ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ಜನತೆಯ ಕುರಿತು ಏನು ಹೇಳಿದ್ದಾರೆ ಗೊತ್ತಾ..?

frame ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶದ ಜನತೆಯ ಕುರಿತು ಏನು ಹೇಳಿದ್ದಾರೆ ಗೊತ್ತಾ..?

Soma shekhar

ನವದೆಹಲಿ: ಇಡೀ ದೇಶ ಕೊರೋನಾ ವೈರಸ್ಗೆ ಎದರಿ ಲಾಕ್ ಡೌನ್ನಲ್ಲಿ ಬಂದಿಯಾಗಿದೆ. ಈಗಾಗಲೇ ಭಾರತದಲ್ಲಿ ಎರಡು ಹಂತದ ಲಾಕ್ ಡೌನ್ ಮಾಡಲಾಗಿದ್ದರೂ ಕೂಡ  ಕೊರೋನಾ ವೈರಸ್ ಕಡಿಮೆಯಾಗದೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಎರಡನೇ ಹಂತದ ಲಾಕ್ ಡೌನ್ ಮುಕ್ತಾಯಕ್ಕೆ ಕೆಲವೇ ದಿನಗಳು ಭಾಕಿ ಬಾಕಿ ಇದ್ದರೂ  ಇದೆಕ್ಕೂ ಮುನ್ನವೇ ನಾನಾ ಕಡೆಗಳಲ್ಲಿ ಲಾಕ್ ಡೌನ್ ನನ್ನು ಸಡಿಲ ಗೊಳಿಸಲಾಗಿದೆ. ಇದರಿಂದಾಗಿಯೂ ಖುಡ ಕೊರೋನಾ ವೈರಸ್ ಹೆಚ್ಚಾಗಿದೆ ಈ ನಡುವೆ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಷ್ಟಕ್ಕೂ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಏನು ಹೇಳಿದ್ದಾರೆ ಗೊತ್ತಾ..?

 

ಲಾಕ್ ಡೌನ್ ಅವಧಿಯ ಕೊನೆಯ ವಾರದಲ್ಲಿ 'ಮನ್ ಕಿ ಬಾತ್' ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಕರೋನಾ ವಿರುದ್ಧದ ಹೋರಾಟ ನಿಜಕ್ಕೂ ಜನರಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ದೇಶದ ಜನರು ಕರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅಷ್ಟೇ ಅಲ್ಲ ಇಂತಹ ಈ ಕಷ್ಟದ ಸಮಯದಲ್ಲಿ ಜನರು ಪರಸ್ಪರ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ಜನರೂ ಹೋರಾಡುತ್ತಿದ್ದಾರೆ ಮತ್ತು ಅವರ ಜೊತೆಗೆ ಆಡಳಿತವೂ ಕೂಡ ಜನರೊಂದಿಗೆ ಒಟ್ಟಾಗಿ ಹೋರಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಭಾರತದಂತಹ ದೊಡ್ಡ ದೇಶವು ಬಡತನದೊಂದಿಗೆ ತನ್ನ ನಿರ್ಣಾಯಕ ಯುದ್ಧವನ್ನು ನಡೆಸುತ್ತಿದೆ. ಕರೋನಾ ವಿರುದ್ಧ ಹೋರಾಡಲು ಮತ್ತು ಗೆಲ್ಲಲು ಭಾರತಕ್ಕೆ ಒಂದೇ ಒಂದು ಮಾರ್ಗವಿದೆ

.

ವಿವಿಧ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಮತ್ತು ಗಲ್ಲಿಗಳಲ್ಲಿ ಜನರು ಪರಸ್ಪರ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಬಡವರಿಗೆ ಆಹಾರ, ಪಡಿತರ ಒದಗಿಸುವುದಾಗಲಿ. ಲಾಕ್ ಡೌನ್ ನಲ್ಲಿ ಅನುಸರಿಸಬೇಕಾದ ಕ್ರಮಗಲಾಗಲಿ, ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಲಿ, ವೈದ್ಯಕೀಯ ಉಪಕರಣಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವುದಾಗಲಿ, ಇಂದು ಇಡೀ ದೇಶ, ಒಂದೇ ಗುರಿ, ಒಂದೇ ಉದ್ದೇಶದಿಂದ ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 

ಚಪ್ಪಾಳೆ, ಥಾಲಿ, ದೀಪ, ಮೇಣದ ಬತ್ತಿ ಇವೆಲ್ಲವುಗಳ ಮೂಲಕ ಭಾವನೆಗಳು ವ್ಯಕ್ತವಾಗಿವೆ. ಇವು ಈ ದೇಶದ ನಿವಾಸಿಗಳು ಏನಾದರೂ ಮಾಡಲು ನಿರ್ಧರಿಸಿದ ಮನೋಭಾವವನ್ನು ಎತ್ತಿ ತೋರಿಸುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ. ಈ ವಿಷಯಗಳು ಎಲ್ಲರಿಗೂ ಸ್ಫೂರ್ತಿ ನೀಡಿವೆ. ಸಾಂಕ್ರಾಮಿಕದ ಮಧ್ಯೆ ನಮ್ಮ ರೈತ ಸಹೋದರರು ಹಗಲು ರಾತ್ರಿ ತಮ್ಮ ತಮ್ಮ ಗದ್ದೆಗಳಲ್ಲಿ ಶ್ರಮಿಸಿ ನಮ್ಮೆಲ್ಲರಿಗೂ ಆಹಾರ ಪೂರೈಸುವ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಇದೆ ವೇಳೆ ಕರೋನಾ ವಾರಿಯರ್ಸ್ ಗಳಾಗಿರುವ ವೈದ್ಯರು ಮತ್ತು ದಾದಿಯರ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಪ್ರಧಾನಿ ದುಃಖ ವ್ಯಕ್ತಪಡಿಸಿದ್ದಾರೆ.

 

ವ್ಯಾಪಾರವಾಗಲಿ, ಕಚೇರಿ ಕೆಲಸದ ಸಂಸ್ಕೃತಿಯಾಗಲಿ, ಶಿಕ್ಷಣ ಅಥವಾ ವೈದ್ಯಕೀಯ ಕ್ಷೇತ್ರಗಳೆಲ್ಲವೂ ಕರೋನಾ ವೈರಸ್‌ನಿಂದ ಉಂಟಾಗುವ ಬದಲಾವಣೆಗಳಾಗಲಿ, ಅವುಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಜನರು ಹೊಂದಿಕೊಳ್ಳುತ್ತಿದ್ದಾರೆ. ಅವು ವೇಗವಾಗಿ ಹೊಸತನವನ್ನು ಸಾಧಿಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ದೇಶದ ಎಲ್ಲ ಭಾಗಗಳಲ್ಲಿ ಔಷಧಿಗಳನ್ನು ತಲುಪಿಸಲು 'ಲೈಫ್-ಲೈನ್ ಉಡಾನ್ ಎಂಬ ವಿಶೇಷ ಅಭಿಯಾನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಸಹೋದ್ಯೋಗಿಗಳು ಇಷ್ಟು ಕಡಿಮೆ ಅವಧಿಯಲ್ಲಿ ದೇಶದೊಳಗೆ 3 ಲಕ್ಷ ಕಿಲೋಮೀಟರ್ ವಾಯುಯಾನ ನಡೆಸಿದ್ದು, 500 ಟನ್‌ಗಿಂತ ಹೆಚ್ಚು ವೈದ್ಯಕೀಯ ಸಾಮಗ್ರಿಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದಾರೆ.

 

ಬಿಕ್ಕಟ್ಟಿನ ಈ ಸಮಯದಲ್ಲಿ ಔಷಧಿಗಳ ಬಿಕ್ಕಟ್ಟು ಕೇವಲ ದೇಶವಷ್ಟೇ ಅಲ್ಲ ವಿಶ್ವದ ಶ್ರೀಮಂತ ರಾಷ್ಟ್ರಗಳೂ ಕೂಡ ಎದುರಿಸುತ್ತಿವೆ. ಭಾರತವು ಜಗತ್ತಿಗೆ ತನ್ನ ಬಳಿ ಇರುವ ಔಷಧಿಗಳನ್ನು ನೀಡದಿದ್ದರೂ ಕೂಡ ಭಾರತವನ್ನು ಯಾರೂ ತಪ್ಪಿತಸ್ತರ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ಭಾರತದ ಪಾಲಿಗೆ ಭಾರತದ ನಾಗರಿಕರೋ ಮೊದಲ ಆದ್ಯತೆ ಆಗಿದ್ದಾರೆ ಎಂಬುದು ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಿಳಿದ ವಿಷಯವೇ ಆಗಿದೆ. ಆದರೆ ಭಾರತ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ತನ್ನ ಸಂಸ್ಕೃತಿಗೆ ಅನುಗುಣವಾಗಿ ನಿರ್ಣಯಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

 

ಇದೇ ವೇಳೆ ಇಂದು ಅಕ್ಷಯ ತೃತಿಯಾ, ಇಂದಿನ ಪವಿತ್ರ ದಿನದಂದು ಎಲ್ಲರೂ ತಮ್ಮ ದೇಶದ ಭೂಮಿಯನ್ನು ಅಕ್ಷಯ ಮಾಡುವ ಸಂಕಲ್ಪ ಹೊಂದಬೇಕು ಎಂದಿದ್ದಾರೆ. ಜೊತೆಗೆ ರಮಾದಾನ್ ನಂತಹ ಪವಿತ್ರ ಹಬ್ಬದ ತಿಂಗಳಿನಲ್ಲಿ ನಾವು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಲಾಕ್ ಡೌನ್ ನಿಯಮಗಳನ್ನು ಪಾಲಿಸುವ ಅಗತ್ಯತೆ ಇದೆ. ಜೊತೆಗೆ ರಂಜಾನ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾವು ದೇವರಲ್ಲಿ ಪ್ರಾರ್ಥನೆ ಸಲ್ಲಿಸೋಣ ಹಾಗೂ ಹಬ್ಬದ ಆಚರಣೆಗೂ ಮೊದಲು ಈ ಮಹಾಮಾರಿಯನ್ನು ನನ್ನ ದೇಶದಿಂದ ಹೊಡೆದೋಡಿಸೋಣ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

 

Find Out More:

Related Articles: