ನಟಿ ನಯನತಾರಾ ಸಂಭಾವನೆ ಎಷ್ಟು?

somashekhar
ಟಾಲಿವುಡ್, ಮಾಲಿವುಡ್ ತಮಿಳು ಸೇರಿದಂತೆ ಹಿಂದಿಯಲ್ಲಿ ಸಖತ್ ಫೇಮಸ್ ನಟಿ ನಯನತಾರಾ ಸದ್ಯಕ್ಕೆ ದಕ್ಷಿಣದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಬೆಡಗಿ. ಮೂಲಗಳ ಪ್ರಕಾರ ತಮಿಳು ಚಿತ್ರಕ್ಕಾಗಿ ಅತ್ಯಧಿಕ ಸಂಭಾವನೆ ಪಡೆದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಒಂದು ಕೋಟಿ ಪಡೆಯುತ್ತಿದ್ದ ನಯನತಾರಾ ಪ್ರಸ್ತುತ ಈಗಿನ ಸಂಭಾವನೆ ಹುಬ್ಬೇರಿಸುವಂತಿದೆ.
   
ನಟಿ ನಯನತಾರಾ ಸದ್ಯಕ್ಕೆ ಹಲವಾರು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ವೈವಿಧ್ಯಮಯ ಪಾತ್ರಗಳನ್ನು ಪೋಷಿಸುತ್ತಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಾ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮುಖ್ಯವಾಗಿ ಫಿಟ್‍ನೆಸ್‍ ವಿಚಾರದಲ್ಲೂ ಕೇರ್ ತೆಗೆದುಕೊಳ್ಳುವ ನಯನತಾರಾ ಇನ್ನೂ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಬೆಡಗಿ. ಪಡ್ಡೆ ಹೈಕಳಿಗೆಲ್ಲಾ ಫೇಮಸ್ ನಟಿ. ಸಾಮಾನ್ಯವಾಗಿ ಹೀರೋಯಿನ್‌ಗಳು ಕಾಲ ಸರಿದಂತೆ ಕಾಣೆಯಾಗುವುದೇ ಹೆಚ್ಚು. ಆದರೆ ನಯನತಾರಾ ಈ ವಿಚಾರದಲ್ಲಿ ತದ್ವಿರುದ್ಧ. 'ಸೈರಾ' ಸಿನಿಮಾಗಾಗಿ ನಟಿ ನಯನತಾರಾ ಎಣಿಸಿದ್ದೆಷ್ಟು ಗೊತ್ತಾ? 

ಕಾಲ ಸರಿಯುತ್ತಿದ್ದರೂ ಕಾಲಕ್ಕೆ ತಕ್ಕಂತೆ ಸಂಭಾವನೆ ಎಣಿಸುತ್ತಲೇ ಇದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಯನತಾರಾ ಸಂಭಾವನೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಾಲಿವುಡ್‌ಗೆ ಅಡಿಯಿಟ್ಟಾಗ ಲಿಂಗು ಸ್ವಾಮಿ ನಿರ್ದೇಶನದ 'ಪಯ್ಯ' ಸಿನಿಮಾಗೆ ಒಂದು ಕೋಟಿ ಸಂಭಾವನೆ ಪಡೆದಿದ್ದರಂತೆ.  ಆಗ ದಕ್ಷಿಣದ ಚಿತ್ರೋದ್ಯಮಗಳು ನಯನತಾರಾಳನ್ನು ಅಚ್ಚರಿಯ ಕಣ್ಣುಗಳಿಂದ ನೋಡಿತ್ತು. ಒಂಬತ್ತು ವರ್ಷಗಳ ಬಳಿಕ ಅವರ ಸಂಭಾವನೆ ₹ 6 ಕೋಟಿಯಷ್ಟಾಗಿದೆ ಎನ್ನುತ್ತಿವೆ ಮೂಲಗಳು. ರಜನಿಕಾಂತ್ ಜೊತೆಗಿನ 'ದರ್ಬಾರ್' ಚಿತ್ರಕ್ಕೂ ಇಷ್ಟೇ ಸಂಭಾವನೆ ಪಡೆದಿದ್ದಾರಂತೆ ನಯನತಾರ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ಅಭಿನಯಿಸುವುದೇ ಒಂದು ಅದೃಷ್ಟವಾದರೆ  ಅದರ ಜೊತೆಗೆ ನಯನ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. 

ಇದೀಗ ತನ್ನ ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ನಿರ್ಮಾಣದ 'ನೆಟ್ರಿಕ್ಕನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ನಯನತಾರಾ. ಈ ಚಿತ್ರ ಮಿಲಿಂದ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು ಇದಕ್ಕೂ ₹ 6 ಕೋಟಿ ಪಡೆದಿದ್ದಾರಂತೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಮೆಗಾಸ್ಟಾರ್ ಐತಿಹಾಸಿಕ ಸಿನಿಮಾ 'ಸೈರಾ ನರಸಿಂಹ ರೆಡ್ದಿ' ಚಿತ್ರದಲ್ಲೂ ನಯನತಾರಾ ಬಣ್ಣಹಚ್ಚಿದ್ದಾರೆ. ಚಿತ್ರಕ್ಕಾಗಿ 6ಕೋಟಿ ಸಂಭಾವನೆಯನ್ನು  ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.


Find Out More:

Related Articles: