ಬಿಗ್ ಬಾಸ್. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬಿಗ್ ರಿಯಾಲಿಟಿ ಶೋ ಆಗಿರುವುದು. ಕನ್ನಡ ದಲ್ಲಿ ಕಿಚ್ಚ ಸುದೀಪ್ ಅವರು ನಿರೂಪಕರಾಗಿರುವುದು ಮತ್ತೊಂದು ವಿಶೇಷ. ಕಳೆದ ಎರಡೂ ಸೀಜನ್ ಗಳಿಂದಲೂ ಅವರೇ ನಿರೂಪಕರು. ಇದೀಗ ಸೀಜನ್ 7 ಸುರುವಾಗಿದ್ದು ಜೂನಿಯರ್ ಸುದೀಪ್ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ.
ಬಿಗ್ ಬಾಸ್ ಶೋ ನಲ್ಲಿ ಸ್ಪರ್ಧಿಗಳ ಸೆಲಕ್ಷನ್ ಆಯೋಜಕರಿಗೆ ಬಿಟ್ಟಿರುತ್ತದೆ. ಕಳೆದ ಬಾರಿ ಸ್ಪರ್ಧಿಯೊಬ್ಬರು ಬಾರದಿದ್ದರಿಂದ ಕ್ರಿಕೆಟಿಗ ಅಯ್ಯಪ್ಪ ಅವರ ಹೆಸರನ್ನ ಸೂಚಿಸಿದ್ದನ್ನ ಬಿಟ್ಟರೆ, ಬೇರೆ ಯಾರನ್ನು ಸುದೀಪ್ ಸೂಚಿಸಿಲ್ಲ. ಈಗ ಏಳನೇ ಆವೃತ್ತಿ ಆರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಇದರಲ್ಲಿ ಒಬ್ಬರು ಸುದೀಪ್ ಅವರ ಜೂನಿಯರ್. ಸುದೀಪ್ ಜೂನಿಯರ್ ಈಕೆ
ಬೆಂಗಳೂರಿನ ದಯಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಿಚ್ಚ ಸುದೀಪ್ ವಿದ್ಯಾಬ್ಯಾಸ ಮಾಡಿದ್ದಾರೆ. ವಿಶೇಷ ಅಂದ್ರೆ, ಅದೇ ಕಾಲೇಜಿನಲ್ಲಿ, ಸುದೀಪ್ ಅವರು ಓದಿದ ತರಗತಿಯಲ್ಲೇ ಚೈತ್ರಾ ವಾಸುದೇವನ್ ಕೂಡ ಓದಿದ್ದಾರಂತೆ. ಹಾಗಾಗಿ, ಸುದೀಪ್ ಅವರಿಗೆ ಚೈತ್ರಾ ಜೂನಿಯರ್ ಎಂದು ಹೇಳಿಕೊಂಡಿದ್ದಾರೆ.
ಸುದೀಪ್ ಸಿನಿಮಾದಲ್ಲಿ ನಟಿಸುವ ಆಸಕ್ತಿ ಇಲ್ಲದ ಚೈತ್ರಾ ವಾಸುದೇವನ್ ಅವರು, ಕಿಚ್ಚ ಸುದೀಪ್ ಅಭಿನಯದ ಚಿತ್ರದಲ್ಲಿ ಮೊದಲ ಸಲ ಬಣ್ಣ ಹಚ್ಚಿದ್ದರು. ಸುದೀಪ್ ಅವರ ಪೈಲ್ವಾನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಬಾಕ್ಸಿಂಗ್ ದೃಶ್ಯದಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಷಯವನ್ನ ಚೈತ್ರಾ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡರು. ನಿರೂಪಕಿಯಾಗಿ ಮೊದಲ ಸಲ ಸಂದರ್ಶನ ಮಾಡಿದ್ದು ಕೂಡ ಕಿಚ್ಚ ಸುದೀಪ್ ಅವರಂತೆ. ಸಿಸಿಎಲ್ ಕ್ರಿಕೆಟ್ ನಡೆಯುತ್ತಿರುವ ವೇಳೆ ಚೈತ್ರಾ ಅವರು, ಸುದೀಪ್ ಅವರ ಸಂದರ್ಶನ ಮಾಡಿದ್ದರಂತೆ. ಇವರು ಹಲವು ಶೋ ನಿರೂಪಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಒಂದು ಸಿನಿಮಾ ಕಥೆ' ಕಾರ್ಯಕ್ರಮವನ್ನ ಚೈತ್ರಾ ನಿರೂಪಣೆ ಮಾಡುತ್ತಿದ್ದರು. ಹಲವು ಖಾಸಗಿ ಕಾರ್ಯಕ್ರಮಗಳನ್ನ ಆಂಕರಿಂಗ್ ಮಾಡಿದ್ದಾರೆ.