ಪುನಿತ್ ರಾಜ್ ಕುಮಾರ್ ಲಾಕ್ ಡೌನ್ ಸಮಯದಲ್ಲಿ ಈ ವಿಷಯಗಳನ್ನು ಕಲಿತರಂತೆ..!!

Soma shekhar
ಕೊರೋನಾ ವೈರಸ್ ಇಂದಾಗಿ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಚೀತ್ರೀಕರಣ ಹಾಗೂ  ಎಲ್ಲಾ ಚಿತ್ರೋಧ್ಯಮಗಳು ಬಂದ್ ಆಗಿದ್ದವು ಈ ಸಂದರಭದಲ್ಲಿ ಅನೇಕ ಖ್ಯಾತನಾವರು ವಿವಿಧ ಚಟುವಟಿಕೆಗಳಲ್ಲಿ  ತೊಡಗಿಕೊಂಡು ಕಾಲವನ್ನು ಕಳೆಯುತ್ತಿದ್ದಾರೆ,. ಅದರಂತೆ  ಪುನಿತ್ ರಾಜ್ ಕುಮಾರ್ ಕೂಡ ಇಂತಹ ಲಾಕ್ ಡೌನ್ ಸಮಯದಲ್ಲಿ ಹಲವು ವಿಷಯಗಳನ್ನು ಕಲಿತುಕೊಂಡಿದ್ದಾರೆ. ಈ ಕುರಿತು ಪುನಿತ್ ರಾಜ್ ಕುಮಾರ್ ಇನ್ಸ್ಟ್ರಾ ಗ್ರಾಂನ ಲೈವ್ ನಲ್ಲಿ ಹಂಚಿಕೊಂಡಿದ್ದಾರೆ.



ಪುನೀತ್ ರಾಜ್‌ಕುಮಾರ್ ಆಸಕ್ತಿಗಳ ವಿಸ್ತಾರ ದೊಡ್ಡದು. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಇನ್ನೊಂದಿಷ್ಟು ಹೊಸ ವಿಷಯಗಳ ಬಗ್ಗೆ ಪುನೀತ್ ತಿಳಿದುಕೊಂಡಿದ್ದಾರೆ. ಹೊಸ ವಿಷಯಗಳನ್ನು ಕಲಿತುಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ದಿನಚರಿ, ನೋಡಿದ ಸಿನಿಮಾಗಳು, ಭೇಟಿ ಮಾಡಿದ ವ್ಯಕ್ತಿಗಳು, ಕಲಿತ ಹೊಸ ವಿಷಯಗಳು ಇನ್ನೂ ಅನೇಕ ವಿಷಯಗಳನ್ನು ಪುನೀತ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.




ನಿನ್ನೆ (ಮಂಗಳವಾರ) ಸಂಜೆ ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದ ಪುನೀತ್ ರಾಜ್‌ಕುಮಾರ್, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಷ್ಟದ ನಟ, ನೆಚ್ಚಿನ ಡಾನ್ಸರ್, ಸಿನಿಮಾ, ಕಲಿತ ಹೊಸ ವಿಷಯ, ಹೊಸ ಸಿನಿಮಾ ಬಿಡುಗಡೆ, ತಮ್ಮ ಪ್ರೊಡಕ್ಷನ್ ಹೌಸ್ ಹೀಗೆ ಹಲವು ವಿಷಯಗಳ ಬಗ್ಗೆ ಪುನೀತ್ ಮಾತನಾಡಿದ್ದಾರೆ.




ಲಾಕ್‌ಡೌನ್ ಸಮಯದಲ್ಲಿ ತಾವು ಎಲ್ಲಿಯೂ ಹೊರಗೆ ಹೋಗಲಿಲ್ಲ ಎಂಬ ಪುನೀತ್ ಆ ಸಮಯದಲ್ಲಿ ಅಡುಗೆ ಮಾಡುವುದನ್ನು ಕಲಿತಿದ್ದಾಗಿ ಹಾಗೂ ಹಲವಾರು ಸಿನಿಮಾ ಹಾಗೂ ವೆಬ್ ಸೀರೀಸ್‌ಗಳನ್ನು ನೋಡಿದ್ದಾಗಿ ಹೇಳಿದರು. ಅನ್‌ಲಾಕ್ ಪ್ರಾರಂಭವಾದಾಗ ಸೈಕ್ಲಿಂಗ್‌ಗೆ ಹೋಗಿದ್ದರಂತೆ.


ಯುವರತ್ನ ಸಿನಿಮಾ ಬಗ್ಗೆ ಮಾತನಾಡಿದ ಪುನೀತ್ ರಾಜ್‌ಕುಮಾರ್, ಸಿನಿಮಾ ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಶೀಘ್ರದಲ್ಲಿಯೇ ಮುಗಿಸಲಾಗುತ್ತದೆ ಎಂದರು.


ತಮ್ಮ ಪ್ರೊಡಕ್ಷನ್‌ನ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆದ ಬಗ್ಗೆ ಮಾತನಾಡಿದ ಅವರು, ಲಾ ಹಾಗೂ ಫ್ರೆಂಚ್ ಬಿರಿಯಾನಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಇದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಕೊರೊನಾ ಸಮಯದಲ್ಲಿ ಎಲ್ಲರೂ ಜಾಗೃತೆಯಿಂದ ಇರಿರೆಂದು ಎಚ್ಚರಿಕೆಯನ್ನು ಪುನೀತ್ ನೀಡಿದರು.

Find Out More:

Related Articles: