ಇನ್ನು ಮುಂದೆ ಫೇಸ್ ಬುಕ್ ನಲ್ಲೂ ಸಿಗಲಿದೆ ಶಾರ್ಟ್ ವಿಡಿಯೋ..!!

Soma shekhar
ಭಾರತದಲ್ಲಿ ಚಿಕ್ಕ ಚಿಕ್ಕ ವಿಡಿಯೋಗಳಿಗೆಂದೇ ಸೀಮಿತವಾಗಿದ್ದ ಟಿಕ್ ಟ್ಯಾಕ್ ಕೆಲವೊಂದು ರಾಜಕೀಯ ಕಾರಣಕ್ಕಾಗಿ ಬ್ಯಾನ್ ಆದ ನಂತರ ಭಾರತದಲ್ಲಂತೂ ಅನೇಕ ಟಿಕ್ ಟ್ಯಾಕ್ ಅನ್ನು ಮರೆಸುವಂತಹ ಸಾಕಷ್ಟು ಆಫ್ ಗಳ ಮಾರುಕಟ್ಟೆಗೆ ಬಂದವೂ ಹಾಗೂ ಮೊದಲೇ ಇದ್ದ ಆಫ್ ಗಳು ಮುನ್ನಲೆಗೆ ಬಂದಿವೆ. ಅದೇ ರೀತಿ ಈಗ ಜಗತ್ತಿನಾಧ್ಯಂತ ಅತೀ ಹೆಚ್ಚಾಗಿ ಬಳಕೆಯಲ್ಲಿರುವಂತಹ ಫೇಸ್ ಬುಕ್ ಕೂಡ ಇದರ ಪ್ರಯೋಗವನ್ನು ಮಾಡಿದೆ.

 

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರ ಹಲವಾರು ತದ್ರೂಪ ಆ್ಯಪ್ ಗಳು ಹುಟ್ಟಿಕೊಂಡಿವೆ. ಇನ್ ಸ್ಟಾಗ್ರಾಂ ಕೂಡ ರೀಲ್ಸ್ ಎಂಬ ಆಯ್ಕೆಯನ್ನು ಹೊರತಂದಿದೆ. ಇದೀಗ ಫೇಸ್ ಬುಕ್ ಕೂಡ ತನ್ನ ಅಧಿಕೃತ ಅಪ್ಲಿಕೇಷನ್ ನಲ್ಲಿ ಶಾರ್ಟ್ ವಿಡಿಯೋಗಳನ್ನು ಪರೀಕ್ಷೆಗೊಳಪಡಿಸುತ್ತಿದೆ.


ಭಾರತದಲ್ಲಿ ಈಗಾಗಲೇ ಫೇಸ್ ಬುಕ್, ಶಾರ್ಟ್ ವಿಡಿಯೋ ಫೀಚರ್ ಅನ್ನು ಹೊರತಂದಿದೆ. ಇದು ಕೂಡ ಟಿಕ್ ಟಾಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತ್ಯೇಕವಾದ ಆಯ್ಕೆಗಳನ್ನು ಹೊಂದಿದೆ. ಬಳಕೆದಾರರು ಕ್ರಿಯೇಟ್ ಬಟನ್ ಕ್ಲಿಕ್ ಮಾಡುವ ಮೂಲಕ ಟಿಕ್ ಟಾಕ್ ಮಾದರಿಯ ಸೇವೆಯನ್ನು ಪಡೆಯಬಹುದು.



ಈ ಶಾರ್ಟ್ ವಿಡಿಯೋಗಳು ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಈ ಫೀಚರ್ ಅನ್ನು ಮತ್ತಷ್ಟು ಉತ್ತಮಗೊಳಿಸಲು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಫೇಸ್ ಬುಕ್ ಮೂಲಗಳು ತಿಳಿಸಿವೆ.


ವರದಿಗಳ ಪ್ರಕಾರ ಟಿಕ್ ಟಾಕ್ ಭಾರತದಲ್ಲಿ ನಿಷೇಧವಾದ ನಂತರ ಫೇಸ್ ಬುಕ್ ಬಳಕೆದಾರರ ಸಂಖ್ಯೆ 25% ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಶಾರ್ಟ್ ವಿಡಿಯೋ ಯೋಜನೆಯನ್ನು ರೂಪಿಸಲಾಗಿದೆ ಎನ್ನಲಾಗಿದೆ. ಇದರ ಮೊದಲ ಭಾಗವಾಗಿ ಕಳೆದ ತಿಂಗಳು ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಅನ್ನು ಜಾರಿಗೆ ತರಲಾಗಿತ್ತು.


ಯೂಟ್ಯೂಬ್ ಕೂಡ ಇದೇ ಮಾದರಿಯ ಫೀಚರ್ ಅನ್ನು ಹೊರತರಲು ಯೋಜನೆ ರೂಪಿಸುತ್ತಿದೆ. ಇನ್ನು ಕೂಡ ಪರೀಕ್ಷಾರ್ಥ ಹಂತದಲ್ಲಿದ್ದು, ಶೀಘ್ರವಾಗಿ ಭಾರತೀಯ ಬಳಕೆದಾರರಿಗೆ ದೊರಕುವ ಸಾಧ್ಯತೆಯಿದೆ. ಚೀನಾದ ಬೈಟೇಡ್ಯಾನ್ಸ್ ಒಡೆತನದ ಟಿಕ್ ಟಾಕ್ ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಆದರೇ ಈ ಆ್ಯಪ್ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿರುವುದರಿಂದ ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು. ಹೀಗಾಗಿ ಟಿಕ್ ಟಾಕ್ ಬಳಕೆದಾರರು ಇತರ ಸಾಮಾಜಿಕ ಜಾಲತಾಣಗಳ ಕಡೆಗೆ ಮುಖಮಾಡಿದ್ದರು.

Find Out More:

Related Articles: