ನವದೆಹಲಿ: ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯಾ ಮತ್ತು ಬಾಬ್ರಿ ಮಸೀದಿ ಭೂ ಪ್ರಕರಣದ ತೀರ್ಪು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು ಇದೀಗ ರಾಷ್ಟ್ರಾದ್ಯಂತ ಜನರ ಕುತೂಹಲಕ್ಕೆ ಕಾರಣವಾಗಿದೆ. ಅಯೋಧ್ಯಾ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಪಟ್ಟ ಕೊನೇ ಹಂತದ ವಿಚಾರಣೆ ನಿನ್ನೆಯಿಂದ ಸುಪ್ರೀಂಕೋರ್ಟ್ನಲ್ಲಿ ಪ್ರಾರಂಭವಾಗಿದ್ದು ನವೆಂಬರ್ 17ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.
ಈ ಪ್ರಕರಣದ ವಿಚಾರಣೆ ಪ್ರಾರಂಭವಾದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಅಯೋಧ್ಯೆಯಲ್ಲಿ ಡಿಸೆಂಬರ್ 10 ರವರೆಗೆ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಿ ಸ್ಥಳೀಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ ಸ್ಥಳದಲ್ಲಿ ಬಿಗಿ ಭದ್ರತೆಯನ್ನೂ ನೀಡಲಾಗಿದೆ. ನಿಷೇಧಾಜ್ಞೆ ಹೇರಲಾದ 24 ಗಂಟೆಯೊಳಗೆ ಕೆಲವು ಹಿಂದು ಸಂತರು ಅಯೋಧ್ಯಾ ವಿಭಾಗೀಯ ಆಯುಕ್ತ ಮನೋಜ್ ಮಿಶ್ರಾ ಅವರನ್ನು ಭೇಟಿಯಾಗಿ, ದೀಪಾವಳಿಯಂದು ಅಯೋಧ್ಯಾ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇದೀಗ ಈ ಅಂಶ ಕುತೂಹಲ ಮತ್ತು ಆದೇಶ ಏನಾಗುತ್ತದೆ ಎಂದು ಕಾಯುತ್ತಿದ್ದಾರೆ.
ಈ ಬೆನ್ನಲ್ಲೇ ವಿಶ್ವ ಹಿಂದು ಪರಿಷತ್ ನಿಯೋಗ ಕೂಡ ಮನೋಜ್ ಮಿಶ್ರಾ ಅವರನ್ನು ಭೇಟಿಯಾಗಿ, ಹಿಂದು ಸಂತರ ಬೇಡಿಕೆಗೆ ತಾವೂ ಬೆಂಬಲ ನೀಡುವು ದಾಗಿ ಪತ್ರ ಸಲ್ಲಿಸಿದ್ದಾರೆ. ತನ್ಮಧ್ಯೆ ವಿಭಾಗೀಯ ಆಯುಕ್ತರು ಅನುಮತಿ ಕೊಟ್ಟರೆ ನಾವೂ ಅಯೋಧ್ಯಾ ಸ್ಥಳದಲ್ಲಿ ನಮಾಜ್ ಮಾಡುತ್ತೇವೆ ಎಂದು ಬಾಬ್ರಿ ಕ್ರಿಯಾ ಸಮಿತ ಹೇಳಿಕೊಂಡಿದೆ . ಅಯೋಧ್ಯೆ ಯಲ್ಲಿ ಪಟಾಕಿ ಮಾರಾಟ ಮಾಡುವುದನ್ನು, ಹೊಡೆಯುವುದನ್ನು ನಿಷೇಧಿಸಿ ಜಿಲ್ಲಾ ಮ್ಯಾಜಿ ಸ್ಟ್ರೇಟ್ ಅನೂಜ್ ಕುಮಾರ್ ಝಾ ಭಾನುವಾರವೇ ಆದೇಶವಯ ಹೊರಡಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ನಲ್ಲೂ ಪೋಸ್ಟ್ ಮಾಡಿದ್ದಾರೆ. ಆದ್ದರಿಂದ ಇದು ಭಾರೀ ವೈರಲ್ ಆಗಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ಅಯೋಧ್ಯಾ ಭೂ ವಿವಾದ ವಿಚಾರಣೆ ನಡೆಸಲಿದೆ. ಡಿಸೆಂಬರ್ ವರೆಗೆ ತೀರ್ಪೀಗಾಗಿ ಕಾಯಲೇ ಬೇಕಾಗಿದೆ.