ಜಿ.ಎಸ್.ಟಿ ಹೆಚ್ಚಿಸಲು ಕೇಂದ್ರ ಚಿಂತನೆ.. ಜನರ ಆಕ್ರೋಶ!

Soma shekhar
ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ ಜಿಡಿಪಿ 4.5% ಗೆ ಕುಸಿದಿದ್ದು, ಆರ್ಥಿಕತೆ ಸರಿದೂಗಿಸುವ ಭರದಲ್ಲಿ ಕೇಂದ್ರವು ಜನರ ಮೇಲೆ ಹೊರಹಾಕಲು ಚಿಂತನೆ ನಡೆಸಿದೆ. ಅಂದರೆ ಜಿ. ಎಸ್. ಟಿ ಹೆಚ್ಚಿಸಲು ಕಸರತ್ತುಗಳು ನಡೆಸಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಬರೋಬ್ಬರಿ 1 ಲಕ್ಷ ಕೋಟಿ ರು. ಹೆಚ್ಚುವರಿ ಸಂಪನ್ಮೂಲ ಲಭ್ಯವಾಗಲಿದ್ದರೆ, ಗ್ರಾಹಕರು ಮಾತ್ರ ಹೆಚ್ಚಿನ ಹೊರೆ ಹೊರಬೇಕಾಗುತ್ತದೆ. ಈಗಾಗಲೇ ಜಿ.ಎಸ್.ಟಿ ಯಿಂದ ಹೆಚ್ಚು ಪಾವತಿಸಿ ಬೇಸತ್ತಿರುವ ಜನರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. 
 
ಈಗ ಇರುವ 5% ಸ್ಲ್ಯಾಬ್ ಅನ್ನು ಶೇ.9ರಿಂದ ಶೇ.10ಕ್ಕೆ ಹೆಚ್ಚಳ ಮಾಡಲು, 12% ಸ್ಲ್ಯಾಬ್ ಅನ್ನು ರದ್ದುಗೊಳಿಸಿ, ಅದರ ಪರಿಧಿಯಲ್ಲಿರುವ 243 ವಸ್ತುಗಳನ್ನು 18% ಸ್ಲ್ಯಾಬ್ ವ್ಯಾಪ್ತಿಗೆ ತರುವ ಚಿಂತನೆ ನಡೆಯುತ್ತಿದೆ. ಇದರಿಂದಾಗಿ ಹಲವು ವಸ್ತುಗಳು ದುಬಾರಿಯಾಗುವುದು ಪಕ್ಕಾ.
 
ದುಬಾರಿಯಾಗಲಿರುವ ವಸ್ತು, ಸೇವೆಗಳು ಇವೇ ನೋಡಿ:-
1. ಬ್ರಾಂಡೆಡ್‌ ಆಹಾರ ಧಾನ್ಯಗಳು, ಹಿಟ್ಟು, ಪನ್ನೀರ್‌, ಎಕಾನಮಿ ದರ್ಜೆಯ ವಿಮಾನ ಪ್ರಯಾಣ, 1 ಹಾಗೂ 2ನೇ ಶ್ರೇಣಿಯ ಹವಾನಿಯಂತ್ರಿತ ರೈಲು ಪ್ರಯಾಣ, ತಾಳೆ ಎಣ್ಣೆ, ಆಲಿವ್‌ ಆಯಿಲ್‌, ಪಿಜ್ಜಾ ಬ್ರೆಡ್‌, ಕೋಕೋವಾ ಪೇಸ್ಟ್‌, ಡ್ರೈ ಫä್ರಟ್ಸ್‌, ಸಿಲ್‌್ಕ, ಲಿನೆನ್‌ ಹಾಗೂ ಪುರುಷರ ಸೂಟ್‌ಗೆ ಬಳಸಲಾಗುವ ಬಟ್ಟೆ, ಕ್ರೂಸ್‌ ಪ್ರಯಾಣ, ದೋಣಿಗಳ ಪ್ರವಾಸ, ಪ್ರವಾಸ ಸೇವೆ, ಕೇಟರಿಂಗ್‌, ರೆಸ್ಟೋರೆಂಟ್‌.
*ಈ ಸೇವೆಗಳಿಗೆ ಸದ್ಯ ಶೇ.5ರಷ್ಟುಜಿಎಸ್‌ಟಿ ಇದೆ. ಇದನ್ನು ಶೇ.9-10ಕ್ಕೇರಿಸಲು ಚಿಂತನೆ ನಡೆಯುತ್ತಿದೆ.
 
2. ಮೊಬೈಲ್‌ ಫೋನ್‌, ಬಿಸಿನೆಸ್‌ ಕ್ಲಾಸ್‌ ವಿಮಾನ ಪ್ರಯಾಣ, ರಾಜ್ಯ ಸರ್ಕಾರದ ಲಾಟರಿ, ದುಬಾರಿ ಪೇಂಟಿಂಗ್‌, 5ರಿಂದ 7500 ರು. ಬಾಡಿಗೆಯ ಹೋಟೆಲ್‌ ಕೋಣೆ.
ಈ ಸೇವೆಗಳಿಗೆ ಶೇ.12 ಜಿಎಸ್‌ಟಿ ಇದೆ. ಅದನ್ನು ಶೇ.18ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ.
 
3. ದುಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆ, 1000 ರು. ಒಳಗಿನ ಹೋಟೆಲ್‌ ಬಾಡಿಗೆ, ಕಂಪನಿಗಳು ಪಡೆಯುವ ದುಬಾರಿ ಮೊತ್ತದ ಭೋಗ್ಯ, ಬ್ರಾಂಡೆಡ್‌ ಅಲ್ಲದ ಪನ್ನೀರ್‌, ಕಚ್ಚಾ ರೇಷ್ಮೆ, ಸೇಂದಿ

Find Out More:

Related Articles: