ಜಾರ್ಖಂಡ್: ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ರೀತಿಯಲ್ಲಿ ವರ್ತಿಸುತ್ತಿದೆ. ಇಲ್ಲ ಸಲ್ಲದ ಬಣ್ಣದ ಮಾತುಗಳನ್ನು ಆಡುತ್ತಾ ಜನರ ತಲೆಕೆಡಿಸುತ್ತಿದೆ. ಇದು ಸಹ ಭಯಾನಕವಾಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಆ ನಾಯಕ ಯಾರು ಗೊತ್ತಾ. ಚಿಂತಿಸಬೇಡಿ ನಾವ್ ಹೇಳ್ತೀವಿ ಕೇಳಿ.
ಪಾಕಿಸ್ತಾನ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಹೇಳಿದ್ದು ಮತ್ತಾರು ಅಲ್ಲ, ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಹೌದು ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಗೌರವದ ಬದುಕು ನೀಡಲು ಸರ್ಕಾರ ಮುಂದಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದೆ ಎಂದು ಗುಡುಗಿದ್ದಾರೆ.
ಜಾರ್ಜಂಡ್‌ನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಭಾರತದ ಯಾವುದೇ ಒಂದು ಪಕ್ಷ ಬೇರೆ ದೇಶದಲ್ಲಿರುವ ಭಾರತೀಯ ದೂತಾವಾಸದ ಎದುರು ಪ್ರತಿಭಟನೆ ನಡೆಸೋದು ಸಾಧ್ಯವೇ? ಇದಕ್ಕಿಂತಾ ನಾಚಿಕೆಗೇಡಿನ ಸಂಗೇತಿ ಇನ್ನೇನಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.
ಭಾರತ್ ಬಚಾವೋ ಆಂದೋಲನದ ಅಂಗವಾಗಿ ವಿಶ್ವದೆಲ್ಲೆಡೆ ಇರುವ ಭಾರತೀಯ ದೂತಾವಾಸ ಕಚೇರಿ, ರಾಯಭಾರ ಕಚೇರಿಗಳ ಎದುರು ಶನಿವಾರ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಭಾರತದಲ್ಲಿರುವ ನಿರುದ್ಯೋಗ, ಆರ್ಥಿಕ ಕುಸಿತ ಹಾಗೂ ರೈತರ ಸಂಕಷ್ಟಗಳೇ ಭಾರತ್ ಬಚಾವೋ ಆಂದೋಲನದ ಪ್ರಮುಖ ಅಜೆಂಡಾ ಆಗಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಗೌರವದ ಬದುಕು ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು. ಆದ್ರೆ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿವೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಜಾರ್ಖಂಡ್ ನಲ್ಲಿ ಪ್ರಸ್ತುತ ಚುನಾವಣಾ ಪ್ರಚಾರದ ಅಬ್ಬರ ಎರಡೂ ಪಕ್ಷಗಳಿಂದಲೂ ಗರಿಗೆದರಿದ್ದು, ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾರೆ ಎಂಬುದು ಕಾದುನೋಡಬೇಕಾಗಿದೆ.