ಸ್ಮಾರ್ಟ್ ಸಿಟಿ ಸೂಚ್ಯಾಂಕದಲ್ಲಿ ಭಾರತದ ಈ ನಗರಗಳು ಸ್ಥಾನ ಎಷ್ಟನೆಯದು..?

Soma shekhar
ಇಂದು ಜಗತ್ತು ತಂತ್ರಜ್ಞಾನದ ವಿಷಯದಲ್ಲಿ ತುಂಬಾ ಮುಂದುವರೆಯುತ್ತಿದೆ,  ಇದರ ಪರಿಣಾಮವಾಗಿ ಇಂದು ವಿಶ್ವವು ಸ್ಮಾರ್ಟ್ ಆಗುವತ್ತ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ, ಪ್ರತಿಯೊಂದು ವಿಷಯದಲ್ಲೂ ಡಿಜಿಟಲೀಕರಣವನ್ನು ಅನುಸರಿಸುವುದನ್ನು ಇಂದು ಅಭಿವೃದ್ಧಿಯ ಸಂಕೇತ ಎಂದು ಸೂಚಿಸಲಾಗುತ್ತಿದೆ. ಅಂತಹ ತಂತ್ರಜ್ಞಾನವನ್ನು ಬಳಸುವಂತಹ ಸ್ಮಾರ್ಟ್ ಸಿಟಿ ಸೂಚ್ಯಾಂಕದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದ ಭಾರತದ ನಗರಗಳ ಸ್ಥಾನ ಕುಸಿದಿದೆ.


 

 

ಹೌದು ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಕುಸಿಯುತ್ತಿದ್ದು ಸಿಂಗಾಪುರ ಸ್ಥಾನ ಪಡೆದಿದೆ. ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್(ಐಎಮ್‌ಡಿ), ಸಿಂಗಾಪುರ್ ಯೂನಿವರ್ಸಿಟಿ ಫಾರ್ ಟೆಕ್ನಾಲಜಿ ಅಂಡ್ ಡಿಸೈನ್ (ಎಸ್‌ಯುಟಿಡಿ) ಸಹಯೋಗದೊಂದಿಗೆ 2020ರ ಸ್ಮಾರ್ಟ್ ಸಿಟಿ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಕೋವಿಡ್ 19 ಯುಗದಲ್ಲಿ ತಂತ್ರಜ್ಞಾನವು ಹೇಗೆ ಪಾತ್ರವಹಿಸುತ್ತಿದೆ ಎಂಬುದರ ಕುರಿತು ಪ್ರಮುಖ ಆವಿಷ್ಕಾರಗಳನ್ನು ಹೊಂದಿದೆ.
2020ರ ಸ್ಮಾರ್ಟ್ ಸಿಟಿ ಸೂಚ್ಯಂಕದಲ್ಲಿ ಹೈದರಾಬಾದ್ 85ನೇ ಸ್ಥಾನದಲ್ಲಿದೆ (2019ರಲ್ಲಿ 67ನೇ ಸ್ಥಾನದಲ್ಲಿತ್ತು), ನವದೆಹಲಿ 86 ನೇ ಸ್ಥಾನದಲ್ಲಿದೆ (2019ರಲ್ಲಿ 68ನೇ ಸ್ಥಾನ ಪಡೆದಿತ್ತು), ಮುಂಬೈ 93ನೇ ಸ್ಥಾನದಲ್ಲಿದೆ (2019ರಲ್ಲಿ ಅದು 78ನೇ ಸ್ಥಾನದಲ್ಲಿತ್ತು) ಮತ್ತು ಬೆಂಗಳೂರು 95ನೇ ಸ್ಥಾನದಲ್ಲಿದೆ(2019 ರಲ್ಲಿ 79ನೇ ಸ್ಥಾನ ಪಡೆದಿತ್ತು). ಭಾರತದ ನಗರಗಳಾದ(ನವದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು) ಈ ವರ್ಷ ಗಮನಾರ್ಹ ಕುಸಿತವನ್ನು ಕಂಡಿವೆ. ತಾಂತ್ರಿಕ ಪ್ರಗತಿಯು ನವೀಕೃತವಾಗಿಲ್ಲದಿರುವಲ್ಲಿ ಸಾಂಕ್ರಾಮಿಕ ರೋಗವು ಉಂಟುಮಾಡಿದ ಹಾನಿಕಾರಕ ಪರಿಣಾಮಕ್ಕೆ ಇದು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಭಾರತೀಯ ನಗರಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿವೆ ಏಕೆಂದರೆ ಅವುಗಳು ಕೊರೋನಾ ವಿರುದ್ಧ ಹೋರಾಡಲು ಸಿದ್ಧವಾಗಿಲ್ಲ ಎಂದು ವರದಿಯಲ್ಲಿ ಹೇಳಿದೆ. ಮಬೆಂಗಳೂರು ಮತ್ತು ಮುಂಬೈನಂತಹ ನಗರಗಳಿಗೆ ಇದು ರಸ್ತೆ ದಟ್ಟಣೆಯನ್ನು ನಿಕಟವಾಗಿ ಅನುಸರಿಸಿದರೆ ದೆಹಲಿ ಮತ್ತು ಹೈದರಾಬಾದ್‌ಗೆ ಇದು ಮೂಲ ಸೌಕರ್ಯವಾಗಿದೆ ಎಂದು ವರದಿ ತಿಳಿಸಿದೆ.
2020 ಸ್ಮಾರ್ಟ್ ಸಿಟಿ ಇಂಡೆಕ್ಸ್ (ಎಸ್‌ಸಿಐ) ಸಿಂಗಾಪುರದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹೆಲ್ಸಿಂಕಿ ಮತ್ತು ಜುರಿಚ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಟಾಪ್ 10 ಪಟ್ಟಿಯಲ್ಲಿ ಆಕ್ಲೆಂಡ್(4ನೇ), ಓಸ್ಲೋ(5ನೇ ಸ್ಥಾನ), ಕೋಪನ್ ಹ್ಯಾಗನ್(6ನೇ ಸ್ಥಾನ), ಜಿನೀವಾ (7ನೇ ಸ್ಥಾನ), ತೈಪೆ ನಗರ (8ನೇ ಸ್ಥಾನ), ಆಮ್ಸ್ಟರ್‌ಡ್ಯಾಮ್ (9ನೇ ಸ್ಥಾನ) ಮತ್ತು ನ್ಯೂಯಾರ್ಕ್ 10ನೇ ಸ್ಥಾನದಲ್ಲಿದ್ದಾರೆ.

Find Out More:

Related Articles: