ಬೆಂಗಳೂರು: ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ನಟರ ದರ್ಶನ್ ಬರೀ ಸಿನಿಮಾಗಳಷ್ಟೇ ಅಲ್ಲ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿದ್ದರು. ಆದರೆ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆಗಳನ್ನು ನೀಡಿದ್ದಾರೆ. ಆದ್ದರಿಂದ ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ.
ಧ್ರುವ ಸಿನಿಮಾದಲ್ಲಿ ಡಿಬಾಸ್ ದರ್ಶನ್ ಹೀಗೆ ನೋ ಪಾಲಿಟಿಕ್ಸ್ ನೋ ಪಾಲಿಟಿಕ್ಸ್ ಅಂತ ಹಾಡಿ ಕುಣಿದಿದ್ರು. ಸುಂಟರಗಾಳಿ ಸಿನಿಮಾದಲ್ಲಿ ಪ್ರಚಾರ ಮಾಡಿ ತಾಯಿ ಶ್ರೀಮತಿ ಲಲಿತಾ ದೇವಿಯನ್ನ ಗೆಲ್ಲಿಸಿದ್ರು. ಇದೆಲ್ಲ ರೀಲ್ ಕಥೆಯಾಯ್ತು. ಕಳೆದ ವರ್ಷ ಮಂಡ್ಯ ರಣಕಣದಲ್ಲಿ ದರ್ಶನ್, ಮದರ್ ಇಂಡಿಯಾ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದು, ಸುಮಲತಾ ಅಂಬರೀಶ್ ಗೆದ್ದಿದ್ದು ಕಣ್ಣ ಮುಂದಿದೆ. ಸುಮಲತಾ ಮಾತ್ರವಲ್ಲ, ತಮ್ಮ ಆಪ್ತರ ಪರವಾಗಿಯೂ ಈ ಹಿಂದಿನ ಚುನಾವಣೆಗಳಲ್ಲಿ ದಚ್ಚು ಪ್ರಚಾರ ಮಾಡಿದ್ರು. ಆದ್ರೀಗ ಮತ್ತೊಮ್ಮೆ ಡಿಬಾಸ್ ದರ್ಶನ್ ಪಾಲಿಟಿಕ್ಸ್ಗೆ ಸೈ ಅಂದಿದ್ದಾರೆ.
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಪಾಲಿಟಿಕ್ಸ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ ಅದು ರಿಯಲ್ ಅಲ್ಲ, ರೀಲ್ನಲ್ಲಿ. ಹೌದು, ನಟ ದರ್ಶನ್ ಅಭಿನಯದ ಮುಂದಿನ ಸಿನಿಮಾದಲ್ಲಿ ಪಾಲಿಟಿಕ್ಸ್ ಗೆ ಸಂಬಂಧಿಸಿದ ಕಥೆಯಿದೆಯಂತೆ. ತಾರಕ್ ಚಿತ್ರತಂಡದ ಜೊತೆ ಕೆಲಸ ಮಾಡೋಕ್ಕೆ ದರ್ಶನ್ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ರಾಜ ವೀರಮದಕರಿನಾಯಕ ಸಿನಿಮಾ ಜೊತೆಗೆ ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಕೂಡ ಸಿದ್ಧವಾಗಲಿದೆ.
ಡಿಬಾಸ್ ಅಭಿನಯದ 55ನೇ ಸಿನಿಮಾವನ್ನ ಮಿಲನಾ ಪ್ರಕಾಶ್ ನಿರ್ದೇಶಿಸೋದು ಪಕ್ಕಾ ಆಗಿದೆ. ಕೆ. ಎಸ್ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ. ಇದು ಪೊಲಿಟಿಕಲ್ ಥ್ರಿಲ್ಲರ್ ಕಥೆಯಾಗಿದ್ದು, ದರ್ಶನ್ ಸಹ ಒಪ್ಪಿದ್ದಾರಂತೆ. ಅಧಿಕಾರಕ್ಕಾಗಿ ಎರಡು ಪೊಲಿಟಿಕಲ್ ಫ್ಯಾಮಿಲಿಗಳ ನಡುವೆ ನಡೆಯುವ ಕಾದಾಟದ ಕಹಾನಿಯನ್ನಈ ಸಿನಿಮಾದಲ್ಲಿ ಪ್ರಕಾಶ್ ಹೇಳೋಕ್ಕೆ ಹೊರಟಿದ್ದಾರೆ.
ಈಗಾಗಲೇ ಕೇರಳದಲ್ಲಿ ರಾಜವೀರ ಮದಕರಿನಾಯಕ ಶೂಟಿಂಗ್ ಶುರುವಾಗಿದೆ. ಮದಕರಿ ನಾಯಕ ದೊಡ್ಡ ಸಿನಿಮಾ ಆಗಿರೋದ್ರಿಂದ ನಿರ್ದಿಷ್ಟ ಕಾಲ್ಶೀಟ್ ಅಂತ ದರ್ಶನ್ ಕೊಟ್ಟಿಲ್ಲ. ಆದ್ರೆ,ಮದಕರಿ ಜೊತೆಗೆ ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಚಿತ್ರದಲ್ಲಿ ನಟಿಸೋಕ್ಕೆ ಓಕೆ ಎಂದಿದ್ದು ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ.