ನಾಳೆಯಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್: ಪಾಸ್ ಹೊಂದಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ..!!

Soma shekhar

ವೈರಸ್ ಅನ್ನು ತಡೆಯುವ ಉದ್ದೇಶದಿಂದ ಇಡೀ ದೇಶವೇ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ದೇಶದ ಎಲ್ಲಾ ಸೇವೆಗಳು ಸ್ಥಗಿತಗೊಳಿಸಲಾಗಿತ್ತು. ಆದರೆ  ನಾಲ್ಕನೇ ಹಂತದ ಲಾಕ್ ಡೌನ್ ಅಲ್ಲಿ ಸಾರಿಗೆ ವ್ಯವಸ್ಥೆಗೆ ಅವಕಾಶವನ್ನು ಕಲ್ಪಸಲಾಗಿದೆ. ಇದರನ್ವಯ ಬೆಂಗಳೂರಿನಲ್ಲಿ ಸಾಕಷ್ಟು ವಾಹನಗಳ ಸಂಚಾರಕ್ಕೆ ಅವಕಾಶವನ್ನು ಮಾಡಿ ಕೊಡಲಾಗಿದೆ ಅದೇ ರೀತಿ ನಾಳೆಯಿಂದ ಬಿಎಂಟಿಸಿ ಬಸ್   ಸಂಚಾರಕ್ಕೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ ಆದರೆ ಬಿಎಂಟಿಸಿ ಕೆಲವು ಪ್ರಯಾಣಿಕರಿಗೆ ಕೆಲವು  ನಿಯಮಗಳನ್ನು ಹಾಕಿಕೊಂಡಿದೆ ಅಷ್ಟಕ್ಕೂ ಬಿಎಂಟಿಸಿ ಹಾಕಿಕೊಂಡಿರುವ ನಿಯಮಗಳೇನು ಗೊತ್ತಾ..?

 

ಕೊರೋನಾ ವೈರಸ್​ ಅಟ್ಟಹಾಸ ಹೆಚ್ಚಾಗಿರುವುದರಿಂದ ದೇಶದೆಲ್ಲೆಡೆ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ನಾಳೆಯಿಂದ ಬಸ್​ಗಳು, ಕ್ಯಾಬ್, ಆಟೋ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ನಾಳೆಯಿಂದ ಬಿಎಂಟಿಸಿ ಬಸ್​ಗಳ ಸಂಚಾರ ಶುರುವಾಗಲಿದೆ. ಒಂದು ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಬಿಎಂಟಿಸಿ ಬಸ್​ನಲ್ಲಿ ಸಂಚರಿಸಲು ಏಕಬೆಲೆಯ ಪಾಸ್​ಗಳನ್ನು ವಿತರಿಸಲಾಗುತ್ತದೆ. ಆ ಪಾಸ್​ಗಳನ್ನು ಹೊಂದಿವರಿಗೆ ಮಾತ್ರ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಬಸ್​ನಲ್ಲಿ ಟಿಕೆಟ್ ವಿತರಣೆ ಮಾಡುವುದರಿಂದ ಕೊರೋನಾ ಹರಡುವ ಅಪಾಯ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ದಿನದ ಪಾಸ್​, ವಾರದ ಪಾಸ್​, ತಿಂಗಳ ಪಾಸ್​ ಇರುವವರಿಗೆ ಮಾತ್ರ ಬಸ್​ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ 300 ರೂ. ಮುಖಬೆಲೆಯ ಬಿಎಂಟಿಸಿ ಪಾಸ್​ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಪಾಸ್​ ಪಡೆದರೆ ವಾರ ಪೂರ್ತಿ ಬಿಎಂಟಿಸಿ ಬಸ್​ಗಳಲ್ಲಿ ಓಡಾಟ ಮಾಡಬಹುದು. ಸಮರ್ಪಕ ಮತ್ತು ಸುರಕ್ಷಿತ ಸಾರಿಗೆ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುವ ಮತ್ತು ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೊದಲ ಹಂತವಾಗಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ರಾಜ್ಯಾದ್ಯಂತ ಕರ್ಫ್ಯೂ ಇರುವುದರಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಬಸ್​ಗಳು ಸಂಚರಿಸಲಿವೆ. 300 ರೂ. ಮುಖಬೆಲೆಯ ವಾರದ ಪಾಸ್​ಗಳನ್ನು ಪಡೆಯಲು ಭಾವಚಿತ್ರ ಇರುವ ಯಾವುದಾದರೂ ಗುರುತಿನ ಚೀಟಿಯನ್ನು ನೀಡಬೇಕು. ಪಾಸುಗಳನ್ನು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್​ ನಿಲ್ದಾಣಗಳಲ್ಲಿ ವಿತರಿಸಲಾಗುತ್ತದೆ.ಬಸ್ನಲ್ಲಿ ಪ್ರಯಾಣದ ಕ್ರಮಗಳು

  • ಒಂದು ಬಸ್ ನಲ್ಲಿ ಕೇವಲ 30 ಪ್ರಯಾಣಿಕರು ಮಾತ್ರ ಇರಬೇಕು.

 

  • ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ.

 

  • ಮಾಸ್ಕ್ ಇಲ್ಲದೆ ಬಸ್ ಹತ್ತುವಂತಿಲ್ಲ.

 

  • ಬಸ್ಸಿನಲ್ಲಿ ಸಾಮಾಜಿಕ ಅಂತರ ಕಡ್ಡಾಯ.

 

  • ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಬೇಕು.

 

  • ಎಸಿ ಬಸ್ ಸಂಚಾರ ಸ್ಥಗಿತ.

 

  • ಭಾನುವಾರ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತ.

 

  • ಪ್ರಯಾಣಿಕರು ಗುರುತಿನ ಚೀಟಿ ಸಮೇತ ಬರುವಂತೆ ಸೂಚನೆ.

 

Find Out More:

Related Articles: