ರಣ್‍ ಬೀರ್ ಆಲಿಯಾ ದಾಂಪತ್ಯಕ್ಕೆ ಡೇಟ್ ಫಿಕ್ಸ್

frame ರಣ್‍ ಬೀರ್ ಆಲಿಯಾ ದಾಂಪತ್ಯಕ್ಕೆ ಡೇಟ್ ಫಿಕ್ಸ್

Soma shekhar
ಮುಂಬೈ: ಬಾಲಿವುಡ್ ಸೂಪರ್ ಜೋಡಿ ರಣ್‍ ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಬಿ ಟೌನ್‍ ನಲ್ಲಿ ಫುಲ್ ವೈರಲ್ ಆಗಿದೆ. ಹೌದು, ರಣ್ ವೀರ್ ಅಭಿಮಾನಿಗಳಲ್ಲಿ ಈ ವಿಷಯ ಭಾರೀ ಕುತೂಹಲ ಮೂಡಿಸಿದೆ. 
 
ಇದೇ ವರ್ಷ ಡಿಸೆಂಬರ್ 18ರಂದು ಆಲಿಯಾ ಹಾಗೂ ರಣ್‍ ಬೀರ್ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಮದುವೆಯ ಎಲ್ಲ ಶಾಸ್ತ್ರಗಳ ಇಬ್ಬರ ಮನೆಯಲ್ಲಿಯೇ ಮಾಡಲಾಗುತ್ತೆ. ಮದುವೆ ನಂತರ ಫೈವ್ ಸ್ಟಾರ್ ಹೋಟೆಲಿನಲ್ಲಿ ಪಾರ್ಟಿ ಆಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಣ್‍ ಬೀರ್ ಹಾಗೂ ಆಲಿಯಾ 2 ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ‘ಬ್ರಹ್ಮಾಸ್ತ್ರ’ ಚಿತ್ರ ಡಿ. 4ರಂದು ಬಿಡುಗಡೆ ಆಗಲಿದೆ. ಈ ಚಿತ್ರ ಬಿಡುಗಡೆಯಾದ ನಂತರ ಇಬ್ಬರು ಮದುವೆಯಾಗಲಿದ್ದಾರೆ ಎಂಬುದು ತಿಳಿದು ಬಂದಿದೆ. 
 
ನಟ ರಣ್‍ ಬೀರ್ ತಂದೆ, ಹಿರಿಯ ರಿಷಿ ಕಪೂರ್ ಅವರು ತಮ್ಮ ಮಗನ ಮದುವೆ ಬೇಗ ಮಾಡುವುದಾಗಿ ನಿರ್ಧರಿಸಿದ್ದಾರೆ. ಕಳೆದ ವರ್ಷ ರಿಷಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಅವರು ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಹಿಂದೆ ರಿಷಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ರಣ್‍ ಬೀರ್ ಅವರ ಮದುವೆ ದಿನವನ್ನು ನಿಗದಿ ಪಡಿಸಿದ್ದಾರೆ.
 
ರಣ್‍ ಬೀರ್ ಹಾಗೂ ಆಲಿಯಾ ‘ಬ್ರಹ್ಮಸ್ತ್ರ’ ಚಿತ್ರದಲ್ಲಿ ನಟಿಸಲು ಶುರು ಮಾಡಿದಾಗಿನಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೆ ಈ ಹಿಂದೆ ರಣ್‍ ಬೀರ್ ಹಾಗೂ ಆಲಿಯಾರ ನಕಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ 2020, ಜನವರಿ 22ರಂದು ಜೋಧಪುರ್‍ನ ಉಮೇದ್ ಭವನದಲ್ಲಿ ರಣ್‍ ಬೀರ್ ಹಾಗೂ ಆಲಿಯಾ ಮದುವೆಯಾಗಲಿದ್ದಾರೆ ಎಂದು ತಿಳಿಸಿತ್ತು. ಇದೀಗ ರಣ್ ಬೀರ್ ಮದುವೆ ದಿನಾಂಕ ಹರಿದಾಡುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

Find Out More:

Related Articles:

Unable to Load More