'ಪಿಂಕ್ ಸಾರಥಿ' ಬಿಡುಗಡೆ ಮಾಡಿದ ಸಿಎಂ

somashekhar

ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲದಂತೆ ಆಗಿದೆ. ಹೀಗಾಗಿ ಮಹಿಳಾ ಸುರಕ್ಷತೆಗಾಗಿ ಹೊಸ ಯೋಜನೆ ಇದೀಗ ಅನಾವರಣಗೊಂಡಿದೆ. ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪಿಂಕ್ ಸಾರಥಿ ಜೀಪುಗಳನ್ನು ಖರೀದಿಸಲಾಗಿದೆ.

 

 

ಹೌದು ಮಹಿಳಾ ಸುರಕ್ಷತೆ ದೃಷ್ಟಿಯಿಂದ ಖರೀದಿಸಿದ ಈ ಪಿಂಕ್ ಸಾರಥಿ ಜೀಪ್ ಗಳನ್ನು ಮುಖ್ಯಮಂತ್ರಿ ಹೆ.ಡಿ.ಕುಮಾರಸ್ವಾಮಿ ಇಂದು ವಿಧಾನ ಸೌದದ ಮುಂಭಾಗದಲ್ಲಿ ಲೋಕಾರ್ಪಣೆ ಮಾಡಿದರು.

 

 

ಇಂದು ವಿಧಾನಸೌಧದ ಎದುರು ಸಿಎಂ‌ ಕುಮಾರಸ್ವಾಮಿ ಹಾಗೂ ಇತರರು ವಿವಿಧ ಹೊಸ ಯೋಜನೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹಾಗೂ ಪ್ರಮುಖರು ಹಾಜರಿದ್ದರು.

 

Find Out More:

Related Articles: