ಕೋವಿಡ್-19 ನಿಧಿಗೆ ಯಾವಯಾವ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಕೊರೊನಾ ವೈರಸ್ ಇಡೀ ವಿಶ್ವವ್ಯಾಪಿ ಆವರಿಸಿಕೊಂಡು ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದೆ ಅದೇ ರೀತಿ ಭಾರತದಲ್ಲೂ ಕೂಡ ಸಾಕಷ್ಟು ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದನ್ನು ತಡೆಯುವ ಉದ್ದೇಶಿದದಿಂದ ಲಾಕ್ ಡೌನ್ ಮಾಡಿರುವುದರಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಇದರ ವಿರುದ್ಧ ಹೋರಾಡುವುದಕ್ಕೆ ಇದಕ್ಕೆ ಸಾಕಷ್ಟು ಸಿನಿಮಾ ತಾರೆಗಳು ಹಾಗೂ ಕ್ರೀಡಾ ತಾರೆಗಳು ಸಹಕಾರವನ್ನು ನೀಡಿದ್ದಾರೆ ಅಷ್ಟಕ್ಕೂ ಕೊರೋನಾ ವೈರಸ್ ನಿಧಿಗೆ ಯಾರ್ಯಾರು ಸಹಾಯಹಸ್ತ ಚಾಚಿದ್ದಾರೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ನಮೋ ಮನವಿ ಮಾಡಿಕೊಳ್ಳುತ್ತಿದ್ದಂತೆ ಪಿಎಂ ಕೇರ್ಸ್ ನಿಧಿಗೆ ಕೋಟ್ಯಂತರ ರೂ ಹರಿದು ಬರುತ್ತಿದೆ. ಅನೇಕ ಸಂಘ-ಸಂಸ್ಥೆಗಳು, ಕಂಪನಿಗಳು, ಬಾಲಿವುಡ್ ಸ್ಟಾರ್ಸ್ ಇದೀಗ ತಮ್ಮ ಕೈಯಿಂದ ಆದ ಸಹಾಯ ನೀಡಿದ್ದು, ಇದೀಗ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ 1.25 ಕೋಟಿ ರೂ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಕೊರೊನಾ ವೈರಸ್ನಿಂದ ಬಳಲುತ್ತಿರುವವರ ಸಹಾಯಕ್ಕೆ ನಿಂತಿರುವ ಟೆನ್ನಿಸ್ ಆಟಗಾರ್ತಿ ಇದೀಗ ತಮ್ಮ ಕೈಯಿಂದ ಆದ ಸಹಾಯ ನೀಡಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ 50 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ.
ಈಗಾಗಲೇ ಸುರೇಶ್ ರೈನಾ 31 ಕೋಟಿ ಪಿಎಂ ಕೇರ್ಸ್ ನಿಧಿಗೆ ಹಾಗೂ 212 ಲಕ್ಷ ಯುಪಿ ಸಿಎಂ ನಿಧಿಗೆ ನೀಡಿದ್ದು, ಸಚಿನ್ ತೆಂಡೂಲ್ಕರ್ ಕೂಡ 25 ಲಕ್ಷ ಪಿಎಂ ಕೇರ್ಸ್ ನಿಧಿ ಹಾಗೂ 25 ಲಕ್ಷ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಉಳಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಹಿಮಾ ದಾಸ್, ಪಿವಿ ಸಿಂಧು, ಕುಸ್ತುಪಟು ಭಜರಂಗಿ ಪೂನಿಯಾ ಧನ ಸಹಾಯ ಮಾಡಿದ್ದಾರೆ. ದೇಶದಲ್ಲಿ 1071 ಕೋವಿಡ್ ಕೇಸ್ಗಳಿವೆ. ಅದರಲ್ಲಿ 99 ಜನರು ಗುಣಮುಖರಾಗಿದ್ದು, ಒಟ್ಟು 30 ಜನರು ಸಾವನ್ನಪ್ಪಿದ್ದಾರೆ.