ವಿಧಿವಿಧಾನ ಇಲ್ಲದೇ ಪಂಚಭೂತಗಳಲ್ಲಿ ಕಾರ್ನಾಡ್ ಲೀನ

frame ವಿಧಿವಿಧಾನ ಇಲ್ಲದೇ ಪಂಚಭೂತಗಳಲ್ಲಿ ಕಾರ್ನಾಡ್ ಲೀನ

somashekhar

ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡದ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಬಹು ಅಂಗಾಗಂಗ ವೈಫಲ್ಯದಿಂದ ಸೋಮವಾರ ನಿಧನರಾದರು. 81 ವರ್ಷದ ವಯಸ್ಸಿನ ಅವರು, ಯಾವುದೇ ಧಾರ್ಮಿಕ ವಿಧಿ ವಿಧಾನ ಇಲ್ಲದೇ ಅಂತ್ಯಕ್ರಿಯೆ ಮಾಡಿ ಎಂದಿದ್ದರು.

 

ಇದೀಗ ಅದೇ ರೀತಿ ಗಿರೀಶ್ ಕಾರ್ನಾಡ್ ಅವರ ಅಂತ್ಯ ಕ್ರಿಯೆ ನೆರವೇರಿದೆ. ಹೌದು ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಯಾವುದೇ ಸರಕಾರಿ ಗೌರವ ಹಾಗೂ ವಿಧಿ ವಿಧಾನಗಳಿಲ್ಲದೇ ಕಾರ್ನಾಡ್ ಅವರ ಅಂತ್ಯಕ್ರಿಯೆ ನೆರವೇರಿದೆ. 

 

ಕಾರ್ನಾಡ್ ಅವರ ಆಶಯದಂತೆ ಹಿರಿಯ ಪುತ್ರ ರಘೂ ಅವರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಕೇವಲ ಕುಟುಂಬಸ್ಥರಿಗೆ ಹಾಗೂ ಬಂಧು ಮಿತ್ರರಿಗೆ ಮಾತ್ರ ಕಾರ್ನಾಡ್ ಅವರ ಅಂತಿಮ‌ ದರ್ಶನ ಮಾಡುವ ಅವಕಾಶ ಇತ್ತು. 

Find Out More:

Related Articles:

Unable to Load More