ಹೇಗಿದೆ ಗೊತ್ತಾ ಪೊಗರು ಚಿತ್ರದ ಡೈಲಾಗ್..?!

somashekhar
    
ಪೊಗರು, ಸ್ಯಾಂಡಲ್ ವುಡ್ ನ ಬಹು ಹೆಚ್ಚಿನ ನಿರೀಕ್ಷಿತ ಚಿತ್ರ. ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರ ನಾಲ್ಕನೆಯ ಚಿತ್ರ ಪೊಗರು. ಅದೇ ಡೈಲಾಗ್ಸ್, ಮಾಸ್ ಕ್ಲಾಸ್ ಲುಕ್, ಭರ್ಜರಿ ಲುಕ್ ಹ್ಯಾಂಡ್ ಸಮ್ ಬಾಯ್ ದ್ರುವ ಸರ್ಜಾ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರವಿದು. ಸದ್ಯ ಆ್ಯಕ್ಷನ್​ ಪ್ರಿನ್ಸ್​ ಪೊಗರ್​​ಫುಲ್​ ಪರ್ಫಾರ್ಮೆನ್ಸ್​​​ನ ಪೊಗರ್ದಸ್ತ್​​​​ ಟ್ರೈಲರ್​​ ಬಂದಿದೆ. ಧ್ರುವ ಸರ್ಜಾ ಪೊಗರಿಸಂಗೆ ಫ್ಯಾನ್ಸ್​​​​ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

 ಮೂರುವರೆ ನಿಮಿಷಗಳ ಟ್ರೈಲರ್​ನಲ್ಲಿ ಆರಂಭದಿಂದ ಅಂತ್ಯದವರೆಗೂ ಪಂಚಿಗ್​ ಡೈಲಾಗ್​ಗಳಿಂದ ತುಂಬೋಗಿದೆ. ಮೈಹುರಿಗೊಳಿಸಿಕೊಂಡು ಉದ್ದನೆಯ ಗಡ್ಡ, ಕೂದಲು ಬಿಟ್ಟು ಖಡಕ್​ ಲುಕ್​ನಲ್ಲಿ ಧ್ರುವ ಅಬ್ಬರಿಸಿ ಗುಡುಗಿದ್ದಾರೆ. ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ ರೀತಿಯ ಹಿಟ್​ ಸಿನಿಮಾಗಳನ್ನ ಕೊಟ್ಟ ನಂದ ಕಿಶೋರ್​, ಪೊಗರು ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಧ್ರುವ ಸರ್ಜಾಗೆ ಸಾಥ್​ ಕೊಟ್ಟಿದ್ದಾರೆ. ಲವ್ಲಿ ಡೈಲಾಗೊಂದಿದೆ. ಕಾಲೋನಿಯ ಒರಟು ಹುಡುಗ ಶಿವನ ಕಥೆಯನ್ನ ಈ ಚಿತ್ರದಲ್ಲಿ ಹೇಳಲಾಗ್ತಿದೆ. ರಗಡ್​​​ ಲುಕ್ಕು, ಕಾಸ್ಟ್ಯೂಮ್​​, ಡೈಲಾಗ್​ ಡಿಕ್ಷನ್​​, ಎಲ್ಲವೂ ಪಕ್ಕಾ ಲೋಕಲ್​​ ಹುಡುಗನಂತೆ ಧ್ರುವ ದರ್ಶನ ಕೊಟ್ಟಿದ್ದಾರೆ.

ಟೈಟಲ್​ಗೆ ತಕ್ಕಂತೆ ಪೊಗರು ತುಂಬಿದ ಹುಡುಗ ಶಿವನಾಗಿ ಆರ್ಭಟಿಸಿದ್ದಾರೆ. ಚಿತ್ರದಲ್ಲಿ ಬ್ರಾಹ್ಮಣ ಮನೆತನದ ಹುಡುಗಿಯಾಗಿ ಟೀಚರ್​ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಪುಸ್ತಕ ಹಿಡಿದು, ಚಸ್ಮಾ ಹಾಕ್ಕೊಂಡು ಥೇಟ್​​ ಕಿರಿಕ್​ ಪಾರ್ಟಿ ಸಾನ್ವಿಯಂತೆ ಕಾಣಿಸಿಕೊಂಡಿದ್ಧಾರೆ. ಲವ್​, ಕಾಮಿಡಿ, ಸೆಂಟಿಮೆಂಟ್​​, ಎಮೋಷನ್​ ಎಲ್ಲವನ್ನ ಬೆರಸಿ, ನಂದಕಿಶೋರ್​ ಪೊಗರು ಸಿನಿಮಾ ಕಟ್ಟಿಕೊಡ್ತಿದ್ದಾರೆ. ಚಿಕ್ಕಣ್ಣ, ಡಾಲಿ ಧನಂಜಯ, ಶಂಕರ್ ಅಶ್ವಥ್​​ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಭರ್ಜರಿ ಆ್ಯಕ್ಷನ್​ ಸೀಕ್ವೆನ್ಸ್​ ಸಿನಿಮಾದಲ್ಲಿದ್ದು, ಫಾರಿನ್​ ಬಾಡಿ ಬಿಲ್ಡರ್ಸ್​ ಜೊತೆ ಆ್ಯಕ್ಷನ್​ ಪ್ರಿನ್ಸ್​​​ ಗುದ್ದಾಡಿದ್ದಾರೆ. ಮೇಕಿಂಗ್​ ಅದ್ದೂರಿಯಾಗಿದ್ದು, ತೆರೆಮೇಲೆ ಸಿನಿಮಾ ವಿಷ್ಯುವಲ್​ ಟ್ರೀಟ್ ಅನ್ನೋದು ಗೊತ್ತಾಗ್ತಿದೆ. ಅಂದಹಾಗೆ ಡಿಸೆಂಬರ್​ನಲ್ಲಿ ಪೊಗರು ಚಿತ್ರವನ್ನ ತೆರೆಗೆ ತರೋ ಪ್ರಯತ್ನ ಜೋರಾಗಿದೆ.


Find Out More:

Related Articles: