ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದೆ ಚಿತ್ರರಂಗ

Soma shekhar

ಅಷ್ಟಕ್ಕೂ ಸರ್ಕಾರದಿಂದ ಬರುವ ಸಿಹಿ ಸುದ್ದಿ ಏನು ಗೊತ್ತಾ..? 

 

ಕೊರೋನಾ ದಿಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದ ದೇಶದಲ್ಲಿ ಯಾವುದೇ ಉದ್ಯಮಗಳಾಗಲೀ ಯಾವುದೇ ಕೈಗಾರಿಕೆಗಳಾಗಲೀ ನಡೆಯದೆ ಸ್ಥಬ್ದವಾಗಿತ್ತು.  ಇದರಂತೆ ಸಿನಿಮಾ ರಂಗವೂ ಕೂಡ ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡದೆ ಯಾವುದೇ ಚಿತ್ರಗಳನ್ನು ಚಿತ್ರೀಕರಣವನ್ನು ನಡೆಸದೆ ಸ್ಥಗಿತಗೊಳಿಸಿ ಕೊರೋನಾ ವಿರುದ್ಧ ಹೋರಾಡಲು ಸಹಕರಿಸಿತ್ತು. ಆದರೆ ದೇಶದಲ್ಲಿ ಮೇ 3ರಿಂದ ಕೆಲವು ಭಾಗಗಳಲ್ಲಿ ಲಾಕ್ ಡೌನ್ ಸಡಿಲಿಕೆಯನ್ನು ಮಾಡಲಾಗಿದೆ. ಇದರ ಹಿನ್ನಲೆ ಚಿತ್ರರಂಗ ಮೈಕೊಡವಿ ಎದ್ದು ನಿಲ್ಲುವ ತವಕದಲ್ಲಿ ಇದೆ 

 

 

ಲಾಕ್ಡೌನ್ ನಿಂದಾಗಿ ಸ್ಥಗಿತಗೊಂಡಿರುವ ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್ ಗಳಿಗೆ ಸರ್ಕಾರ ಅನುಮತಿ ನೀಡುತ್ತದೆಯೋ? ಇಲ್ಲವೋ ಎನ್ನುವುದು ಮಂಗಳವಾರ ತಿಳಿಯಲಿದೆ. ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್, ಸಿನಿಮಾ, ಧಾರಾವಾಹಿ ಶೂಟಿಂಗ್ ಯಾವಾಗ ಮಾಡಬಹುದು ಎಂದು ನಾಳೆ ಸಿಎಂ ಜೊತೆ ಚರ್ಚೆ ಮಾಡಿ ಹೇಳುತ್ತೇವೆ ಎಂದು ತಿಳಿಸಿದರು.

 

 

ಶೂಟಿಂಗ್ ವೇಳೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದರ ಬಗ್ಗೆ ನಾಳೆ ಚರ್ಚೆ ಮಾಡಿ ಪ್ರಕಟಣೆ ಮಾಡುತ್ತೇವೆ. ಜೊತೆಗೆ ಕೊರೊನಾ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗ ಬಿಬಿಎಂಪಿ ವಾರ್ ರೂಂ ಬಗ್ಗೆ ಕೇಂದ್ರ ಹಾಗೂ ಹಲವು ರಾಜ್ಯಗಳು ಮಾಹಿತಿ ಕೇಳಿದೆ ಎಂದು ಮಾಹಿತಿ ನೀಡಿದರು.

 

 

ಬೆಂಗಳೂರಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಸೇರಿಸಿ ಏಳು ವಲಯ ಮಾಡುತ್ತೇವೆ. ವಲಯವಾರು ವಿಂಗಡಣೆ ಮಾಡುವ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತೇವೆ. ಇಲ್ಲವಾದರೆ ಬೆಂಗಳೂರು ಒಂದು ಕಡೆ ಕೊರೊನಾ ಇದ್ದರೆ, ಇಡೀ ಬೆಂಗಳೂರು ರೆಡ್ ಝೋನ್ ಎಂದು ಘೋಷಣೆ ಆಗುತ್ತದೆ. ಅದನ್ನು ತಪ್ಪಿಸಲು ವಲಯವಾರು ವಿಂಗಡಣೆ ಮಾಡುತ್ತೇವೆ. ಈ ವಿಚಾರವಾಗಿ ಸಂಜೆ ಬಿಬಿಎಂಪಿ ಕಮಿಷನರ್ ಜೊತೆ ಮೀಟಿಂಗ್ ನಡೆಯಲಿದ್ದು ಅಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದರು.

 

 

ಮೇ 11ರಿಂದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುವು ಮಾಡಿಕೊಂಡುವಂತೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಭಾನುವಾರ ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಕೊರೊನಾದಿಂದ ಮಾರ್ಚ್ 19ರಿಂದ ಕಿರುತೆರೆಯ ಶೂಟಿಂಗ್ಗೆ ಬ್ರೇಕ್ ಹಾಕಿತ್ತು. ಹೀಗಾಗಿ ಮತ್ತೆ ರಾಜ್ಯ ಸರ್ಕಾರದ ವತಿಯಿಂದ ಶೂಟಿಂಗ್ ಪ್ರಾರಂಭಿಸಲು ಅನುಮತಿ ಕೊಡಿ ಎಂದು ಎಸ್.ವಿ.ಶಿವಕುಮಾರ್ ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರೆ.

 

 

ಮೇ 4 ರಂದು ರಾಜ್ಯದಲ್ಲಿ ಗ್ರೀನ್ ಮತ್ತು ಆರೆಂಜ್ ಝೋನ್ಗಳಲ್ಲಿ ಲಾಕ್ಡೌನ್ ಸಡಿಲಿಕೆ ಆಗುತ್ತಿದೆ. ಇದೇ ನಿಟ್ಟಿನಲ್ಲಿ ನಮ್ಮ ಕ್ಷೇತ್ರಕ್ಕೂ ಸಡಿಲಿಕೆ ಮಾಡಬೇಕು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಒಳ್ಳೆಯದಾಗುತ್ತದೆ. ಅಂದಾಜು 120 ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ಅನುಮತಿ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು.

Find Out More:

Related Articles: