ಇಕ್ಕಟ್ಟಿಗೆ ಸಿಲುಕಿದ ಅನರ್ಹ ಶಾಸಕರು

somashekhar
ಅನರ್ಹ ಶಾಕರು ಅಲ್ಲೂ ಸಲ್ಲದ ಇಲ್ಲೂ ಸಲ್ಲದವರ ಪಟ್ಟಿಯಲ್‌ಲಿ ಸೇರಿಕೊಂಡಿದ್ದಾರೆ. ಹೌದು ದೆಹಲಿಯ ಬಿಜೆಪಿ ನಾಯಕರು ಸಹ ಅನರ್ಹ ಶಾಸಕರ ಮಾತಿಗೆ ಸ್ಪಂದನೆ ಮಾಡುತ್ತಿಲ್ಲ. ಅದೇ ರೀತಿಯಲ್ಲಿ ರಾಜ್ಯದ ಮಂತ್ರಿ ಸ್ಥಾನವೂ ಸಿಗಲಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹತೆ, ಆದೇಶಕ್ಕೆ ತಡೆ ತರಲಾಗಿದೆ. ಇನನು ಉಪಚುನಾವಣೆಗೆ ಸ್ಪರ್ಧೇ ಮಾಡೋಣ ಎಂದರೆ ಅಲ್ಲಿಯೂ ತುರ್ತಾಗಿ ವಿಚಾರಣೆ ನಡೆಯುತ್ತಿಲ್ಲ. 


ನಿನ್ನೆ ಅಂದರೆ ಮಂಗಳವಾರ ಈ ಕುರಿತು ವಿಚಾರಣೆಗೆ ಅರ್ಜಿ ಬಂದಿತ್ತಾದರೂ ನ್ಯಾಯಮೂರ್ತಿ ಮೋಹನ್ ಶಾಂತಗೌಡರ್ ಅವರು ಹಿಂದೆ ಸರಿದರು. ಹೀಗಾಗಿ ಮುಂದಿನ ಸೋಮವಾರಕ್‌ಕೆ ಅರ್ಜಿಯನ್ನು ಮುಂದೂಡಲಾಗಿದೆ. ಆದರೆ ಇದು ಅನರ್ಹ ಶಾಸಕರ ಭವುಷ್ಯವನ್ನು ಏನು ಮಾಡುತ್ತೋ ಎನ್ನುವ ಆತಂಕವಿದೆ. ಹೀಗಾಗಿ ಅನರ್ಹ ಶಾಸಕರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. 


ಕಳೆದ ಜುಲೈ 25 ರಂದು 17 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅಂದರೆ ಇದು ಎರಡು ತಿಂಗಳ ಅವಧಿ ಮುಕ್ತಾಯದಲ್ಲಿದೆ. ಇನ್ನೇನು ಉಳಿದಿರೋದು ಕೇವಲ ನಾಲ್ಕು ತಿಂಗಳು. ಯಾಕೆಂದರೆ ಕ್ಷೇತ್ರ ತೆರವಾದರೆ, ಗರಿಷ್ಟ ಆರು ತಿಂಗಳ ಕಾಲದೊಳಗೆ ಮರು ಚುನಾವಣೆ ನಡೆಯಬೇಕಿದೆ. ಆ ಮೂಲಕ ನೂತನ ಜಜನಪರತಿನಿಧಿಯನ್ನು ಆಯ್ಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. 


ಇನ್ನೊಂದು ವಿಷಯ ಏನಪ್ಪ ಅಂದರೆ, ಆರು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಕ್ಷೇತ್ರದದಲ್ಲಿ ಜನಪ್ರತಿನಿಧಿ ಇಲ್ಲದೇ ಇರುವಂತಿಲ್ಲ. ಹೀಗಾಗಿ ಉಪಚುನಾವನೆ ನಡೆಸುವುದು ಅನಿವಾರ್ಯ. ವಿಧಾನಸಭೆ ಸಚಿವಾಲಯ ಚುನಾವಣಾ ಆಯೋಗಕ್ಕೆ ಎರಡನೇ ಬಾರಿಗೆ ಪತ್ರ ಬರೆದಿದ್ದು, 17 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವಂತೆ ಸೂಚಿಸಿದೆ. ಇದೀಗ ಮತ್ತೊಮ್ಮೆ ನೆನಪಿಸುವ ಕೆಲಸ ಮಾಡಿದೆ.


ಜನವರಿ 25ರ ಒಳಗೆ ಖಾಲಿಯಾದ ಸ್ಥಾನವನ್ನು ಭರ್ತಿ ಮಾಡಬೇಕಿದೆ. ಚುನಾವನೆ ಅಧಿಸೂಚನೆ ಹೊರಡಿಸಲು ಸಲಹಾ ಪೂರ್ವಕವಾಗಿ ಪತ್ರ ಬರೆಯಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಮಂತ್ರಿಯಾಗುವ ಕನಸು ಕಾಣ್ತಿರೋ ಅನರ್ಹ ಶಾಸಕರು, ಒಂದು ವೇಳೆ ಚುನಾವಣೆ ಘೋಷಣೆಯಾದರೂ ಸುಪ್ರೀಂಕೋರ್ಟ್ ತೀರ್ಪು ನೀಡದೆ ಇದ್ದರೆ‌ ನಮ್ಮ ಕಥೆ ಏನು ಎಂಬ ಆತಂಕಕ್ಕೆ ಸಿಲುಕಿದ್ದಾರೆ. ಒಟ್ಟಿನಲ್ಲಿ ಅನರ್ಹ ಶಾಸಕರ ಗತಿ ಅಧೋಗತಿ ಆಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.


Find Out More:

Related Articles: