
ಕುರುಕ್ಷೇತ್ರ: ದೂಳೆಬ್ಬಿಸೋ ಮಹಾಚಿತ್ರ!
ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸುತ್ತಿರೋ ಚಿತ್ರ ಕುರುಕ್ಷೇತ್ರ. ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ. ಇದರ ಇನ್ನೊಂದು ವಿಶೇಷ ಏನೆಂದರೆ, ದರ್ಶನ್ ಅವರ 50ನೇ ಚಿತ್ರ ಇದು. ಹೌದು, ಆಗಸ್ಟ್ 2ರಂದು ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಪ್ರದರ್ಶನ ಕಾಣಲಿದೆ.
ಈ ಎಲ್ಲ ಭಾಷೆಗಳಲ್ಲಿಯೂ 2D ಮತ್ತು 3D ರೂಪದಲ್ಲಿ ತೆರೆಕಾಣಲಿದೆ ಎನ್ನೋದು ಮತ್ತೊಂದು ವಿಶೇಷ. ಇದರಲ್ಲಿ ಕನ್ನಡದ ಬಹುತೇಕ ನಟರು ಅಭಿನಯಿಸಿದ್ದಾರೆ. ಎಲ್ಲ ಕಲಾವಿದರನ್ನು ಒಂದೇ ತೆರೆಯ ಮೇಲೆ ನೋಡುವ ಅವಕಾಶ ಸಿಗುವುದೇ ಇದರ ಹಿರಿಮೆ. ಅಂಬರೀಷ್ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈಗ ನಮ್ಮೊಂದಿಗಿಲ್ಲ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಬೇಸರ ವ್ಯಕ್ತಪಡಿಸಿದರು.
ಕುರುಕ್ಷೇತ್ರ ಥರದ ಸಿನಿಮಾ ಮಾಡಲು ನಿರ್ಮಾಪಕರಿಗೆ ಎದೆಗಾರಿಕೆ ಬೇಕು ಎನ್ನಲಾಗುತ್ತಿದೆ. ಹೌದು ಯಾಕೆಂದರೆ, ಮಹಾಭಾರತದ ಕಥೆ 3D ರೂಪದಲ್ಲಿ ಬರುತ್ತಿರುವುದು ಇಡೀ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ಹೀಗಾಗಿ ಕನ್ನಡಿಗರು ಈ ಬಗ್ಗೆ ಹೆಮ್ಮೆ ಪಡಬೇಕು ಎಂದು ನಿರ್ದೇಶಕ ನಾಗಣ್ಣ ಹೇಳಿದ್ದಾರೆ.