ಜೀವನದಲ್ಲಿ ಸಂಸಾರದ ಇನ್ನಿಂಗ್ಸ್ ಆರಂಭಿಸಿದ ಮನೀಷ್ ಪಾಂಡೆ

frame ಜೀವನದಲ್ಲಿ ಸಂಸಾರದ ಇನ್ನಿಂಗ್ಸ್ ಆರಂಭಿಸಿದ ಮನೀಷ್ ಪಾಂಡೆ

Soma shekhar
ಮುಂಬಯಿ: ಟೀಂ ಇಂಡಿಯಾದ ಡೇರ್ ಅಂಡ್ ಡ್ಯಾಶ್ ಹಾಗೂ ರಾಜ್ಯದ ನಾಯಕ ಮನೀಶ್ ಪಾಂಡೆ ಜೀವನದಲ್ಲಿ ಸಂಸಾರದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದ್ದೂರಿಯಾಗಿ ವಿಜೃಂಭಣೆಯಿಂದ  ಮುಂಬಯಿನಲ್ಲಿ ನಡೆದ ಸಮಾರಂಭದಲ್ಲಿ ತಮಿಳು ಹಾಗೂ ತುಳು ನಟಿ ಆಶ್ರಿತಾ ಶೆಟ್ಟಿ ಅವರನ್ನು ಮನೀಶ್ ಪಾಂಡೆ ವರಿಸಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಮನೀಶ್ ಪಾಂಡೆ ಅವರ ಮದುವೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
 ಭಾನುವಾರವಷ್ಟೇ ತಮಿಳುನಾಡು ವಿರುದ್ದ ಮನೀಶ್ ಪಾಂಡೆ ಮುಂದಾಳತ್ವದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಆಲಂಕರಿಸಿತ್ತು. ಬಳಿಕ ಮದುವೆ ಸಮಾರಂಭಕ್ಕಾಗಿ ಸೂರತ್‌ನಿಂದ ಮುಂಬಯಿಗೆ ಪ್ರಯಾಣ ಬೆಳೆಸಿದ್ದರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ದ 1 ರನ್ ಅಂತರದಲ್ಲಿ ಊಹಿಸದ ದಾಖಲೆಯ ಗೆಲುವು ಪಡೆಯಿತು. ಪಂದ್ಯದಲ್ಲಿ ಮನೀಷ್  ನಾಯಕನ ಆಟವಾಡಿ, 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಒಟ್ಟು 60 ರನ್ ಗಳಿಸಿ ಅಜೇಯರಾಗುಳಿದಿದ್ದರು. ಅಲ್ಲದೆ ನಿರ್ಣಾಯಕ ಹಂತದಲ್ಲಿ ರನೌಟ್ ಮಾಡುವ ಮೂಲಕ ಕರ್ನಾಟಕದ ಗೆಲುವಿನ ರೂವಾರಿ ಎನಿಸಿದ್ದು, ಕನ್ನಡಿಗರ ಮನ ಗೆದಿದ್ದರು. 
 
ಮನೀಶ್ ನಿಜಕ್ಕೂ ಗ್ರೇಟ್ ಯಾಕೆಂದರೆ ಮದುವೆ ಹಿಂದಿನ ದಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಗೆಲುವಿನತ್ತ ಮುನ್ನಡೆಸಿರುವ ಮನೀಶ್ ಪಾಂಡೆ, ಕ್ರೀಡಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೀಗ ವಿವಾಹದ ಬೆನ್ನಲ್ಲೇ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಕ್ಯಾಂಪ್ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕಾಯಕವೇ ಕೈಲಾಸ ಎಂಬುದು ಸಾಬೀತು ಪಡಿಸಿದ್ದಾರೆ. 
 
ಪ್ರಸ್ತುತ ಮನೀಷ್ ಪಾಂಡೆ ಮದುವೆಯಾಗಿರುವ ನಟಿ ಆಶ್ರಿತಾ ಶೆಟ್ಟಿ 
ಮುಂಬೈ ಮೂಲದ ನಟಿಯಾಗಿದ್ದಾರೆ. ಆಶ್ರಿತಾ ಶೆಟ್ಟಿ 2012ರಲ್ಲಿ 'ತೆಲಿಕೆದ ಬೊಳ್ಳಿ' ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಅಲ್ಲಿಂದ ಬಳಿಕ ಟಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿರುವ ಆಶ್ರಿತಾ ಶೆಟ್ಟಿ, ತಮಿಳಿನಲ್ಲಿ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯಂ, ಎನ್‌ಎಚ್ 4 (2013), ಒರು ಕನ್ನಿಯುಂ ಮೂನು ಕಲವಾನಿಕಲುಂ (2014) ಹಾಗೂ ಇಂದ್ರಜಿತ್ (2017) ಚಿತ್ರಗಳಲ್ಲಿ ನಟಿಸಿದ್ದಾರೆ.

Find Out More:

Related Articles:

Unable to Load More