ಡಿ ಕೆ ಶಿವಕುಮಾರ್. ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ. ಡಿಕೆಶಿ ಅಂದರೆ ಬಿಜೆಪಿಯವರು ಹೆದರುತ್ತಿದ್ದರು. ಅದೆಷ್ಟರ ಮಟ್ಟಿಗೆ ಎಂದರೆ, ಡಿಕೆ ಶಿವಕುಮಾರ್ ಒಮ್ಮೆ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದ. ಅಂದಿನಿಂದ ಇಂದಿನವರೆಗೂ ಬಿಜೆಪಿಗೆ ಡಿ ಕೆ ಶಿವಕುಮಾರ್ ಮೇಲೇ ಇರೋ ಸಿಟ್ಟಿನ ಕಾವು ಆರಿಲ್ಲ. ಹೀಗಾಗಿ ಬಿಜೆಪಿ ಇಡಿ ಮತ್ತು ಸಿಬಿಐ ಗಳನ್ನು ಬಳಸಿಕೊಂಡು ಡಿಕೆಶಿ ಮೇಲೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ.
ಆದರೆ ಡಿಕೆಶಿಗೆ ಮಾತ್ರ ಅವರ ಆರೋಗ್ಯ ಪದೇ ಪದೇ ಕೈ ಕೊಡುತ್ತಲೇ ಇದೆ ನೋಡಿ. ಹೌದು ಎದೆನೋವು ಸಮಸ್ಯೆಯಿಂದಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ಹೊಸದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ಡಿಕೆಶಿ ಆಸ್ಪತ್ರೆಗೆ ದಾಖಲಾಗುತ್ತಿರೋದು ಇದೀಗ ಮೂರನೇ ಬಾರಿಗೆ. ಇಡಿ ವಿಚಾರಣೆ ಡಿಕೆಶಿವಕುಮಾರ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಹಾಗಾದರೆ ಡಿಕೆ ಶಿವಕುಮಾರ್ ಅವರಿಗೆ ಆಗಿರೋದೇನು? ಡಿ.ಕೆ.ಶಿವಕುಮಾರ್ ಅವರು ರಕ್ತದೊತ್ತಡದ ಸಮಸ್ಯೆಯೊಂದಿಗೆ ಅಷ್ಟೇ ಅಲ್ಲದೇ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯವು ಡಿ.ಕೆ.ಶಿವಕುಮಾರ್ ವಿಚಾರಣೆಯನ್ನು ಸೆಪ್ಟೆಂಬರ್ 17ರವರೆಗೆ ವಿಸ್ತರಿಸಿದೆ. ಹೀಗಾಗಿ ಈಡಿ ಅಧಿಕಾರಿಗಳು ಡಿಕೆಶಿಯನ್ನು ಅವರ ಕಸ್ಟಡಿಯಲ್ಲೇ ಇಟ್ಟುಕೊಂಡಿದ್ದರು. ಇಡಿ ಅಧಿಕಾರಿಗಳು ಐದು ದಿನಗಳ ಕಸ್ಟಡಿ ಕೋರಿದ ನಂತರ ಶಿವಕುಮಾರ್ ಅವರ ಕಸ್ಟಡಿ ವಿಚಾರಣೆಯನ್ನು ವಿಸ್ತರಿಸಿದರು.
ಇಡಿ ಅಧಿಕಾರಿಗಳು ಹೇಳುವುದೇನೆಂದರೆ ಡಿಕೆ ಶಿವಕುಮಾರ್ ಅವರು ನಮ್ಮ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಆದರೆ ಡಿಕೆಶಿವಕುಮಾರ್ ಮಾತ್ರ ಬೇರೆಯದೇ ಕಥೆ ಹೇಳುತ್ತಾರೆ. ಆದೆ ಇದೀಗ ಆರೋಗ್ಯ ಸಮಸ್ಯೆ ಇರೋದರಿಂದ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವವರನ್ನು ವಿಚಾರಣೆ ನಡೆಸವಂತಿಲ್ಲ. ಹೌದು, ಶಿವಕುಮಾರ್ ಅವರ ಆರೋಗ್ಯ ಸರಿ ಇದ್ದಾಗ ಮಾತ್ರವೇ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು ಎಂದು ನ್ಯಾಯಾದೀಶರು ಇಡಿ ಅಧಿಕಾರಿಗಳುಗೆ ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 3 ರಿಂದ ಬಂಧಿಸಲ್ಪಟ್ಟ ಡಿಕೆ ಶಿವಕುಮಾರ್ ಅವರು ಒಂಭತ್ತು ದಿನಗಳ ಕಾಲ ಕಸ್ಟಡಿ ವಿಚಾರಣೆ ಮುಗಿದ ಮೇಲೆ ನ್ಯಾಯಾಲಕ್ಕೆ ಹಾಜರು ಪಡಿಸಲಾಯಿತು. ಆದರೆ ಇದೀಗ ಮತ್ತೆ ಡಿಕೆ ಶಿವಕುಮಾರ್ ಆರೋಗ್ಯದ ನೆವದಲ್ಲಿ ವಿಚಾರಣೆಯಿಂದ ನುಣುಚಿಕೊಳ್ಳುತ್ತಿದ್ದಾರೆಯೇ ಎನ್ನುವ ಅನುಮಾನಗಳು ಕಾಡತೊಡಗಿವೆ.