ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ಕಾಮಗಾರಿ ನಿಂತಿದ್ದೇಕೆ?

Soma shekhar
ರಾಮನಗರ: ರಾಜ್ಯ ರಾಜಕೀಯದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡೇ ಮಾಡುತ್ತೇವೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಅಬ್ಬರಿಸಿದ್ದರು. ಹೌದು, ಇತ್ತೀಚೆಗೆ ನಡೆದ ಅತಿದೊಡ್ಡ ಘಟನೆಯಿದು. ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ ಶಿಲಾನ್ಯಾಸ ಸಹ ಮಾಡಿದ್ದರು. ಆದರೆ ಇದೀಗ ಅದನ್ನು ನಿಲ್ಲಿಸಲಾಗಿದೆ. ಅಲ್ಲಿನ ತಹಶೀಲ್ದಾರ್ ರನ್ನು ಸಹ ಎತ್ತಂಗಡಿ ಮಾಡಲಾಗಿದೆ. ಯಾಕೆ ಅಂತ ಇಲ್ನೋಡಿ. 
 
ಕನಕಪುರ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು, ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ, ಗಲಭೆಗಳು ಸೃಷ್ಟಿ ಆಗದಂತೆ ಮುನ್ನಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದು ವರದಿ ವಿವರಿಸಿದೆ.
 
ಸಾತನೂರು ಪೊಲೀಸರು ಕಪಾಲಿ ಬೆಟ್ಟದಲ್ಲಿ ಬಿಗಿ ಭದ್ರತೆಗಾಗಿ ಕಾವಲು ಕಾಯುತ್ತಿರುವುದಾಗಿ ವರದಿ ತಿಳಿಸಿದೆ. ಇದೀಗ ವಿವಾದಿತ ಜಾಗದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಪಾಲಿಬೆಟ್ಟದಲ್ಲಿ 115 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದ್ದು, ಈ ಬಗ್ಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಯೇಸು ಪ್ರತಿಮೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೋ ಅಥವಾ ಸ್ವಯಂ ಆಗಿ ಪ್ರತಿಮೆ ನಿರ್ಮಾಣ ಕಾರ್ಯ ನಿಲ್ಲಿಸಲಾಗಿದೆಯೋ ಎಂಬುದು ಸ್ಪಷ್ಟವಾಗಬೇಕಿದ್ದು, ಮುಂದೆ ಈ ಪ್ರತಿಮೆ ನಿರ್ಮಾಣ ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದು ಅರ್ಥವಾಗದಂತಾಗಿದೆ. ಅಬ್ಬರಿಸಿದ್ದ  ಡಿ ಕೆ ಶಿವಕುಮಾರ್ ಈಗೇನು ಮಾಡುತ್ತಾರೆ, ಕ್ರೈಸ್ತ ಜನರ ಆರಾಧ್ಯ ಧೈವಕ್ಕೆ ಪ್ರತಿಮೆ ನಿರ್ಮಾಣ ಆಗುತ್ತಾ ಇಲ್ಲವಾ, ತಹಶೀಲ್ದಾರ್ ರನ್ನು ಎತ್ತಂಗಡಿ ಮಾಡಿಸಿದ್ದೇಕೆ  ಎಂಬುದು ಕಾದು ನೋಡ ಬೇಕಾಗಿದೆ.
 
 
 
 

Find Out More:

Related Articles: