ನಕ್ಸಲರಿಗೂ ಸಾಯಿ ಪಲ್ಲವಿಗೂ ಏನ್ ಸಂಬಂಧ!?!

somashekhar
ಟಾಲಿವುಡ್, ಕಾಲಿವುಡ್ ನ ಅಂದದಗೊಂಬೆ, ಅದ್ಭುತ ಡ್ಯಾನ್ಸರ್ ಸಾಯಿ ಪಲ್ಲವಿ ಇದೀಗ  ಮಾಜಿ ನಕ್ಸಲ್‌ ಲೀಡರ್‌ ಕೈಯಲ್ಲಿ ಸಿಲುಕಿಕೊಂಡಿದ್ದಾರೆ. ಸೈಲೆಂಟ್‌ ಹುಡುಗಿ ಬಾಳಲ್ಲಿ ಏನಿದು ರಾಮಾಯಣ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ತನ್ನ ಅದ್ಭುತ ಡ್ಯಾನ್ಸಿಂಗ್ ಮೂಲಕ ಇಡೀ ಸೌತ್ ಇಂಡಸ್ಟ್ರ್ರೀಯಲ್ಲಿಯೇ ಭಾರೀ ಖ್ಯಾತಿ ಪಡೆದಿದ್ದ ಇವರಿಗೆ ಈಗಾಗಿರುವುದರಿಂದ ಅಭಿಮಾನಿಗಳಿಗೆ ಭಾರೀ ಬೇಸರವಾಗಿದೆ.  ಸಮಾಜವನ್ನು ಮಿಸ್‌ಲೀಡ್ ಮಾಡುವ ಎಂಥದ್ದೇ ಯೋಜನೆಯಾದರೂ, ಎಷ್ಟು ದುಡ್ಡು ಸಿಗುತ್ತೆ ಎಂದರೂ ಒಪ್ಪೋಲ್ಲ ಸಾಯಿ ಪಲ್ಲವಿ. ಆ ಮೂಲಕ ನಟಿಯಾಗಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಜಗಜ್ಜಾಹೀರುಗೊಳಿಸಿದ ಪ್ರಬುದ್ಧ ನಟಿ ಇವರು. ಅದಕ್ಕೆ ಅವರನ್ನು ತೆರೆ ಮೇಲೆ ಕಾಣುವುದೂ ಅಷ್ಟು ಸುಲಭವಲ್ಲ.

ಏನಪ್ಪಾ! ಇಷ್ಟೊಂದು ದಿನ ಆಯ್ತು ಸಾಯಿ ಪಲ್ಲವಿಯನ್ನು ತೆರೆ ಮೇಲೆ ಕಂಡೇ ಇಲ್ಲ, ಏನ್ ಮಾಡ್ತಿದ್ದಾರೆ ಈ ನಟಿ ಎಂದು ಉತ್ತರವಿಲ್ಲದೆ ಕುಳಿತಿದ್ದ ಅಭಿಮಾನಿಗಳನ್ನು ಬೆಚ್ಚು ಬೀಳಿಸುವ ಸುದ್ದಿಯನ್ನು ಹೊರ ಬಂದಿದೆ. ಹೌದು! 'ವಿರಾಟ ಪರ್ವಂ 1992 ' ಚಿತ್ರದಲ್ಲಿ ಉತ್ತಮ ಗಾಯಕಿಯಾಗಿ ಕಾಣಿಸಿಕೊಂಡು ಕಾರಣಾಂತರಗಳಿಂದ ನಕ್ಸಲೈಟ್‌ ಆಗುತ್ತಾರೆ. ಚಿತ್ರಕ್ಕಾಗಿಯೇ ಶೂಟಿಂಗ್‌ ಹಾಗೂ ಬಾಂಬ್ ಬಳಸುವುದನ್ನು ಕಲಿಯಲು ಎಕ್ಸ್ ನಕ್ಸಲ್ ಮುಖಂಡನೊಂದಿಗೆ ತರಬೇತು ಪಡೆಯುತ್ತಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿವೆ. 

ವಿರಾಟ ಪರ್ವಂ 1992 ಚಿತ್ರಕ್ಕೆ ವೇಣು ಆ್ಯಕ್ಷನ್ ಕಟ್‌ ಹೇಳಲಿದ್ದು, 'ಬಾಹುಬಲಿ'ಯ ಬಲ್ಲಾಳ ದೇವನ ಖ್ಯಾತಿಯ ರಾಣಾ ದಗ್ಗುಬಾಟಿ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಸಾಯಿ ಪಲ್ಲವಿ ಪಾತ್ರದ ಲುಕ್‌ ಎಲ್ಲಿಯೂ ರಿವೀಲ್ ಮಾಡದ ಚಿತ್ರ ತಂಡ ಸಸ್ಪೆನ್ಸ್‌‌ನಲ್ಲಿಟ್ಟಿತ್ತು. ಆದರೆ ಚಿತ್ರೀಕರಣದ ವೇಳೆ ಕೆಲವು ಪುಂಡು ಪೋಕರಿಗಳು ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ನಟಿಸಿದ ಎಲ್ಲ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಪ್ರೇಮಂನಂತೂ ಯುವಕರು ಅದೆಷ್ಟು ಸಾರಿ ನೋಡಿದ್ದಾರೋ ಲೆಕ್ಕವಿಲ್ಲ. ಇಷ್ಟುದಿನ ಮುದ್ದಾಗಿ ಕಂಡಿರುವ ಪಲ್ಲವಿ ಇದೀಗ ನಕ್ಸಲೈಟ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.


Find Out More:

Related Articles: