ಉಪಚುನಾವಣೆ ಮುಗೀತು. ಆದರೆ ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಯ್ತು ಗೊತ್ತಾ! ಗೆಲ್ಲೋದು ಯಾರು ಗೊತ್ತಾ!?

Soma shekhar
ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ಮುಕ್ತಾಯವಾಗಿದ್ದು, ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇನ್ನು ಮೂರೇ ದಿನಗಳಲ್ಲಿ ತಿಳಿಯುತ್ತದೆ. ಆದರೆ ಯಾವಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ, ಗೆಲ್ಲುವ ಅಭ್ಯರ್ಥಿಗಳು ಗಳು ಯಾರು ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. 
 
ರಾಜೀನಾಮೆ ನೀಡಿದ 15 ಕ್ಷೇತ್ರಗಳಲ್ಲಿ  ಗುರುವಾರ ನಡೆದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಸಂಜೆ 6 ಕ್ಕೆ ಅಂತ್ಯಗೊಂಡಿದೆ. ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯವಾಗಿ ಅಡಗಿದೆ.ಇದೇ ತಿಂಗಳ 9 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಯಾವೆಲ್ಲ ಅಭ್ಯರ್ಥಿಗಳು ಜನರ ಮನಸ್ಸು ಗೆದ್ದಿದ್ದಾರೆ ಎನ್ನೋದು ಬಹಿರಂಗವಾಗಲಿದೆ. ಅಷ್ಟೇ ಅಲ್ಲದೆ, ಯಾವ ಪಕ್ಷದ ಅಭ್ಯರ್ಥಿಗಳುಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಅನ್ನೋದರ ಮೇಲೆ ರಾಜ್ಯ ಸರ್ಕಾರದ ಭವಿಷ್ಯವೂ ನಿರ್ಧಾರವಾಗಲಿದೆ. ಈ ಉಪಚುನಾವಣೆಯ ಫಲಿತಾಂಶ ಮೂರೂ ಪ್ರಮುಖ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ನಡೆಸಲಾಗುತ್ತಿದೆ. 
 
ಪ್ರಸ್ತುತ 15 ಕ್ಷೇತ್ರಗಳಲ್ಲಿ ಒಟ್ಟು ಶೇ. 66.25ರಷ್ಟು ಮತದಾನವಾಗಿದ್ದು ಆಯಾ ಕ್ಷೇತ್ರಗಳ ಮತದಾನದ ಅಂಕಿ ಅಂಶಗಳು ಇಲ್ಲಿವೆ ನೋಡಿ. 
ಕ್ಷೇತ್ರಗಳು - ಶೇಕಡಾವಾರು ಮತದಾನ
ಹೊಸಕೋಟೆ- 86.77%
ಕೆ.ಆರ್. ಪೇಟೆ- 80.00%
ಹುಣಸೂರು- 80.62%
ಅಥಣಿ- 75.23%
ಕಾಗವಾಡ- 75.27%
ಗೋಕಾಕ್- 73.08%
ಯಲ್ಲಾಪುರ- 77.52%
ಹಿರೇಕೆರೂರು- 78.63%
ರಾಣೆಬೆನ್ನೂರು- 75.53%
ವಿಜಯನಗರ- 64.94%
ಚಿಕ್ಕಬಳ್ಳಾಪುರ- 86.19%
ಕೆ.ಆರ್. ಪುರ- 43.25%
ಯಶವಂತಪುರ- 54.00%
ಮಹಾಲಕ್ಷ್ಮಿ ಲೇಔಟ್- 50.92%
ಶಿವಾಜಿನಗರ- 44.60%
 
ಜಿದ್ದಾಜಿದ್ದಿನ ಕಣವಾದ ಹೋಸಕೋಟೆ ಕ್ಷೇತ್ರದಲ್ಲಿ  ಅತಿಹೆಚ್ಚು 86.77% ಮತದಾನ ವಾಗಿದ್ದು, ಶಿವಾಜಿ ನಗರದಲ್ಲಿ ಅತೀ ಕಡಿಮೆ ಅಂದರೆ 44.60% ಮತದಾನವಾಗಿದೆ. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರ ಮತ್ತು ಜನರ ಒಲವು ಹೆಚ್ಚಾಗಿದ್ದು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ನಡೆದ ಸೀ ಓವರ್ ಸಮೀಕ್ಷೆಗಳು ಸಹ ಸುಮಾರು 10ಕ್ಷೇತ್ರ ಗಳಲ್ಲಾದರೂ ಬಿಜೆಪಿ ಗೆಲುವು ನಿಶ್ಚಿತ ಎಂದು ತಿಳಿದುಬಂದಿದೆ.

Find Out More:

Related Articles: