ಸೆ.13ರ ವರಿಗೆ ಇ.ಡಿ ಬೋನಿಗೆ ಬಿದ್ದ 'ಹುಲಿ'

somashekhar
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನವಾದ ನಂತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ ಅಕ್ರಮ ಹಣದ ವಾಹಿವಾಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಇನ್ನೂ 9 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 13ರ ತನಕ ಇಡಿ ಅಧಿಕಾರಿಗಳು ವಶಕ್ಕೆ ನೀಡಿ ಮಾನ್ಯ ನ್ಯಾಯಾಲಯ ಆದೇಶ ನೀಡಿದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನೆಡೆ ಉಂಟಾಗಿದೆ.


ರಾಜಕೀಯ ಪಕ್ಷಗಳು ಏನೇ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡಿದರೂ ಸಹ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇಬೇಕು. ಹೀಗಾಗಿ ಇದೀಗ ನಡೆದ ಬೆಳವಣಿಗೆಯಲ್ಲಿ ಜಾರಿ ನಿದೇರ್ಶನಾಲಯ ಅಧಿಕಾರಿಗಳ ವಶಕ್ಕೆ ನೀಡಿದೆ. ಅಷ್ಟಕ್ಕೂ ಈ ವಾದ ಮತ್ತು ಪ್ರತಿವಾದ ಸುಮಾರು 1 ಗಂಟೆ 45 ನಿಮಿಷ ನಡೆಯಿತು. ಹೌದು ಎರಡು ಕಡೆಗಳಲ್ಲಿಯೂ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ದೆಹಲಿ ನ್ಯಾಯಾಲಯದ ರೋಸ್ ಅವುನ್ಯೂ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ತೀರ್ಪು ನೀಡಿದ್ದಾರೆ.


ಕರ್ನಾಟಕದ ಅತ್ಯಂತ ಪ್ರಬಲ ನಾಯಕ ಅಂದರೆ ಅದು ಡಿ.ಕೆ.ಶಿವಕುಮಾರ್ ಅವರು. ಹೌದು ಡಿಕೆಶಿ ಅವರು ಗುಜರಾತ್ ಶಾಸಕರನ್ನು ಕರ್ನಾಟಕದಲ್ಲಿ ರಕ್ಷಣೆ ಮಾಡಿ ಅವರಿಗೆ ಆಶ್ರಯ ಒದಗಿಸಿದ್ದರು. ಆವತ್ತು ಇಡೀ ರಾಷ್ಟ್ರದಾದ್ಯಂತ ಸುದ್ದಿ ಆಗಿದ್ದರು. ಹೀಗೆ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಸಮಸ್ಯೆ ಒದಗಿ ಬಂದರೆ ಅದನ್ನು ಡಿಕೆ ಶಿವಕುಮಾರ್ ಅವರ ಹೆಗಲಿದೆ ಹಾಕುತ್ತಿದ್ದರು. ಡಿಕೆಶಿ ಅವರು ಇದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದರು.


ಹೀಗಾಗಿಯೇ ಅವರಿಗೆ ಟ್ರಬಲ್ ಶೂಟರ್ ಎನ್ನುವ ಬಿರುದು ಬಂದಿದ್ದು ಎನ್ನುವುದು ನಿಜ. ನ್ಯಾಯಾಲಯದಲ್ಲಿ ರಿಲೀಫ್ ಸಿಗಬಹುದು ಎಂದು ಶಿವಕುಮಾರ್ ಅಂದುಕೊಂಡಿದ್ದರು. ಆದರೆ ಇದೀಗ ನ್ಯಾಯಾಲಯದ ತೀರ್ಪಿನಿಂದ ಕಾನೂನು ಸಮರದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿದ್ದು, ಇದು ಡಿಕೆಶಿ ಅವರನ್ನು ಇನ್ನೂ ಆತಂಕಕ್ಕೆ ತಳ್ಳಿದೆ. ಈ ಬಾರಿಯ ಗಣೇಶ ಹಬ್ಬವನ್ನೂ ಮಿಸ್ ಮಾಡಿಕೊಂಡಿರುವ ಡಿಕೆಶಿ ಇನ್ನೂ ಹತ್ತು ದಿನಗಳ ಕಾಲ ಇಡಿ ವಶದಲ್ಲಿ ಇರಬೇಕಾಗಿದೆ. 

ಇದರಿಂದ ಡಿಕೆಶಿ ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆಯಾಗಿದೆ. ಆದರೆ ಒಂಭತ್ತು ದಿನಗಳಾದ ನಂತರ ಅಂದರೆ, ಸೆ.13 ರ ಬಳಿಕ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಗೆಯನ್ನು ಕೈಗೆತ್ತಿಗೊಳ್ಳುವುದಾಗಿ ತೀರ್ಪಿನಲ್ಲಿ ತಿಳಿಸಿದರು.
ಇಷ್ಟೇ ಅಲ್ಲದೇ ಮತ್ತೊಂದು ಕಡೆ, ಡಿಕೆಶಿ ಅವರ ಮನವಿಯನನ್ನೂ ನ್ಯಾಯಾದೀಶರು ಪುರಸ್ಕಾರ ಮಾಡಿದ್ದಾರೆ. ಹೌದು, ಪ್ರತಿ ದಿನ ಅರ್ಧಗಂಟೆ ಕುಟುಂಬದ ಸದಸ್ಯರನ್ನು ಭೇಟಿ ಆಗಬಹುದು ಎಂದು ಹೇಳಿದ್ದಾರೆ. 

ಇಷ್ಟೇ ಅಲ್ಲದೇ, ಒಂದುವೇಳೆ ಅನಾರೋಗ್ಯದ ಸಮಸ್ಯೆ ಇದ್ದರೆ ಅವರ ಪರ್ಸನಲ್ ಡಾಕ್ಟರ್ ರಂಗನಾಥ್ ಅವರನ್ನು ಹೊಂದಲು ಅನುಮತಿ ನೀಡಿದರು. ಜೊತೆಗೆ ತಮ್ಮ ವಕೀಲರನ್ನೂ ಡಿಕೆಶಿ ಭೇಟಿಯಾಗಬಹುದು ಎಂದರು. 


Find Out More:

Related Articles: