ಅಂತೂ ಸಿದ್ದವಾಯ್ತು ಕೊರೋನಾ ವೈರಸ್ ಗೆ ಔಷಧಿ: ಅಷ್ಟಕ್ಕೂ ಈ ಔಷಧಿ ಸಿದ್ಧವಾದದ್ದು ಎಲ್ಲಿ ಗೊತ್ತಾ..?

Soma shekhar

ಸುಮಾರು ತಿಂಗಳಿಂದ ಇಡೀ ವಿಶ್ವವನ್ನು ಕಾಡುತ್ತಿರುವಂತಹ ಕೊರೋನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿ ಲಕ್ಷಾಂತರ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಜೊತೆಗೆ ಇನ್ನೂ ಕೊಟ್ಯಾಂತರ ಮಂದಿ ಕೊರೋನಾ ಸೋಂಕಿನಿಂದಾಗಿ ನರಳುತ್ತಿದ್ದಾರೆ, ಪ್ರತಿನಿತ್ಯ ಲಕ್ಷಾಂತರ ಕೊರೋನಾ ಕೇಸುಗಳು ದಾಖಲಾಗುತ್ತಿದೆ’. ಇಷ್ಟೆಲ್ಲಾ ವಿಶ್ವ ಸಂಕುಲಕ್ಕೆ ಮಾರಕವಾಗಿರುವ ಕೊರೋನಾವನ್ನು ನಾಶಮಾಡಲು ಜಗತ್ತಿನ ಅನೇಕ ದೇಶಗಳು ಕೊರೋನಾಗೆ ಔಷಧಿಯನ್ನು ಸಂಶೋಧಿಸಲಾಗುತ್ತಿತ್ತು, ಈಗಾಗಲೇ ಪ್ರಪಂಚದ ಅನೇಕ ದೇಶಗಳಲ್ಲಿ ಕೊರೋನಾಗೆ ಔಷಧಿಯನ್ನು ಸಂಶೋಧಿಸಿ ಕ್ಲಿನಿಕಲ್ ಪರೀಕ್ಷೆಯನ್ನು ಮಾಡುತ್ತಿದ್ದಾರೆ, ಅದರಂತೆ ಇಂದು ಆಕ್ಸ್​ಫರ್ಡ್​ ಯುನಿವರ್ಸಿಟಿ ನಡೆಸಿದ ಕೊರೋನಾ ಔಷಧಿಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ .

ಹೌದು ಇಂಗ್ಲೆಂಡ್​ನ ಆಕ್ಸ್​ಫರ್ಡ್​ ಯುನಿವರ್ಸಿಟಿ ವಿಜ್ಞಾನಿಗಳು ಕೊರೋನಾಗೆ ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಕಳೆದ ಏಪ್ರಿಲ್​ನಿಂದಲೂ ಇಲ್ಲಿನ ವಿಜ್ಞಾನಿಗಳು ಕೊರೋನಾಗೆ ಔಷಧ ಕಂಡುಹಿಡಿಯಲು ಸಂಶೋಧನೆ ನಡೆಸಿದ್ದರು. ಇದೀಗ ಕಂಡುಹಿಡಿದಿರುವ ಔಷಧಿಯಿಂದ ಕೋಟ್ಯಂತರ ಕೊರೋನಾ ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಏಪ್ರಿಲ್ ತಿಂಗಳಿನಿಂದ ಕೊರೋನಾಗೆ ಔಷಧ ಕಂಡುಹಿಡಿಯಲು ಇಂಗ್ಲೆಂಡ್​ನಲ್ಲಿ ಸಂಶೋಧನೆಗಳು ನಡೆಯುತ್ತಿತ್ತು. 1,000 ಕೊರೋನಾ ರೋಗಿಗಳ ಮೇಲೆ ಈ ಪ್ರಯೋಗವನ್ನು ಮಾಡಲಾಗಿತ್ತು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಕೊರೋನಾ ಔಷಧಿಯ ಪ್ರಯೋಗವನ್ನು ನಡೆಸಲಾಗಿತ್ತು. ಇದೀಗ ನಡೆಸಿರುವ ಪ್ರಯೋಗದಲ್ಲಿ ಈ ಔಷಧಿಗಳು ರೋಗಿಗಳ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಇಂದು ಲ್ಯಾನ್ಲೆಟ್ ಎಂಬ ಮೆಡಿಕಲ್ ಪತ್ರಿಕೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಿಂದ ಸಿದ್ಧಪಡಿಸಲಾಗಿರುವ ಔಷಧವನ್ನು ಎರಡು ಹಂತಗಳಲ್ಲಿ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದೆ. 18ರಿಂದ 55 ವರ್ಷದವರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ. ಎಲ್ಲರೂ ಔಷಧಿಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಔಷಧದ 3 ನೇ ಪ್ರಯೋಗ ಯಶಸ್ವಿಯಾದರೆ 200 ಕೋಟಿ ಔಷಧ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಔಷಧಕ್ಕೆ AZD 1222 ಎಂದು ಹೆಸರಿಡಲಾಗಿದೆ.

ಬ್ರೆಜಿಲ್ ನಲ್ಲಿ ಆಕ್ಸ್ ಫರ್ಡ್ ವಿವಿಯ ಔಷಧ ಪ್ರಯೋಗ ಯಶಸ್ವಿಯಾಗಿದೆ. ಸದ್ಯ ಪ್ರಾಣಿಗಳ ಮೇಲೆ ಔಷಧ ಪ್ರಯೋಗ ಯಶಸ್ವಿಯಾಗಿದೆ. ಮನುಷ್ಯರ ಮೇಲೆ ಮೂರನೇ ಹಂತದ ಪ್ರಯೋಗ ಮಾತ್ರ ಬಾಕಿ ಉಳಿದಿದೆ. ಮೂರನೆ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧ ಪ್ರಯೋಗಿಸಲಾಗುವುದು.



ಆಸ್ಟ್ರಾಜೆನೆಕ್ ಫಾರ್ಮಾಸುಟಿಕಲ್ಸ್​ ಸಹಯೋಗದಲ್ಲಿ ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್​ ಯುನಿವರ್ಸಿಟಿ ಔಷಧವನ್ನು ಕಂಡುಹಿಡಿದಿದೆ. ಈ ಪ್ರಯೋಗ ಯಶಸ್ವಿಯೂ ಆಗಿದೆ. ಇನ್ನು ಒಂದು ಹಂತದ ಪ್ರಯೋಗ ಮಾಡುವುದು ಬಾಕಿ ಇದೆ. ಒಂದುವೇಳೆ ಈ ಔಷಧ ಯಶಸ್ವಿಯಾದರೆ 200 ಕೋಟಿ ಔಷಧವನ್ನು ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ.

ಸದ್ಯಕ್ಕೆ ಕಂಡುಹಿಡಿಯಲಾಗಿರುವ ಔಷಧಿಯಿಂದ ಜ್ವರ, ಚಳಿ, ಮೈಕೈ ನೋವು ಮುಂತಾದ ಸಣ್ಣಪುಟ್ಟ ಸೈಡ್ ಎಫೆಕ್ಟ್​ ಉಂಟಾಗುತ್ತಿದೆ. ಅಮೆರಿಕದಲ್ಲೂ ಸದ್ಯದಲ್ಲೇ 30,000 ರೋಗಿಗಳ ಮೇಲೆ ಔಷಧದ ಪ್ರಯೋಗ ನಡೆಯಲಿದೆ. ವಿಶ್ವಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ಮಿತಿ ಮೀರುತ್ತಿರುವುದರಿಂದ ಇದೀಗ ಕಂಡುಹಿಡಿಯುವ ಔಷಧದ ಬಗ್ಗೆ ನಿರೀಕ್ಷೆಗಳೂ ಹೆಚ್ಚಾಗಿವೆ.

Find Out More:

Related Articles: