ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಸಿಟ್ಟು ಕುಮಾರಸ್ವಾಮಿ ಅವರಲ್ಲಿ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಸುಮಲತಾ ಅವರ ಪರವಾಗಿ ಜೋಡೆತ್ತು ದರ್ಶನ್ ಹಾಗೂ ಯಶ್ ಅವರು ಪ್ರಚಾರ ನಡೆಸಿದ್ದರು. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲು ಕಂಡಿದ್ದರು. ಕೊನೆಗೂ ಮಂಡ್ಯದಲ್ಲಿ ಸುಮಲತಾ ಅವರು ಗೆಲುವು ಸಾಧಿಸಿದ್ದರು.
ಈ ಸಿಟ್ಟನ್ನು ಆಗಾಗ ಜೆಡಿಎಸ್ ತೀರಿಸಿಕೊಳ್ಳುತ್ತಲೇ ಇದೆ. ಇದಕ್ಕೆ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೇ ಸಾಕ್ಷಿಯಾಗಿದೆ ನೋಡಿ. ರಾಮನಗರ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ನೇತೃತ್ವ ವಹಿಸಿದ್ದರು. ಆದರೆ ಯಶ್ ಹಾಗೂ ದರ್ಶನ್ ಅಭಿಮಾನಿಗಳಿಗೆ ಇಲ್ಲಿ ಶಾಕ್ ಕಾದಿತ್ತು. ಅಷ್ಟಕ್ಕೂ ಈ ಶಾಕ್ ನಿಂದ ದರ್ಶನ್ ಹಾಗೂ ಯಶ್ ಅಭಿಮಾನಿಗಳು ಹೇಳಿದ್ದೇನು ಅನ್ನೋದು ಇಲ್ಲಿದೆ.
ಈ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಯಶ್ ಅವರ ಹಾಡುಗಳನ್ನು ಬ್ಯಾನ್ ಮಾಡಲಾಗಿತ್ತು. ಯಾವುದೇ ನಾಯಕರ ಚಿತ್ರಗೀತೆಗಳನ್ನು ಹಾಡಬಹುದು ಆದರೆ ದರ್ಶನ್ ಮತ್ತು ಯಶ್ ಅವರ ಹಾಡುಗಳನ್ನು ಹೊರತುಪಡಿಸಿ ಎಂದು. ಹೀಗಾಗಿ ಗಾಯಕರು ಜೋಡೆತ್ತುಗಳ ಹಾಡುಗಳನ್ನು ಬಿಟ್ಟು, ಉಳಿದೆಲ್ಲ ಹಾಡುಗಳನ್ನು ಹಾಡುತ್ತಿದ್ದರು. ಕೊನೆಗೆ ಬೇಸತ್ತ ಅಭಿಮಾನಿಗಳು ದರ್ಶನ್ ಹಾಗೂ ಯಶ್ ಹಾಡುಗಳು ಬೇಕು ಎಂದು ಕೂಗಿ ಆಗ್ರಹಿಸಿದರು. ಆದರೆ ಸಂಘಟಕರು ಇದಕ್ಕೆ ಮಣಿಯಲಿಲ್ಲ.
ಆದರೆ ಕೊನೆಗೂ ದರ್ಶನ್ ಹಾಗೂ ಯಶ್ ಅವರ ಹಾಡುಗಳನ್ನು ಹಾಡೋಕೆ ಇಲ್ಲಿ ಅವಕಾಶವೇ ಸಿಗಲಿಲ್ಲ. ಇದರಿಂದ ದರ್ಶನ್ ಹಾಗೂ ದರ್ಶನ್ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕುಮಾರಸ್ವಾಮಿ ಅವರು ಈ ರೀತಿ ಮಾಡಿದ್ದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಯಾಕೆಂದರೆ, ರಾಜಕೀಯವೇ ಬೇರೆ ಹಾಗೂ ಸಿನಿಮಾನೇ ಬೇರೆ. ಹೀಗಾಗಿ ಎರಡನ್ನೂ ಒಂದೇ ಮಾಡಿ, ರಾಜಕೀಯ ಸೇಡನ್ನು ಈ ರೀತಿ ಕುಮಾರಸ್ವಾಮಿ ತೀರಿಸಿಕೊಳ್ಳುತ್ತಿರೋದು ಸರಿ ಅಲ್ಲ ಅನ್ನೋದು ದರ್ಶನ್ ಅವರ ಲೆಕ್ಕಾಚಾರವಾಗಿದೆ.