ಸುದೀಪ್ ಬರ್ಥಡೇಗೆ ಯಾರೆಲ್ಲ ವಿಶ್ ಮಾಡಿದ್ರು?

somashekhar
ಅಭಿನಯ ಚಕ್ರವರ್ತಿ ಅಂದರೆ ಅದು ಬೇರಾರೂ ಅಲ್ಲ, ಕಿಚ್ಚ ಸುದೀಪ್. ಹೌದು ಕಿಚ್ಚ ಅವರಿಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಹೌದು ಅದು 46ನೇ ವಸಂತದ ಸಂಭ್ರಮ. ಮೊನ್ನೆ ರಾತ್ರಿಯಿಂದಲೇ ಸುದೀಪ್ ಅಭಿಮಾನಿಗಳು ಅವರ ಹುಟ್ಟುಹಬ್ಬದ ಉತ್ಸವ ಆರಂಭಿಸಿದ್ದರು. ಅಲ್ಲದೇ ನಿನ್ನೆಯೂ ಬೆಳಿಗ್ಗೆಯಿಂದಲೇ ನಮ್ಮ ಸ್ಯಾಂಡಲ್ ವುಡ್ ಲೋಕದ ಎಲ್ಲ ನಟ ನಟಿಯರೂ ಸಹ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು.


ಹೌದು, ಸ್ಯಾಂಡಲ್​ವುಡ್ ಲೋಕದ ಬಹುತೇಕರು ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯದ ಪೂರವನ್ನೇ ಹರಿಸಿದ್ದರು. ಇಷ್ಟೇ ಅಲ್ಲದೇ ಈ ನಡುವೆ, ಟಾಲಿವುಡ್​ನಿಂದಲೂ 'ಪೈಲ್ವಾನ್'​ಗೆ ಬರ್ತ್​ ಡೇ ಸರ್​ಪ್ರೈಸ್ ಸಿಕ್ಕಿದೆ. ಹೌದು, ಕಿಚ್ಚ ಅಭಿನಯದ 'ಸೈರಾ ನರಸಿಂಹಾ ರೆಡ್ಡಿ' ಚಿತ್ರತಂಡ ಸಹ ಸುದೀಪ್ ಬರ್ಥಢೇಗೆ ವಿಶೇಷ ರೀತಿಯಲ್ಲಿ ಹಾರೈಸಿದ್ದಾರೆ. ಹೌದು ವೀಶೇಷ ರೀತಿಯ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.


ಹೌದು ಮೇಗಾ ಸ್ಟಾರ್ ಚಿರಂಜೀವಿ ಅವರ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಅವರು ಅಭಿನಯಿಸುತ್ತಿರೋದು ನಿಮಗೆಲ್ಲ ಗೊತ್ತೇ ಇದೆ. ಇದು ಬಿಗ್ ಬಜೆಟ್ ನಿರ್ಮಾಣದ ಸಿನಿಮಾ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ' ಚಿತ್ರವು ಕಳೆದ ಬಾರಿ ಸುದೀಪ್ ಅವರ ಫಸ್ಟ್​ ಲುಕ್ ಬಿಡುಗಡೆ ಮಾಡಿ ವಿಶ್ ಮಾಡಿತ್ತು. ಹೀಗಾಗಿ ಸುದೀಪ್ ಅವರಿಗೆ ಸ್ಯಾಂಡಲ್ ವುಡ್ ಆಚೆಗೂ ಹುಟ್ಟು ಹಬ್ಬದ ಶುಭಾಶಯ ಹರಿದು ಬಂದಿದೆ.


ಸೈರಾ'ದಲ್ಲಿ ಕಿಚ್ಚ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಹೌದು ಈ ಬಾರಿ ಬಿಡುಗಡೆ ಮಾಡಿರೋ ಪೋಸ್ಟರ್ ಒಂದರಲ್ಲಿ ಕುದುರೆ ಏರಿ ಬರುವ ಕಿಚ್ಚ ಫ್ಯಾನ್ಸ್ ಬಹುಪರಾಕ್ ಅಂದಿದ್ದಾರೆ. ಹೀಗಾಗಿ ಕಿಚ್ಚನ ಹವಾ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಇನ್ನೇನು ಪೈಲ್ವಾನ ಚಿತ್ರವೂ ಇದೇ ತಿಂಗಳ 12ರಂದು ಬಿಡುಗಡೆ ಆಗಲಿದೆ. ಅಲ್ಲಿಯವರೆಗೂ ಕಿಚ್ಚನ ಅಭಿಮಾನಿಗಳು ಕಾಯಬೇಕಿದೆ.


ಇನ್ನು ಸೈರಾ ನರಸಿಂಹ ರೆಡ್ಡಿ ಬಗ್ಗೆ ಹೇಳೋದಾದರೆ ಇದು ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ಈ ಐತಿಹಾಸಿಕ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇದರಲ್ಲಿ ಬಾಲಿವುಡ್ ಬಾದ್ ಶಾ ಅಮಿತಾಭ್ ಬಚ್ಚನ್ ಕೂಡ ಅಭಿನಯ ಮಾಡಿದ್ದಾರೆ. ಹೌದು ಅವರು ರಾಜ ಗುರು ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಇದರ ಜತೆಗಗೆ ಲೇಡಿ ಸೂಪರ್​ಸ್ಟಾರ್ ಎಂದೇ ಹೆರಾಗಿರುವ  ನಯನತಾರಾ ಕೂಡ ರಾಣಿಯಾಗಿ ಅಭಿನಯ ಮಾಡಿದ್ದಾರೆ. ವಿಜಯ್ ಸೇತುಪತಿ ಕೂಡ ಇದ್ದಾರೆ.


Find Out More:

Related Articles: