ಬಿಗ್ ಬಿ ಜೊತೆ ದಸರಾ ಆಚರಿಸಿದ ಅಣ್ಣಾವ್ರ ಮಗ ಶಿವರಾಜ್​ ಕುಮಾರ್

somashekhar
ಕಲ್ಯಾಣ್​ ಜ್ಯುವೆಲರ್ಸ್​ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಶಿವರಾಜ್ ಕುಮಾರ್ ಅಮಿತಾಬ್ ಬಚ್ಚನ್, ಮೋಹನ್​ ಲಾಲ್, ಜಯರಾಂ ಮುಂತಾದವರು ಒಂದೇ ಕಡೆ ಸೇರಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂ ನಲ್ಲಿ ಫೋಟೋ ಶೇರ್ ಮಾಡಿರುವ ಶಿವರಾಜ್ ಕುಮಾರ್ ಕಲ್ಯಾಣ್​ ಜ್ಯುವೆಲರ್ಸ್​ ಕುಟುಂಬದೊಂದಿಗೆ ಈ ಬಾರಿಯ ದಸರಾ ಹಬ್ಬವನ್ನು ಆಚರಿಸಿಕೊಂಡಿದ್ದಾಗಿ ಬರೆದು ಕೊಂಡಿದ್ದಾರೆ. 

ಯಾವುದೇ ಹಬ್ಬ ಬಂತೆಂದರೆ ಸೆಲೆಬ್ರಿಟಿಗಳಿಗೆ ಒಂದು ರೀತಿಯ ರಿಲ್ಯಾಕ್ಸ್​ ಇದ್ದಂತೆ. ತಮ್ಮ ಶೂಟಿಂಗ್, ತಿರುಗಾಟವನ್ನೆಲ್ಲ ಬದಿಗೊತ್ತಿ ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಕಾಲ ಕಳೆಯುತ್ತಾರೆ. ಆದರೆ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹೊಸ ಕುಟುಂಬದೊಂದಿಗೆ ಈ ಬಾರಿಯ ನವರಾತ್ರಿ ಆಚರಿಸಿದ್ದಾರೆ. ಅರೇ ಇದೇನಪ್ಪಾ ಅಂತ ಆಶ್ಚರ್ಯವಾಯ್ತಾ. ಅದು ಏನಂತ ನಾವು ಹೇಳ್ತೀವಿ ಮುಂದೆ ಓದಿ. 

ಈ ವರ್ಷ ತೆರೆಕಂಡ 'ಕವಚ', 'ರುಸ್ತುಂ' ಸಿನಿಮಾಗಳಲ್ಲಿ ನಟಿಸಿದ್ದ ಶಿವರಾಜ್ ಕುಮಾರ್ 'ದ್ರೋಣ', 'ಆಯುಷ್ಮಾನ್​ಭವ', 'ಭಜರಂಗಿ 2' ಸಿನಿಮಾಗಳಲ್ಲಿ ನಟಿಸುತ್ತಿರುವುದು ತಿಳಿದೇ ಇದೆ. ಕಲ್ಯಾಣ್​ ಜ್ಯುವೆಲರ್ಸ್​ಗೆ ಬ್ರಾಂಡ್​ ಅಂಬಾಸಿಡರ್ ಆಗಿರುವ ಶಿವರಾಜ್​ ಕುಮಾರ್ ಮಲೆಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಯ ಅಂಬಾಸಿಡರ್​ಗಳನ್ನು ಭೇಟಿಯಾಗಿದ್ದಾರೆ. ಕಲ್ಯಾಣ್​ ಜ್ಯುವೆಲರ್ಸ್​​ನ ಅಂಬಾಸಿಡರ್​ಗಳಲ್ಲಿ ಒಬ್ಬರಾದ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್ ಅವರನ್ನು ಸಹ ಭೇಟಿಯಾಗಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಾಕಿಕೊಂಡಿರುವ ಶಿವರಾಜ್​ ಕುಮಾರ್, 'ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿ ಸಂಭ್ರಮವನ್ನು ನನ್ನ ಕಲ್ಯಾಣ್​ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದೇನೆ' ಎಂದು ಅಮಿತಾಭ್ ಬಚ್ಚನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ವೇಳೆ ಕಲ್ಯಾಣ್​ ಜ್ಯುವೆಲರ್ಸ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟರಾದ ಮೋಹನ್​ ಲಾಲ್, ಜಯರಾಂ, ಅಖಿಲ್ ನಾಗಾರ್ಜುನ ಮುಂತಾದವರು ಒಂದೇ ಕಡೆ ಸೇರಿದ್ದಾರೆ. ಬಚ್ಚನ್ ಕುಟುಂಬದ ಜೊತೆ ಆಪ್ತ ಸಂಬಂಧ ಹೊಂದಿರುವ ರಾಜ್​ಕುಮಾರ್ ಕುಟುಂಬದ ಸ್ನೇಹ ಪರತೆಗೆ ಟ್ವಿಟ್ಟರ್​ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ಸ್ ಟಾ ಗ್ರಾಂ ನಲ್ಲಿ ಸಾವಿರಗಟ್ಟಲೆ ಲೈಕ್ಸ್ ಸಿಕ್ಕಾಪಟ್ಟೆ ಕಾಮೆಂಟ್ ಗಳು ಸಹ ಹರಿದು ಬಂದಿವೆ.


Find Out More:

Related Articles: