ಸುದೀಪ್ ಗೆ ಮತ್ತೊಂದು ಸಿನಿಮಾ ಮಾಡುತ್ತಿರೋ ಅನೂಪ್ ಭಂಡಾರಿ

somashekhar
ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಮೂರನೇ ಚಿತ್ರದಲ್ಲಿ ಒಳ್ಳೆಯ ಅವಕಾಶ ಪಡೆದಿದ್ದರು. ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳೋಕೆ ರೆಡಿ ಆಗಿದ್ದರು. ಆದರೆ ಇದೀಗ ಸುದೀಪ್ ಕಡೆಯಿಂದ ಅನೂಪ್ ಅವರಿಗೆ ಮತ್ತೊಂದು ಆಫರ್ ಸಿಕ್ಕಿದೆ ಎಂದು ತಿಳಿದು ಬಂದಿದೆ.


ಹೌದು, ಸುದೀಪ್ ಜೊತೆಗೆ ಮತ್ತೊಂದು ಸಿನಿಮಾ ಮಾಡೋಕೆ ಅನೂಪ್ ಅವರಿಗೆ ಕರೆ ಬಂದಿದೆ. ಈ ಸಿನಿಮಾ ಬಿಲ್ಲಾ ರಂಗ ಭಾಷ ಚಿತ್ರಕ್ಕೂ ಮುಂಚೆಯೇ ಶುರು ಆಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಆರಂಭ ಆಗಲಿದೆ. ಅಲ್ಲದೇ ಜಾಕ್ ಮಂಜು ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.


ಅನೂಪ್ ಅವರು, ರಂಗಿತರಂಗ, ರಾಜರಥ ಸಿನಿಮಾ ಬಳಿಕ , ಬಿಲ್ಲಾ ರಂಗ ಭಾಷ ಸಿನಿಮಾ ಶುರು ಮಾಡಿದ್ದರು. ಆದರೆ ಅದರ ಜೊತೆಗೆ ಇದೀಗ ಕಿಚ್ಚನೊಂದಿಗೆ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಸುದೀಪ್ ಅವರ ಪೈಲ್ವಾನ್ ಸೆಪ್ಟೆಂಬರ್ 12 ರಂದು ತೆರೆ ಕಾಣಲಿದೆ. ಇದರ ಮಧ್ಯ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ.

Find Out More:

Related Articles: