ಖ್ಯಾತ ನಟಿ ತಾಪ್ಸಿ ಇದೀಗ ಶಬಾಷ್ ತಾಪ್ಸಿ ಆಗಿದ್ದಾರೆ !

Soma shekhar
ಟಾಲಿವುಡ್ ಖ್ಯಾತ ನಟಿ ತಾಪ್ಸಿ ಒಂದು ಕಾಲದಲ್ಲಿ ಮಿಂಚಿದ ನಟಿ. ಇದೀಗ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಶಬಾಷ್ ತಾಪ್ಸಿ ಯಾಗಿ ಬರುತ್ತಿದ್ದಾರೆ. ನಿಜ ಜೀವನದಲ್ಲಾಗಲೀ, ಸಿನಿಮಾದಲ್ಲಾಗಲೀ ನಟಿ ತಾಪ್ಸಿ ಪನ್ನು ಅವರಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಈಗಾಗಲೇ ಕೆಲವು ಕ್ರೀಡಾಧಾರಿತ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಸೂರ್ವ’, ‘ಸಾಂಡ್ ಕಿ ಆಂಕ್’ ಮುಂತಾದವುಗಳೇ ಉದಾಹರಣೆ.
 
ಇಷ್ಟೇ ಅಲ್ಲದೆ, ಭಾರತೀಯ ಮಹಿಳೆಯರ ಏಕದಿನ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾದಲ್ಲಿ ತಾಪ್ಸಿ ನಟಿಸುತ್ತಾರೆ ಎಂಬ ಸುದ್ದಿ ಬಹಳ ದಿನಗಳ ಹಿಂದೆಯೇ ಹಬ್ಬಿತ್ತು. ಆದರೆ ಅಧಿಕೃತವಾಗಿರಲಿಲ್ಲ. ಈಗ ಒಂದು ವಿಶೇಷ ಸಂದರ್ಭದಲ್ಲಿ ಆ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ ತಾಪ್ಸಿ. ಮಂಗಳವಾರ ಮಿಥಾಲಿ ರಾಜ್ 37ನೇ ಜನ್ಮದಿನ. ಆ ಪ್ರಯುಕ್ತ ಕೇಕ್ ಕತ್ತರಿಸಿ ಸಂಭ್ರಮಿಸುವುದರ ಜತೆಗೆ ಮಿಥಾಲಿಗೆ ಶುಭ ಹಾರೈಸಲಾಗಿದೆ.
 
ಮಿಥಾಲಿ ರಾಜ್ ಟೀ ಇಂಡಿಯಾದ ಮಹಿಳೆಯರ ತಂಡದ ಅದ್ಭುತ ಪ್ರತಿಭೆ. ಹ್ಯಾಪಿ ಬರ್ತ್​ಡೇ ಕ್ಯಾಪ್ಟನ್ ಮಿಥಾಲಿ. ಹಲವು ಬಗೆಯಲ್ಲಿ ನಾವೆಲ್ಲರೂ ಹೆಮ್ಮೆ ಪಡು ವಂತೆ ನೀವು ಮಾಡಿದ್ದೀರಿ. ನಿಮ್ಮ ಪಯಣವನ್ನು ಬೆಳ್ಳಿತೆರೆಯಲ್ಲಿ ತರುತ್ತಿರುವುದಕ್ಕೆ ನಿಜಕ್ಕೂ ನನಗೆ ಹೆಮ್ಮೆ ಅನಿಸುತ್ತಿದೆ. ಈ ಜನ್ಮದಿನಕ್ಕೆ ನಿಮಗೆ ಯಾವ ಉಡುಗೊರೆ ನೀಡಬೇಕೋ ತಿಳಿಯುತ್ತಿಲ್ಲ. ಆದರೆ ಒಂದು ಭರವಸೆ ನೀಡಬಲ್ಲೆ. ಸಿನಿಮಾದಲ್ಲಿ ನಿಮ್ಮ ಪಾತ್ರವನ್ನು ನೋಡಿದಾಗ ಗೌರವ ಮೂಡುವಂತೆ ನಾನು ಮಾಡುತ್ತೇನೆ. ನಿಮ್ಮಿಂದ ಕವರ್ ಡ್ರೖೆವ್ ಕಲಿಯಲು ಸಿದ್ಧಳಾಗಿ ದ್ದೇನೆ ಎಂದು ಸಾಮಾಜಿಕ ಜಾಲತಾಣ ದಲ್ಲಿ ತಾಪ್ಸಿ ಬರೆದುಕೊಂಡಿದ್ದಾರೆ.
 
ಈ ಚಿತ್ರಕ್ಕೆ ‘ಶಬಾಷ್ ಮಿಥು’ ಎಂದು ಶೀರ್ಷಿಕೆ ಇಡಲಾಗಿದೆ. ರಾಹುಲ್ ಡೋಲಾ ಕಿಯಾ ನಿರ್ದೇಶನ ಮಾಡಲಿದ್ದು, ವಯಾಕಾಂ 18 ಸಂಸ್ಥೆ ನಿರ್ವಣದ ಜವಾ ಬ್ದಾರಿ ಹೊತ್ತು ಕೊಂಡಿದೆ. ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬದು ಇನ್ನಷ್ಟೇ ಗೊತ್ತಾಗಬೇಕಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಈಗಲೇ ಕುತೂಹಲ ಗರಿಗೆದರಿದ್ದು ಹೇಗೆ ಮೂಡಿಬರಲಿದೆ ಎಂದು ಕಾತರ ರಾಗಿದ್ದಾರೆ.

Find Out More:

Related Articles: