ಐದನೇ ಅನ್ ಲಾಕ್ ಪ್ರಕ್ರಿಯೆಯ ಮಾರ್ಗಸೂಚಿಯಲ್ಲಿರುವ ಅಂಶಗಳೇನು..?

Soma shekhar
ಭಾರತ ನಿದಾನವಾಗಿ ಲಾಕ್ ಡೌನ್ ನಿಂದ  ಅನ್ ಲಾಕ್ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ಐದನೇ ಅನ್ ಲಾಕ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಘೋಷಣೆಯನ್ನು ಮಾಡಿದೆ ಈ ಪ್ರಕ್ರಿಯೆಗೆ ಸಂಬಂದಿಸಿದಂತೆ ಮಾರ್ಗಸೂಚಿಯನ್ನೂ ಕೂಡ ಬಿಡುಗಡೆ ಮಾಡಿದೆ. ಅಷ್ಟಕ್ಕೂ ಐದನೇ ಅನ್ ಲಾಕ್ ಪ್ರಕ್ರಿಯೆಯ ಮಾರ್ಗಸೂಚಿಯಲ್ಲಿ ಏನಿದೆ..?  

ಕೋವಿಡ್ 19 ಸಂಬಂಧಿತ ಅನ್ ಲಾಕ್ ಪ್ರಕ್ರಿಯೆಯನ್ನು ಇನ್ನಷ್ಟು ಸಡಿಲಗೊಳಿಸಿರುವ ಕೇಂದ್ರ ಗೃಹ ಸಚಿವಾಲಯವು ಬಹು ನಿರೀಕ್ಷಿತ ಸಿನೆಮಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳ ಭಾಗಶಃ ಕಾರ್ಯನಿರ್ವಹಣೆಗೆ ಅನುಮತಿ ನೀಡಿದೆ. ಈ ಅನ್ ಲಾಕ್ 5 ಅಕ್ಟೋಬರ್ 15ರಿಂದ ಜಾರಿಗೊಳ್ಳಲಿದೆ.ಶಾಲೆ ಮತ್ತು ಕೋಚಿಂಗ್ ಸೆಂಟರ್ ಗಳನ್ನೂ ಸಹ ಅಕ್ಟೋಬರ್ 15ರ ನಂತರ ತೆರೆಯಲು ಕೇಂದ್ರ ಅನುಮತಿ ನೀಡಿದೆ. ಆದರೆ ಈ ಕುರಿತಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಆಯಾ ರಾಜ್ಯಗಳಿಗೇ ನೀಡಲಾಗಿದೆ.

ಅನ್ ಲಾಕ್ 5ರ ನಿಯಮಾವಳಿಗಳು ಹೀಗಿವೆ:
– ಸಿನೆಮಾ ಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಮತ್ತು ರಂಗ ಮಂದಿರಗಳನ್ನು ಅವುಗಳ ಒಟ್ಟು ಆಸನ ಸಾಮರ್ಥ್ಯದ 50% ಪ್ರೇಕ್ಷಕ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ.ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸದ್ಯದಲ್ಲೇ SOP ಹೊರಡಿಸಲಿದೆ.


– ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಪ್ರದರ್ಶನಗಳನ್ನು ತೆರೆಯಲು ಅನುಮತಿ ಮತ್ತು ಇದಕ್ಕಾಗಿ ವಾಣಿಜ್ಯ ಸಚಿವಾಲಯವು ಸದ್ಯದಲ್ಲೇ SOP ಹೊರಡಿಸಲಿದೆ.– ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ಅನುಮತಿ. ಇದಕ್ಕಾಗಿ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು SOP ಹೊರಡಿಸಲಿದೆ.
– ಮನರಂಜನಾ ಪಾರ್ಕ್ ಗಳು ಹಾಗೂ ಇದೇ ರೀತಿಯ ಮನರಂಜನಾ ಸ್ಥಳಗಳನ್ನು ತೆರೆಯಲು ಅನುಮತಿ. ಇದಕ್ಕೆ ಸಂಬಂಧಿಸಿದ SOPಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಲಿದೆ.
– ಶಾಲೆಗಳು ಮತ್ತು ಕೋಚಿಂಗ್ ಇನ್ಸ್ಟಿಟ್ಯೂಟ್ ಗಳನ್ನು ಗ್ರೇಡ್ ಆಧಾರದಲ್ಲಿ ಅಕ್ಟೋಬರ್ 15ರ ಬಳಿಕ ತೆರೆಯುವ ಸಂಬಂಧ ಆಯಾಯ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.
– ಸಂಬಂಧಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಸೂಕ್ತವಾಗಿ ಚರ್ಚಿಸಿ ಮತ್ತು ಕೋವಿಡ್ 19 ಪರಿಸ್ಥಿತಿಯನ್ನು ನಿಭಾಯಿಸಲು ಅಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
– ಈಗಾಗಲೇ ಜಾರಿಯಲ್ಲಿರುವ ಆನ್ ಲೈನ್ / ದೂರ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವಂತೆಯೂ ಸೂಚಿಸಲಾಗಿದೆ.

 

 

ಆನ್ ಲೈನ್ ಶಿಕ್ಷಣವನ್ನು ನೀಡುತ್ತಿರುವ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಬದಲು ಆನ್ ಲೈನ್ ಶಿಕ್ಷಣವನ್ನೇ ಆಯ್ದುಕೊಳ್ಳಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣದ ಆಯ್ಕೆಯನ್ನು ನೀಡುವಂತೆಯೂ ಈ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.ಹೆತ್ತವರ ಲಿಖಿತ ಅನುಮತಿಯಿದ್ದಲ್ಲಿ ಮಾತ್ರವೇ ವಿದ್ಯಾರ್ಥಿಗಳು ಶಾಲೆ ಶಿಕ್ಷಣ ಸಂಸ್ಥೆಗಳ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.


 

 

ಶಿಕ್ಷಣ ಸಂಸ್ಥೆಗಳು ಹಾಜರಾತಿ ವಿಧಾನವನ್ನು ಅನ್ವಯಿಸಬಾರದು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ಅಥವಾ ಕಳುಹಿಸದೇ ಇರುವ ನಿರ್ಧಾರವನ್ನು ಪೋಷಕರಿಗೇ ನೀಡಬೇಕು.
– ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಶಿಕ್ಷಣ ಸಚಿವಾಲಯವು ಕಾಲೇಜುಗಳು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಅವಧಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
– ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಶಿಕ್ಷಣ ಸಚಿವಾಲಯವು ಕಾಲೇಜುಗಳು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಅವಧಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

Find Out More:

Related Articles: