ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೇರಿಕನ್ನರಿಗೆ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?

Soma shekhar
 

ಕೊರೋನಾ ವೈರಸ್ ಇಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ, ಈ ಕೊರೋನಾ ವೈರಸ್ಗೆ ಲಕ್ಷಾಂತರ ಮಂದಿ ಪ್ರಾಣವನ್ನು ಬಿಟ್ಟಿದ್ದಾರೆ, ಕೊಟ್ಯಾಂತರ ಕೊರೋನಾ ಸುಳಿಯಲ್ಲಿ ನರಳುತ್ತಿದ್ದಾರೆ, ಇದನ್ನು ತಪ್ಪಿಸುವ ಸಲುವಾಗಿ ಇಡೀ ವಿಶ್ವದಾಧ್ಯಂತ ಕೊರೋನಾ ವೈರಸ್ ಗಾಗಿ ಔಷಧಿಯನ್ನು ತಯಾರಿಸಲಾಗುತ್ತಿದೆ, ಇನ್ನು ಕೆಲವು ರಾಷ್ಟ್ರಗಳ ಔಷಧಿ ಈಗಾಗಲೇ ತಯಾರಿಸಿದ್ದು ಇನ್ನೇನು ಮಾರುಕಟ್ಟೆಗೆ ಬರುವ ಪ್ರಯತ್ನದಲ್ಲಿದೆ. ಆದರೆ ಅಮೇರಿಕಾ ಮಾತ್ರ ಈಗಾಗಲೇ ತನ್ನ ಜನರಿಗೆ ಕೊರೋನಾ ಔಷಧಿಯ ವಿಚಾರದಲ್ಲಿ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಅಷ್ಟಕ್ಕೂ ಆ ಸಿಹಿ ಸುದ್ದಿ ಏನು ಗೊತ್ತಾ..?


 

 

ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಅಮೆರಿಕಾದಲ್ಲೂ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಆತಂಕದ ಪರಿಸ್ಥಿತಿಯ ನಡುವೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೋವಿಡ್-19 ಲಸಿಕೆಯನ್ನು ದೇಶದ ಪ್ರಜೆಗಳಿಗೆ ಉಚಿತವಾಗಿ ನೀಡುವುದಾಗಿ ಅಮೆರಿಕಾದ ಟ್ರಂಪ್ ಸರ್ಕಾರ ಘೋಷಿಸಿದೆ.



ಮುಂದಿನ ಜನವರಿ ವೇಳೆಗೆ ಅಮೆರಿಕಾದ ಎಲ್ಲರಿಗೂ ಉಚಿತ ಲಸಿಕೆ ಸಿಗಲಿದೆ ಎಂದು ಅಮೆರಿಕಾ ಸರ್ಕಾರ ಹೇಳಿದೆ. ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಟ್ರಂಪ್ ಸರ್ಕಾರದ ಲಸಿಕೆ ವಿತರಣೆ ಕಾರ್ಯಕ್ರಮದ ರೂಪುರೇಷೆಯನ್ನು ಅಮೆರಿಕಾದ ಆರೋಗ್ಯ ಮತ್ತು ರಕ್ಷಣಾ ಇಲಾಖೆ ಜಂಟಿಯಾಗಿ ಬಿಡುಗಡೆಗೊಳಿಸಿದವು.




ಪ್ರತಿ ಮನೆ ಮನೆಗೂ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೋವಿಡ್-19 ಲಸಿಕೆ ಪೂರೈಸುವ ಔಷಧ ಕಂಪನಿಗಳ ವೆಚ್ಚ ಭರಿಸುವುದಾಗಿ ಮತ್ತು ಲಸಿಕೆ ತೆಗೆದುಕೊಳ್ಳುವ ಜನರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಟ್ರಂಪ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಆರಂಭಿಕ ಹಂತದಲ್ಲಿ ಲಸಿಕೆ ಪೂರೈಕೆ ಸೀಮಿತವಾಗಿರಲಿದೆ. ಆರೋಗ್ಯ ಕಾರ್ಯಕರ್ತರು, ತುರ್ತು ಸೇವೆಯಲ್ಲಿ ನಿರತರಾಗಿರುವ ನೌಕರರು ಹಾಗೂ ಬಡವರಿಗೆ ಟ್ರಂಪ್ ಸರ್ಕಾರ ಮೊದಲ ಆದ್ಯತೆ ನೀಡಲು ನಿರ್ಧರಿಸಿದೆ.




ಒಟ್ಟು 7 ಔಷಧ ತಯಾರಿಕಾ ಕಂಪನಿಗಳಿಗೆ ಸರ್ಕಾರ ಕೋವಿಡ್-19 ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನೆಯ ಹೊಣೆ ನೀಡಿದೆ. ಈಗಾಗಲೇ ಅಮೆರಿಕಾದಲ್ಲಿ ಮುಂಚೂಣಿಯಲ್ಲಿರುವ ಕೆಲವು ಕಂಪನಿಗಳು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ನಿರತವಾಗಿವೆ. ಆದರೆ, ಅಮೆರಿಕಾ ಸರ್ಕಾರದ ಪ್ರಾಯೋಜಕತ್ವದ ಯಾವುದಾದರೂ ಲಸಿಕೆ ಯಶಸ್ವಿಯಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕಾದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ಅಮೆರಿಕಾದಲ್ಲಿ ಕೊರೊನಾ ಪೀಡಿತರ ಸಂಖ್ಯೆ 66,16,458ಕ್ಕೆ ತಲುಪಿದೆ. ಇದುವರೆಗೆ 1,96,436 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Find Out More:

Related Articles: