ಭಾರತಕ್ಕೆ ಭೇಟಿ ನೀಡಿದ ವೇಳೆ ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್ ಮಾತನಾಡಿದ್ದರು. ಈ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಇದು ಟ್ರಂಪ್ಗೆ ಸಂತಸ ತಂದಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ನೋಡಿದ್ದ ಟ್ರಂಪ್ ಇದೀಗ ಅಮೆರಿಕಾದ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿನ ಜನಸಂಖ್ಯೆ ರಾಲಿಗಳಲ್ಲಿ ಜನಸಂಖ್ಯೆ ತುಂಬಾ ಕಡಿಮೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನ ಭಾರತ ಪ್ರವಾಸ ಕೈಗೊಂಡು ತಮ್ಮ ದೇಶಕ್ಕೆ ಮರಳಿದ್ದಾರೆ. ಭಾರತದಲ್ಲಿ ಟ್ರಂಪ್ ಗೆ ಭಾರೀ ಸ್ವಾಗತ ಕೂಡ ಸಿಕ್ಕಿತ್ತು. ಈ ಬಗ್ಗೆ ಅಮೆರಿಕದಲ್ಲಿ ಸಂತಸ ವ್ಯಕ್ತಪಡಿಸಿರುವ ಅವರು, ಭಾರತ ಭೇಟಿಯ ನಂತರ ಅಮೆರಿಕದ ರ‍್ಯಾಲಿಗಳು ದೊಡ್ಡದೆನಿಸುತ್ತಿಲ್ಲ ಎಂದಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ವೇಳೆ ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್ ಮಾತನಾಡಿದ್ದರು. ಈ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಇದು ಟ್ರಂಪ್ ಗೆ ಸಂತಸ ತಂದಿದೆಯಂತೆ. ಅಮೆರಿಕಕ್ಕೆ ವಾಪಾಸಾದ ನಂತರ ಮೊದಲ ಬಾರಿಗೆ ದಕ್ಷಿಣ ಕರೊಲಿನಾದಲ್ಲಿ ಮಾತನಾಡುವ ವೇಳೆ ಟ್ರಂಪ್ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.
ನಾನು ನಿಮಗೆ ಇದನ್ನು ಹೇಳಲು ಬೇಸರವಿದೆ ಎಂದು ಮಾತು ಆರಂಭಿಸಿದ ಟ್ರಂಪ್, “ಅದು 1,29,000 ಜನರು ಕೂರುವ ಸ್ಟೇಡಿಯಂ. ಈ ಸ್ಟೇಡಿಯಂ ಬಹುತೇಕ ತುಂಬಿತ್ತು. 1.29 ಲಕ್ಷ ಸೀಟುಗಳ ಪೈಕಿ 1 ಲಕ್ಷ ಸೀಟುಗಳು ತುಂಬಿದ್ದವು. ಇದು ತಮಾಷೆಯ ಸಂಗತಿಯಲ್ಲ” ಎಂದರು. ಹೌದು, ವಿಶ್ವದ ದೊಡ್ಡಣ್ಣನ ಮಾತುಗಳಲ್ಲಿ ಭಾರತವು ಹೆಮ್ಮೆ ಪಡುವಂತಹ ಮಾತುಗಳಾಡಿದ್ದಾರೆ.
ಅಮೆರಿಕದಲ್ಲಿ ನಡೆಯುವ ರ್ಯಾಲಿಗಳಿಗೆ ಇಷ್ಟು ದೊಡ್ಡ ಮಟ್ಟದ ಜನ ಸೇರುವುದಿಲ್ಲ ಎಂದಿರುವ ಅವರು, “ಈ ಹಾಲ್ ನಲ್ಲಿ 60 ಸಾವಿರ ಜನರು ಕೂರಲು ಅವಕಾಶವಿದೆ. ಆದರೆ, ಇಂದು ಇಲ್ಲಿ ಹೆಚ್ಚೆಂದರೆ 15 ಸಾವಿರ ಜನರು ಸೇರಿರಬಹುದು. ಇನ್ನು ಮುಂದೆ ನಾನು ನನ್ನ ಸಭೆಗೆ ಸೇರುವ ಜನಸಾಗರವನ್ನು ನೋಡಿ ಸಂತಸ ಪಡುವುದು ಅನುಮಾನವೇ. ಇದಕ್ಕೆ ಭಾರತಕ್ಕೆ ಭೇಟಿಯಲ್ಲಿ ಸಿಕ್ಕ ಜನಸ್ಪಂದನೆಯೇ ಮುಖ್ಯ ಕಾರಣ” ಎಂದು ತಿಳಿಸಿದ್ದಾರೆ.