ಲಾಕ್ಡೌನ್ ಸಮಯದ ವೇತನವನ್ನು ಕಡಿತಗೊಳಿಸಬಾರದು: ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಸೂಚನೆ

Soma shekhar

ಕೊರೋನಾ ವೈರಸ್ ಅನ್ನು ಹರಡುವುದನ್ನು ತಡೆಯುವ ಉದ್ದೇಶದಿಂದ ಭಾರತದಲ್ಲಿ ಲಾಕ್ಡೌನ್ ಮಾಡಲಾಗಿದೆ. ಇದರಿಂದ ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಕಾರ್ಮಿಕರಿಗೆ ಕಾಡುತ್ತಿರುವ ಆತಂಕದ ಸಂಗತಿಯೆಂದರೆ ಖಾಸಗೀ ಕಂಪನಿಗಳು ನಮ್ಮನ್ನು ಕೆಲಸದಿಂದ ಎಲ್ಲಿ ತೆಗೆದು ಬಿಡುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿದೆ ಇದನ್ನು ಗನಿಸಿದ ಕಾರ್ಮಿಕ ಸಚಿವಾಲಯ ಕೆಲವು ಸಲಹೆಗಳನ್ನು ಜಾರಿಗೊಳಿಸಿದೆ ಅಷ್ಟಕ್ಕೂ ಆ ಸಲಹೆ ಏನು ಗೊತ್ತಾ? ಇಲ್ಲಿದೆ ನೋಡಿ.

 

 

ಕೊರೋನಾ ಮಹಾಮಾರಿಗೆ ನಲುಗಿರುವ ಭಾರತದಲ್ಲಿ ಲಾಕ್ ಡೌನ್ ಮುಂದುವರೆದಿದೆ. ಈ ಕಾರಣಕ್ಕಾಗಿ, ಅನೇಕ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ನೌಕರರು ತಮ್ಮ ಕಚೇರಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿ ನಾವೆಲ್ಲರೂ ಕೆಲಸ ಕಳೆದುಕೊಳ್ಳುತ್ತೇವೋ, ಇಷ್ಟು ವರ್ಷ ಸಂಪಾದಿಸಿರುವ ಪಿ ಎಫ್ ಹಣ, ಸಿಗಬೇಕಾಗಿರುವ ಪಿಂಚಣಿ ಇವೆಲ್ಲದರ ಬಗ್ಗೆ ಭೀತಿಯಲ್ಲಿ ಅನೇಕರಿರುವುದು ನಿಜವಾದ ಸಂಗತಿ .

 

ಈ ಸಂಕಷ್ಟವನ್ನು ಗಮನಿಸಿರುವ ಕಾರ್ಮಿಕ ಸಚಿವಾಲಯವು  ಕಂಪನಿಗಳಿಗೆ ಸಲಹೆಯೊಂದನ್ನು ಜಾರಿಗೊಳಿಸಿದೆ . ಇಪಿಎಫ್‌ಒ ಕಾರ್ಮಿಕ ಸಚಿವಾಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಾತೆದಾರರು ಮತ್ತು ಕಂಪನಿಗಳಿಗೆ ಎಸ್‌ಎಂಎಸ್ ಮೂಲಕ ಕಳುಹಿಸುತ್ತಿದೆ .

 

ಇಪಿಎಸ್‌ಒ ಇಪಿಎಸ್ ಪಿಂಚಣಿದಾರರ ಪಿಂಚಣಿಯನ್ನು ಸಮಯಕ್ಕೆ ಸರಿಯಾಗಿ ನೀಡುವಂತೆ ನಿರ್ದೇಶನ ನೀಡಿದೆ . ಕೊರೋನಾ ವೈರಸ್ ಮಹಾಮಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು , ನೌಕರರ ಭವಿಷ್ಯ ನಿಧಿ ಸಂಸ್ಥೆ ( ಇಪಿಎಫ್‌ಒ ) ಇಪಿಎಸ್ ( ನೌಕರರ ಪಿಂಚಣಿ ಯೋಜನೆ ) ಅಡಿಯಲ್ಲಿ 65 ಲಕ್ಷ ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಸಮಯಕ್ಕೆ ಪಾವತಿಸುವಂತೆ ನಿರ್ದೇಶಿಸಿದೆ .

 

ಸರ್ಕಾರದ ಸಲಹೆ ಏನು ?

ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ . ಈ ಸಲಹೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ನೀಡಿದ್ದು , ಕರೋನಾ ವೈರಸ್ ಅಥವಾ ಕೋವಿಡ್ -19 ಕಾರಣದಿಂದ ನೌಕರರನ್ನು ಕೆಲಸದಿಂದ ತೆಗೆದುಹಾಕಬಾರದು ಅಥವಾ ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಖಡಕ್ ಆದೇಶ ಹೊರಡಿಸಿದ್ದಾರೆ .

 

ಕರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ನೌಕರನು ರಜೆ ತೆಗೆದುಕೊಂಡರೂ ಅದನ್ನು ಅವನ ರಜೆ ಎಂದು ಪರಿಗಣಿಸಬಾರದು ಮತ್ತು ಅವನ ಸಂಬಳವನ್ನು ಕಡಿತಗೊಳಿಸಬಾರದು . ಇದಲ್ಲದೆ , ಈ ಅನಾಹುತದಿಂದಾಗಿ ಕಚೇರಿಯನ್ನು ಮುಚ್ಚಿದರೆ , ಅದರ ನೌಕರರು ಕರ್ತವ್ಯದಲ್ಲಿದ್ದಾರೆ ಎಂದು ಭಾವಿಸಬೇಕು ಎಂಬುದನ್ನು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ .

 

 

Find Out More:

Related Articles: