ಡಾಲಿ ಧನಂಜಯ್ “ಹೆಡ್ ಬುಷ್” ಮೂಲಕ ಬೆಂಗಳೂರು ಭೂಗತ ಲೋಕಕ್ಕೆ ಎಂಟ್ರಿ..!!

Soma shekhar
ಕೈಯಲ್ಲಿ ಸಿನಿಮಾಗಳಿದ್ದರೂ ಕೂಡ ಲಾಕ್ ಡೌನ್ ನಿಂದಾಗಿ ಸೈನ್ ಮಾಡಿದ ಸಿನಿಮಾಗಲೇಲ್ಲವೂ ಲೀಸ್ಟ್ ನಲ್ಲಿ ಕರಗದೆ ಹಾಗೇ ಕೂತಿದೆ.ಇವೆಲ್ಲ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟರ ಅಭಿಪ್ರಾಯ. ಇದೇ ಅಭಿಪ್ರಾಯ ಡಾಲಿ ಧನಂಜಯ್ ಕೂಡ ಹೊಂದಿದ್ದಾರೆ. ಹೌದು ನಟ ಧನಂಜಯ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ 'ರತ್ನನ್ ಪ್ರಪಂಚ' ಚಿತ್ರ ಘೋಷಣೆ ಆಗಿತ್ತು. ಅವರು ನಟಿಸಿರುವ 'ಯುವರತ್ನ', 'ಸಲಗ', 'ಪೊಗರು' ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗುತ್ತಿವೆ. 'ಡಾಲಿ', 'ಬಡವ ರಾಸ್ಕಲ್' ಮುಂತಾದ ಸಿನಿಮಾಗಳಲ್ಲಿಯೂ ಅವರು ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಮತ್ತೊಂದು ಚಿತ್ರ ಈ ಸಾಲಿಗೆ ಸೇರಿಕೊಂಡಿದೆ. ಅಷ್ಟಕ್ಕೂ ಆ ಚಿತ್ರ ಯಾವುದು ಗೊತ್ತಾ..?

ಬೆಂಗಳೂರು ಭೂಗತ ಲೋಕದ ಮೊದಲ ಡಾನ್‌ ಎಂದೇ ಕರೆಯಲ್ಪಡುವ ಎಂಪಿ ಜಯರಾಜ್  ಕುರಿತು ತಯಾರಾಗಲಿರುವ ಸಿನಿಮಾದಲ್ಲಿ ಡಾಲಿ ಧನಂಜಯ್  ಮುಖ್ಯ ಪಾತ್ರ ನಿಭಾಯಿಸುತ್ತಾರೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿಬಂದಿತ್ತು. ಹೊಸ ನಿರ್ದೇಶಕ ಶೂನ್ಯ ಎಂಬುವವರು ಅದಕ್ಕೆ ನಿರ್ದೇಶನ ಮಾಡಲಿದ್ದಾರೆ. ಬಹಳ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದು ಇದುವರೆಗೂ ಗೊತ್ತಿರಲಿಲ್ಲ. ಈಗ ಅದು ಬಹಿರಂಗ ಆಗಿದೆ.

 
 ಸ್ವಾತಂತ್ರೋತ್ಸವದ ಪ್ರಯುಕ್ತ ಡಾಲಿಯ ಹೊಸ ಸಿನಿಮಾ ಶೀರ್ಷಿಕೆಯನ್ನು ಘೋಷಣೆ ಮಾಡಲಾಗಿದೆ. ಅದನ್ನು ಅನೌನ್ಸ್‌ ಮಾಡಿರುವುದು 'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್. ಭೂಗತ ಲೋಕದ ನೈಜ ಘಟನೆಗಳನ್ನು ಆಧರಿಸಿ ತಯಾರಾಗಲಿರುವ ಈ ಸಿನಿಮಾಗೆ '“ಹೆಡ್ ಬುಷ್   ಎಂದು ಟೈಟಲ್‌ ಇಡಲಾಗಿದೆ. ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಪುನೀತ್‌ ಇದನ್ನು ರಿವೀಲ್‌ ಮಾಡಿದ್ದಾರೆ. ಜೊತೆಗೆ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಜಯರಾಜ್‌ ಪಾತ್ರಕ್ಕಾಗಿ ಧನಂಜಯ ಅವರು ಈಗಾಗಲೇ ಸಖತ್‌ ತಯಾರಿ ಮಾಡಿಕೊಂಡಿದ್ದಾರೆ. 'ಹೆಡ್‌ ಬುಷ್‌'ಗೆ ಅಶುಬೆದ್ರ ಬಂಡವಾಳ ಹೂಡಲಿದ್ದಾರೆ.
 

 ಅಗ್ನಿ ಶ್ರೀಧರ್‌ ಬರೆದ 'ದಾದಾಗಿರಿಯ ದಿನಗಳು' ಕೃತಿ ಆಧರಿಸಿ 'ಹೆಡ್‌ ಬುಷ್‌' ತಯಾರಾಗಲಿದೆ. ವಿಶೇಷ ಏನೆಂದರೆ, ಕನ್ನಡ ಮಾತ್ರವಲ್ಲದೆ, ಹಲವು ಭಾಷೆಯಲ್ಲಿ ಚಿತ್ರ ಮೂಡಿಬರಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಸೇರಿ ಒಟ್ಟು 6 ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಪುನೀತ್‌ ಬಿಡುಗಡೆ ಮಾಡಿರುವ ಪೋಸ್ಟರ್‌ ಮೂಲಕ ಬಹಿರಂಗ ಆಗಿದೆ. ಅಲ್ಲದೆ, ಎರಡು ಪಾರ್ಟ್‌ಗಳಲ್ಲಿ ಚಿತ್ರ ತಯಾರಾಗಲಿದ್ದು ಮೊದಲ ಭಾಗಕ್ಕೆ 'VOL-1' ಎಂಬ ಅಡಿಬರಹ ಇದೆ. ಈ ಎರಡು ಹೊಸ ವಿಚಾರಗಳು ಈ ಟೈಟಲ್‌ ಪೋಸ್ಟರ್‌ನಿಂದ ಗೊತ್ತಾಗಿದೆ.

Find Out More:

Related Articles: