ಗೋಶಾಲೆಯಲ್ಲಿ ದರ್ಶನ್ ಮಾಡಿದ್ದೇನು?

frame ಗೋಶಾಲೆಯಲ್ಲಿ ದರ್ಶನ್ ಮಾಡಿದ್ದೇನು?

Soma shekhar
ಬೆಂಗಳೂರು: ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಹೌದು, ಸ್ವಂತ ಫಾರ್ಮ್ ಅನ್ನು ಸಹ ಹೊಂದಿದ್ದಾರೆ. ಯಾವಾಗಲೂ ಮೂಕ ಪ್ರಾಣಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇದೀಗ ದರ್ಶನ್ ಗೋಶಾಲೆಗೆ ದರ್ಶನ್ ತಮ್ಮ ಸಹಾಯಹಸ್ತ ಚಾಚಿದ್ದಾರೆ. ಹೌದು, ಅದೇನು ಗೊತ್ತಾ! ಇಲ್ಲಿಗೆ ನೋಡಿ ಉತ್ತರ.
 
ನಟ ದರ್ಶನ್ ಗೋ ಶಾಲೆಗೆ ಕೊಟ್ಟಿದ್ದೇನು ಎಂದರೆ, ಅದು ರೈತಾನುಕೂಲವಾಗಲಿ ಎಂದು ಅನುದಾನ ನೀಡಿದ್ದಾರೆ. ಹೌದು, ಟ್ರ್ಯಾಕ್ಟರ್ ಗಟ್ಟಲೇ ಮೇವನ್ನು ಅನುದಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿರುವ ಚೈತ್ರ ಗೋಶಾಲಾಗೆ ಅನುದಾನ ಮಾಡಿದ್ದಾರೆ. ಚೈತ್ರ ಗೋ ಶಾಲೆಗೆ ಮೇವು ಸಾಗಿಸುತ್ತಿರುವ ವಿಡಿಯೋ ವನ್ನು ಅಭಿಮಾನಿಗಳು ತಮ್ಮ ಟ್ಟಿಟ್ಟರಿ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾಲು ಸಾಲು ಆಗಿ ಸುಮಾರು 15 ರಿಂದ 20 ಟ್ರ್ಯಾಕ್ಟರ್ ಹುಲ್ಲನ್ನು ಗೋಶಾಲೆಗೆ ಅನುದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ದರ್ಶನ್ ಅವರು ಗೋಶಾಲೆಗೆ ಹೋಗಿ ಹಸುಗಳನ್ನು ನೋಡಿ ಖುಷಿ ಪಟ್ಟಿದ್ದು, ಗೋಗಳ ಜೊತೆ ಕೆಲ ಸಮಯ ಕಳೆದಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಇರುವ  ಪ್ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ. ಅಭಿಮಾನಿಗಳ ಈ ಕೆಲಸಕ್ಕೆ ಮೆಚ್ಚುಗೆ ನೀಡಿದ್ದಾರೆ. 
 
ಈಗಾಗಲೇ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಭಿಮಾನಿಗಳಿಗೆ ತಿಳಿಸಲು ದರ್ಶನ್ ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕಿದ್ದಾರೆ. ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮ ಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದು ಪ್ರೀತಿಯ ಅಭಿಮಾನಿಗಳಲ್ಲಿ ದರ್ಶನ್ ವಿನಂತಿ ಮಾಡಿಕೊಂಡಿದ್ದು, ಅಭಿಮಾನಿಗಳು ಅದೇ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Find Out More:

Related Articles:

Unable to Load More