
ಹ್ಯಾಟ್ರಿಕ್ ಹೀರೋ ಶಿವಣ್ಣನ ಹುಟ್ಟು ಹಬ್ಬವನ್ನು ಅಭಿಮಾನಿಗಳು ಯಾವರೀತಿ ಆಚರಿಸಲಿದ್ದಾರೆ ಗೊತ್ತಾ..?
ಕೊರೋನಾ ವೈರಸ್ ಇಂದಾಗಿ ಚಿತ್ರ ರಂಗದಲ್ಲಿ ಯಾವುದೇ ಕೆಲಸ ಕಾರ್ಯಗಳು ಮುಂದೆ ಸಾಗದೆ ತಟಸ್ತವಾಗಿ ಬಿಟ್ಟಿದೆ. ಈ ಲಾಕ್ ಡೌನ್ ಟೈಮ್ ನಲ್ಲಿ ಬರುವ ಎಲ್ಲಾ ನಟ ನಟಿಯರ ಜನ್ಮ ದಿನವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ ಆದರೆ ಇವರ ಅಭಿಮಾನಿಗಳು ಜನ್ಮದಿನವನ್ನು ಆಚರಿಸದೆ ಬಿಡುತ್ತಾರೆಯೇ. ಇದಕ್ಕೊಂದು ಪರ್ಯಾಯ ಮಾರ್ಗವನ್ನು ಹುಡುಕೊಂಡು ತಮ್ಮ ನೆಚ್ಚಿನ ಹುಟ್ಟು ಹಬ್ಬವನ್ನು ಆಚರಿಸಿ ಸಂತೋಷವನ್ನು ಆಚರಿಸುತ್ತಾರೆ.
ಇನ್ನ ಸ್ಯಾಂಡಲ್ವುಡ್ನ ಸೆಂಚೂರಿ ಸ್ಟಾರ್ ಬರ್ತ್ಡೇ ಅಂದ್ರೆ ಸುಮ್ನೆನಾ ತಿಂಗಳುಗಟ್ಟಲೇ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ತಯಾರಿ ಮಾಡಿಕೊಳ್ತಾರೆ ಅಭೀಮಾನಿಗಳು. ಹುಟ್ಟುಹಬ್ಬದ ದಿನ ಮಧ್ಯರಾತ್ರಿಯಿಂದಲೇ ಶಿವಣ್ಣನ ಮನೆಮುಂದೆ ಜಮಾಯಿಸಿ, ಕೆಜಿಗಟ್ಟಲೆ ಕೇಕ್ ಕತ್ತರಿಸಿ, ಪಟಾಕಿ ಹೊಡೆದು,ಹೂಹಾರಗಳನ್ನ ಹಾಕಿ, ಹಬ್ಬದ ವಾತಾವರಣವನ್ನೇ ಸೃಷ್ಟಿಸಿ ಬಿಡ್ತಾರೆ. ಆದರೆ, ಈ ಬಾರಿ ಇದೆಲ್ಲಾ ಸಂಭ್ರಮಕ್ಕೆ ಬ್ರೇಕ್ ಹಾಕಿದೆ ಕೊರೊನಾ.
ಆರದೆ, ಹ್ಯಾಟ್ರಿಕ್ ಹೀರೋ ಬರ್ತ್ಡೇಯನ್ನ ನೇರವಾಗಿ ಸೆಲೆಬ್ರೇಟ್ ಮಾಡೋಕ್ಕೆ ಆಗದೇ ಇದ್ರೂ, ಈಗಾಗ್ಲೇ ದೊಡ್ಮನೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಆಚರಣೆ ಶುರುಮಾಡಿದ್ದಾರೆ. ಶಿವಣ್ಣನ ಮಹೋತ್ಸವ ಅಂತ ಈಗಾಗ್ಲೇ ಕಾಮನ್ ಡಿಪಿ ಮತ್ತು ಲೊಗೋವೊಂದನ್ನ ರೆಡಿಮಾಡಿ, ಇದನ್ನ ಗೀತಾ ಶಿವರಾಜ್ ಕುಮಾರ್ ಕೈಯಲ್ಲಿ ಬಿಡುಗಡೆ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದೀಗ ಸಂಭ್ರಮಕ್ಕೆ ಮತ್ತೊಂದು ಸ್ವೀಟ್ ನ್ಯೂಸ್ ಆಯಡ್ ಆಗಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡದಿಂದ ಟೀಸರ್ ಬಿಡುಗಡೆ ಮಾಡಲಾಗ್ತಿದೆ. ಜುಲೈ 12 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಭಜರಂಗಿ 2 ಟೀಸರ್ ರಿಲೀಸ್ ಆಗ್ತಿದೆ.
ಭಜರಂಗಿ 2 ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗ್ಲೇ ಸಿನಿಮಾ ಮೇಲೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಭಜರಂಗಿ ಸಿನಿಮಾ ಸೂಪರ್ ಸಕ್ಸಸ್ ಬೆನ್ನಲ್ಲೇ ಭಜರಂಗಿ 2 ಚಿತ್ರಕ್ಕೂ ಬಹುದೊಡ್ಡ ನಿರೀಕ್ಷೆ ಇದೆ. ಎ ಹರ್ಷ ಮತ್ತು ಹ್ಯಾಟ್ರಿಕ್ ಹೀರೋ ಕಾಂಬಿನೇಷನ್ ಕೂಡ ಈ ಕುತೂಹಲಕ್ಕೆ ಮತ್ತೊಂದು ಕಾರಣವಾಗಿದ್ದು, ಈ ಹಿಂದೆ ಟಗರು ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿದ್ದ ಭಾವನಾ ಈ ಚಿತ್ರದಲ್ಲು ನಾಯಕಿಯಾಗಿ ಮಿಂಚ್ತಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ , ಈಗಾಗ್ಲೇ ಭಜರಂಗಿ 2 ಥೀಯೇಟರ್ ಅಂಗಳದಲ್ಲಿ ರಾರಾಜಿಸಬೇಕಿತ್ತು. ಆದರೆ, ಕೊರೊನಾ ಮಹಾಮಾರಿಯಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಒಟ್ನಲ್ಲಿ ಭಜರಂಗಿ 2 ಒಂದಷ್ಟು ಅಡೆತಡೆಗಳನ್ನ ದಾಟಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಆದಷ್ಟು ಬೇಗ ತೆರೆಗೆ ಬರ್ಲಿದೆ.