ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ಜನರಿಗೆ ಏನು ತಿಳಿಸಿದ್ದಾರೆ ಗೊತ್ತಾ?
ಕೊರೋನಾ ವೈರಸ್ ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯನ್ನು ಮಾಡಿದ್ದಾರೆ ಈ ಒಂದು ಸಂದರ್ಭದಲ್ಲಿ ಮನೆಯಿಂದ ಯಾರು ಕೂಡ ಹೊರಬರದಂತೆ ಆದೇಶವನ್ನು ಕೂಡ ನೀಡಿದ್ದಾರೆ ಇದರ ಜೊತೆಗೆ ’ಮನ್ ಕಿ ಬಾತ್’ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋದಿ ಜನರಿಗೆ ಏನು ತಿಳಿಸಿದ್ದಾರೆ ಇಲ್ಲಿದೆ ನೋಡಿ.
ನಿಮ್ಮ ಕುಟುಂಬಗಳ ರಕ್ಷಣೆಗಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ’ಮನ್ ಕಿ ಬಾತ್’ ರೇಡಿಯೋ ಭಾಷಣ ಮಾಡಿದ ಅವರು, ಭಾಷಣದ ವೇಳೆ ಕೋರೋನಾ ಸೋಂಕಿತರು ಮತ್ತು ಸೋಂಕಿನಿಂದ ಚೇತರಿಸಿಕೊಂಡವರೊಂದಿಗೆ, ನರ್ಸ್, ವೈದ್ಯರೊಂದಿಗೆ ಮಾತನಾಡಿದ್ದಾರೆ.
ಕೋರೋನಾ ವೈರಸ್ ನಿಂದಾಗಿ ಭಯಂಕರ ಸಂಕಟ ಆರಂಭವಾಗಿದೆ. ಇದಕ್ಕಾಗಿ ದೇಶದ ಜನರ ಕ್ಷಮೆ ಕೇಳುತ್ತೇನೆ. ಸೋಂಕು ತಡೆ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವ ಸೀಮೆ ಪ್ರಧಾನಿ ಇಂತಹ ನಿರ್ಣಯ ಕೈಗೊಂಡಿದ್ದಾರೆ. ನಮ್ಮನ್ನು ಮನೆಗಳಲ್ಲಿ ಬಂಧಿಯಾಗಿರುವಂತೆ ಮಾಡಿದ್ದಾರೆ ಎಂದೆಲ್ಲಾ ನನ್ನ ಸೋದರ ಸೋದರಿಯರು ಭಾವಿಸಿರುತ್ತಾರೆ. ನಿಮ್ಮ ಕುಟುಂಬಗಳ ರಕ್ಷಣೆಗೆ ಇಂತಹ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯ ಯಾವುದು ಇಲ್ಲ. ಎಲ್ಲಾ ಸುಖಗಳ ಮೂಲವೇ ಆರೋಗ್ಯವಾಗಿದೆ. ಮನೆಯಲ್ಲೇ ಉಳಿದು ಕೋರೋನಾ ವಿರುದ್ಧ ಹೋರಾಡಿ. ಕೋರೋನಾ ವಿರುದ್ಧ ಹೋರಾಡುವವರಿಗೆ ಬೆಂಬಲ ನೀಡೋಣ. ನರ್ಸ್, ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಉತ್ಸಾಹ ಹೆಚ್ಚು ಮಾಡಬೇಕಿದೆ .ಇದಕ್ಕಾಗಿ ನಾನು ನರ್ಸ್ ಸೇರಿದಂತೆ ಹಲವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊರೋನಾದಿಂದ ಚೇತರಿಸಿಕೊಂಡವರು, ವೈದ್ಯಕೀಯ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ ಮೋದಿ, ಲಾಕ್ ಡೌನ್ ನಿಯಮ ಉಲ್ಲಂಘಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಬೇಜವಾಬ್ದಾರಿಯಿಂದಾಗಿ ಬೇರೆಯವರಿಗೆ ತೊಂದರೆಯಾಗುತ್ತದೆ. ಲಾಕ್ ಡೌನ್ ಉಲ್ಲಂಘಿಸಿದರೆ ಎಲ್ಲವೂ ದುಬಾರಿಯಾಗುತ್ತದೆ. ಲಾಕ್ ಡೌನ್ ನಿಯಮ ಪಾಲಿಸಿ ಎಂದು ತಿಳಿಸಿದ್ದಾರೆ.
ಭಾರತ್ ಬಂದ್ ನಿಂದಾಗಿ ಸಾಕಷ್ಟು ತೊಂದರೆಯಾಗಿದೆ. ದೇಶದಲ್ಲಿ ಲಾಕ್ ಡೌನ್ ಅವಶ್ಯಕತೆ ಇದೆ. ಕೆಲವರ ಬೇಜವಾಬ್ದಾರಿಯಿಂದ ಬೇರೆಯವರಿಗೆ ತೊಂದರೆ ಆಗಬಾರದು. ಲಕ್ಷ್ಮಣರೇಖೆಯನ್ನು ಮೀರಿ ಅನಗತ್ಯವಾಗಿ ಹೊರಗೆ ಬರಬೇಡಿ. ನಿಮ್ಮ ಜೀವ ಉಳಿಸಲು ಲಾಕ್ ಡೌನ್ ಜಾರಿ ಮಾಡಲಾಗಿದ್ದು ನಿಯಮ ಪಾಲಿಸಿ ಎಂದು ಹೇಳಿದ್ದಾರೆ.