ಚೀನಾದ ವಿರುದ್ಧ ಅಮೇರೀಕಾದ ಗೃಹ ಕಾರ್ಯದರ್ಶಿ ತೀವ್ರ ಆಕ್ರೋಶ : ಇದಕ್ಕೆ ಕಾರಣ ಏನು ಗೊತ್ತಾ..?

Soma shekhar
ಭಾರತದದ ಗಡೀ  ಪ್ರದೇಶವಾದ ಲಡಾಕ್ ನಲ್ಲಿ ಗಡೀ ವಿಚಾರವಾಗಿ ಕ್ಯಾತೆಯನ್ನು ತೆಗೆದಿತ್ತು. ಇದೆಲ್ಲದರ ಜೊತೆಗೆ ಭಾರತೀಯ ಸೈನಿಕರ ಮೇಲೆ ದಾಳಿಯನ್ನೂ ಸಹ ಮಾಡಲಾಗಿತ್ತು. ಇದರಿಂದಾಗಿ 20 ಜನ ಭಾರತೀಯ ಸೈನಿಕರು ಪ್ರಾಣ ಬಿಟ್ಟರು. ಚೀನಾದ ಈ ಕೃತ್ಯವನ್ನು ಜಗತ್ತಿನ ಹಲವು ರಾಷ್ಟ್ರಗಳು ವಿರೋಧಿಸಿದ್ದವು.ಈಗ ಈ ವಿಷಯದ ಕುರಿತಾಗಿ ಅಮೇರಿಕಾದ ಗೃಹ ಕಾರ್ಯದರ್ಶಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.


ಭೂತಾನ್ನ ಗಡಿ ಪ್ರದೇಶ ತನ್ನದೆಂದು ಹೇಳಿಕೊಳ್ಳುವ ಜತೆಗೆ ಲಡಾಖ್ ಪೂರ್ವಭಾಗದಲ್ಲಿ ಭಾರತೀಯ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಚೀನಾದ ಕ್ರಮ ಜಾಗತಿಕ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.

ಗುರುವಾರ ಈ ಹೇಳಿಕೆ ನೀಡಿರುವ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋ, ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೇತೃತ್ವದ ಆಡಳಿತ ತಾವು ಮಾಡುವ ಕೆಲಸವನ್ನು ನೋಡಿಕೊಂಡು ಇತರೆ ರಾಷ್ಟ್ರಗಳು ಸುಮ್ಮನೆ ಕೂರುತ್ತವೋ ಹೇಗೆ ಎಂದು ಪರೀಕ್ಷಿಸುತ್ತಿರುವಂತೆ ಇದೆ ಎಂದು ಹೇಳಿದ್ದಾರೆ.


ಚೀನಾ ಇತ್ತೀಚೆಗೆ ಭೂತಾನ್ನ ಸಾಕ್ಟೆಂಡ್ ವನ್ಯಜೀವಿ ರಾಷ್ಟ್ರೀಯ ಸಂರಕ್ಷಣಾ ವಲಯ ತನ್ನದೆಂದು ಹೇಳಿಕೊಂಡಿತ್ತು. ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಅದು, ಭೂತಾನ್ನ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ವಲಯಕ್ಕೆ ಮಂಡಳಿಯ ಧನಸಹಾಯ ನೀಡಲು ವಿರೋಧ ವ್ಯಕ್ತಪಡಿಸಿತ್ತು.


1989ರಿಂದಲೂ ಚೀನಾ ಇದನ್ನೇ ಪ್ರತಿಪಾದಿಸಿಕೊಂಡು ಬರುತ್ತಿದೆ. ಆದರೆ, ಕ್ಸಿ ಜಿನ್ಪಿಂಗ್ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಇದು ಹೆಚ್ಚಾಗಿದೆ ಎಂದು ಸದನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾವು ತನ್ನ ಪ್ರಭಾವ ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅವರು ಚೀನಾ ನಂಬಿಕೆಯ ಸಾಮಾಜವಾದವನ್ನು ಎಲ್ಲೆಡೆ ಪಸರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ತಮ್ಮ ವ್ಯಾಪ್ತಿಯನ್ನು ಭೂತಾನ್ಗೂ ವಿಸ್ತರಿಸಲು ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿದೆ. ಭಾರತದಲ್ಲಿ ಅದರದ್ದೇ ಆದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ. ಇದೆಲ್ಲವನ್ನೂ ಗಮನಿಸಿದಾಗ ಚೀನಾ ಜಾಗತಿಕ ಸಮುದಾಯದ ಸಹನೆಯನ್ನು ಕೆಣಕುತ್ತಿರುವಂತೆ ಕಾಣುತ್ತಿದೆ. ಈ ರೀತಿಯ ಬೆದರಿಕೆಗಳಿಗೆ ಸೋತು ಜಾಗತಿಕ ಸಮುದಾಯ ಸುಮ್ಮನಾಗಿಬಿಡುತ್ತದೆಯೋ ಹೇಗೆ ಎಂಬುದನ್ನು ಅವರು ಪರೀಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


ಆದರೆ ಇಂಥ ಬೆದರಿಕೆ ತಂತ್ರಗಳಿಗೆ ಮಣಿಯದೆ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಇಡಿ ಜಗತ್ತು ಸಿದ್ಧವಾಗಿದೆ ಎಂಬ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದ್ದು, ಆ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ಮಾಡಬೇಕಿದೆ ಎಂದು ಸಲಹ ನೀಡಿದ್ದಾರೆ.



Find Out More:

Related Articles: