನಮ್ಮ ಪೆಟ್ರೋಲಿಂಗ್​ ಸಾಮರ್ಥ್ಯ ಹೆಚ್ಚಾಗಿರುವುದಾಗಿ ತಿಳಿಸಿದರು.

 

ಭಾರತ ಶಾಂತಿಪ್ರಿಯ ರಾಷ್ಟ್ರ. ನೆರೆಹೊರೆಯವರೊಂದಿಗೆ ಸ್ನೇಹ, ಸೌಹಾರ್ದ ಸಂಬಂಧ ಬಯಸುತ್ತದೆ. ನಮ್ಮ ಪಾಲಿಗೆ ಸಾರ್ವಭೌಮತ್ವವೂ ತುಂಬಾ ಮುಖ್ಯ. ಅದಕ್ಕೆ ಧಕ್ಕೆ ಒದಗಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಕಾಂಗ್ರೆಸ್​ನ ಸೋನಿಯಾ ಗಾಂಧಿ, ಎನ್​ಷಿಪಿಯ ಶರದ್​ ಪವಾರ್​, ಟಿಆರ್​ಎಸ್​ನ ಕೆ. ಚಂದ್ರಶೇಖರ ರಾವ್​, ಜೆಡಿಯುನ ನಿತೀಶ್​ ಕುಮಾರ್​, ಡಿಎಂಕೆಯ ಎಂ.ಕೆ. ಸ್ಟಾಲಿನ್​, ವೈಎಸ್​ಆರ್​ ಕಾಂಗ್ರೆಸ್​ನ ಜಗನ್​ಮೋಹನ್​ ರೆಡ್ಡಿ ಮತ್ತು ಶಿವಸೇನೆಯ ಉದ್ಧವ್​ ಠಾಕ್ರೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಗಲ್ವಾನ್​ ಕಣಿವೆ ಘರ್ಷಣೆ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಬೆಂಬಲಿಸಲು ಎಲ್ಲ ಪ್ರತಿಪಕ್ಷಗಳು ಮತ್ತು ಎನ್​ಡಿಎನ ಮಿತ್ರಪಕ್ಷಗಳು ಸಮ್ಮತಿಸಿದವು.

 

ನಮ್ಮ ಒಂದು ಇಂಚಿನ ಭೂಭಾಗದ ಮೇಲೆ ಕಣ್ಣು ಹಾಕಿದವರಿಗೆ ಸಮರ್ಪಕ ಉತ್ತರ ಕೊಡಲು ನಾವು ಸಮರ್ಥರಾಗಿದ್ದೇವೆ. ವಿವಿಧ ವಲಯಗಳಲ್ಲಿ ಏಕಕಾಲಕ್ಕೆ ಎದುರಾಗಬಹುದಾದ ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನಮ್ಮ ಸೇನಾಪಡೆಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದ್ದು, ಭಾರತೀಯ ಸೇನಾಪಡೆ ಸರ್ವಸನ್ನದ್ಧ ಸ್ಥಿತಿಯಲ್ಲಿದೆ ಎಂದು ಹೇಳಿದ್ದರು.

 

 

Find Out More:

Related Articles: