ಕನ್ನಡದ ಪೊಗರು ಸಿನಿಮಾ ಈ ಭಾಷೆಗಳಿಗೂ ಡಬ್ ಆಗುತ್ತಿದೆ..!!

Soma shekhar

ಸಾಕಷ್ಟು ಜನರ ನಿರೀಕ್ಷೆಯಲ್ಲಿರುವ ಧೃವಾ ಸರ್ಜಾ ಅಭಿನಯದ ಪೊಗರು ಸಿನಿಮಾದ ಚಿತ್ರೀಕರಣವು ಈಗಾಗಲೇ ಪೂರೈಸಿಕೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಮಾಡಿಕೊಳ್ಳಲಾಗುತ್ತದೆ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಪೊಗರು ಚಿತ್ರವು ಚಿತ್ರಮಂದಿರಕ್ಕೆ ಲಗ್ಗೆ  ಇಡುತ್ತಿತ್ತು. ಆದರೆ ಹಿಂದಿನ ಪರಿಸ್ಥಿತಿಯಲ್ಲಿ ಚಿತ್ರಮಂದಿರ ತೆರೆಯದ ಕಾರಣ ಪೊಗರು ಸಿನಿಮಾವನ್ನು ಮತ್ತೊಂದು ಭಾಷೆಗೂ ಡಬ್ ಮಾಡಲಾಗುತ್ತಿದೆ. ಅಷ್ಟಕ್ಕೂ ಈ ಪೊಗರು ಯಾವ ಭಾಷೆಗೆ ಡಬ್ ಆಗಿತ್ತಿದೆ ಗೊತ್ತಾ..?  

 

ಪೊಗರ್​ದಸ್ತ್​ ಟೈಟಲ್​. ಸುಕ್ಕಾ​​ ಕಂಟೆಂಟ್. ಜಬರ್​ದಸ್ತ್​​​​ ಹೀರೋ. ಪಕ್ಕಾ ಹಂಡ್ರೆಡ್​ ಪರ್ಸೆಟ್​​​​ ಮಾಸ್ ಪಿಕ್ಚರ್ ಪೊಗರು. ಸದ್ಯ ಪೊಗರು ಚಿತ್ರದ ಖರಾಬು ಸಾಂಗ್​ ಸೋಷಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾನೇ ಇದೆ. ಸಿನಿಮಾ ರಿಲೀಸ್​ಗೂ ಮೊದ್ಲೆ 92 ಮಿಲಿಯನ್ ವೀವ್ಸ್​ ಸಾಧಿಸಿ, ಸಾಂಗ್​ ಹೊಸ ದಾಖಲೆ ಬರೆದಿದೆ. ಕೊರೊನಾ ಹಾವಳಿಯ ನಡುವೆಯೂ ಪೊಗರು ಸಾಂಗ್​ ಸೌಂಡ್​ ಜೋರಾಗಿದೆ.

 

ನಂದ ಕಿಶೋರ್​ ನಿರ್ದೇಶನದ ಮಾಸ್​ ಮಸಾಲ ಸಿನಿಮಾ ಪೊಗರು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಧ್ರುವಗೆ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಡೈಲಾಗ್​ ಟೀಸರ್ ಮತ್ತು ಖರಾಬು ಸಾಂಗ್​ ಸೂಪರ್​ ಹಿಟ್​ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಸದ್ಯ ಕನ್ನಡದಲ್ಲಿ ದೊಡ್ಡ ಸಿನಿಮಾ ಅಂದಾಕ್ಷಣ ಪ್ಯಾನ್​ ಇಂಡಿಯಾ ರಿಲೀಸ್​ ಆಗುತ್ತಾ(?) ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಪೊಗರು ಸಿನಿಮಾ ಕೂಡ ಹಲವು ಭಾಷೆಗಳಲ್ಲಿ ಬರುತ್ತೆ ಅಂತ ಸುದ್ದಿಯಾಗಿತ್ತು. ಆದರೆ, ಪಕ್ಕಾ ಆಗಿರಲಿಲ್ಲ.

 

ಕನ್ನಡದಲ್ಲಿ ಸೂಪರ್​ ಹಿಟ್​ ಆಗಿರೋ ಖರಾಬು ಸಾಂಗ್​​​​ ತೆಲುಗಿನಲ್ಲಿ ರಿಲೀಸ್​ ಆಗ್ತಿದೆ. ಅರ್ಥಾತ್​ ಪೊಗರು ಸಿನಿಮಾ ತೆಲುಗಿಗೂ ಡಬ್​ ಆಗಿ ರಿಲೀಸ್​ ಆಗೋದು ಪಕ್ಕಾ ಆಗ್ತಿದೆ. ಆಗಷ್ಟ್ 6ಕ್ಕೆ ತೆಲುಗಿನಲ್ಲಿ ಧ್ರುವ ಖರಾಬು, ಖರಾಬು ಅಂತ ಹಾಡಿ ಕುಣಿಯಲಿದ್ದಾರೆ. ಕನ್ನಡದಲ್ಲಿ ಚೆಂದನ್​ ಶೆಟ್ಟಿ ಮ್ಯೂಸಿಕ್​ ಮಾಡಿ ಸಾಹಿತ್ಯ ಬರೆದು ಹಾಡಿರುವ ಪೊಗರು ಹಾಡನ್ನ ತೆಲುಗಿನಲ್ಲಿ ಅನುರಾಗ್​ ಸಿಂಗ್​ ಹಾಡಿದ್ದಾರೆ.

 

ಕನ್ನಡದಲ್ಲಿ 9 ಕೋಟಿಗೂ ಹೆಚ್ಚು ವೀವ್ಸ್​ ಸಾಧಿಸಿರೋ ಖರಾಬು ಸಾಂಗ್​ ತೆಲುಗಿನಲ್ಲಿ ಹೇಗೆ ಸೌಂಡ್​ ಮಾಡುತ್ತೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಎರಡು ಹಾಡಿನ ಶೂಟಿಂಗ್​ ಬಿಟ್ಟು ಪೊಗರು ಶೂಟಿಂಗ್​ ಬಹುತೇಕ ಕಂಪ್ಲೀಟ್​ ಆಗಿದೆ. ಆಗಷ್ಟ್​ನಲ್ಲಿ ಮತ್ತೆ ಶೂಟಿಂಗ್​ ಪ್ರಾರಂಭಿಸಲು ತಯಾರಿ ನಡೀತಿದೆ. ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಪೊಗರು ಸಿನಿಮಾ ಬರೋದು ಕನ್ಫರ್ಮ್​ ಆಗಿದೆ. ಇನ್ನು ಬೇರೆ ಯಾವ ಭಾಷೆಗೆ ಡಬ್​ ಆಗುತ್ತೋ ಕಾದು ನೋಡಬೇಕು.

 

Find Out More:

Related Articles: