ಆರ್ ಆರ್ ಆರ್ ಸಿನಿಮಾದ ನಂತರ ರಾಜಮೌಳಿಯ ಮುಂದಿನ ಸಿನಿಮಾ ಯಾವುದು..? ಇದಕ್ಕೆ ಇಲ್ಲಿದೆ ಉತ್ತರ

Soma shekhar

ಬಾಹು ಬಲಿ ಚಿತ್ರದ ಸಣ್ಣ ಬಿಡುವಿನ ನಂತರ ನಿರ್ದೇಶಕ ರಾಜಮೌಳಿ ಸದ್ಯ ಆರ್​ಆರ್​ಆರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತರ ಮಹೇಶ್​ ಬಾಬು  ಅವರ ಚಿತ್ರಕ್ಕೆ ಆಯಕ್ಷನ್ ಕಟ್​ ಹೇಳೋದಾಗಿ ಘೋಷಿಸಿದ್ದಾರೆ. ಆ ಸಿನಿಮಾದಲ್ಲಿ ಟಾಲಿವುಡ್​ ಸೂಪರ್​ ಸ್ಟಾರ್​​ನ ಮಹೇಶ್ ಬಾಬುರನ್ನು ಯಾವ ಅವತಾರದಲ್ಲಿ ತೋರಿಸ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

 

ರಾಜ್ ಮೌಳಿ ಮುಂದಿನ ಚಿತ್ರ ಮಹೇಶ್ ಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ತಿಳಿದ ತಕ್ಷಣ ಈ ಫ್ಯಾನ್ ಮೇಡ್​​​ ಪೋಸ್ಟರ್​ ಕಳೆದೆರಡು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಮಹೇಶ್​ ಬಾಬು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಹೇಗಿರುತ್ತೆ ಅಂತ ಊಹಿಸಿಕೊಂಡು ಅಭಿಮಾನಿಯೊಬ್ಬ ಮಾಡಿರೋ ಪೋಸ್ಟರ್​ ಇದು. ಮಹೇಶ್​ ಬಾಬು ರಾಮನ ಅವತಾರದಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವಂತೆ ಪೋಸ್ಟರ್​​ ಡಿಸೈನ್ ಮಾಡಲಾಗಿದೆ.

 

ಫಿಕ್ಷನ್​​ ಫ್ಯಾಂಟಸಿ ಸಿನಿಮಾಗಳನ್ನ ಮಾಡೋದ್ರಲ್ಲಿ ಎಸ್​.ಎಸ್​ ರಾಜಮೌಳಿ ಸಿದ್ಧಹಸ್ತರು. ಮಹಾಭಾರತ ತಮ್ಮ ಡ್ರೀಮ್​ ಪ್ರಾಜೆಕ್ಟ್​ ಅಂತ್ಲೂ ಮೌಳಿ ಹೇಳಿದ್ದಾರೆ. ಆದರೆ, ರಾಮಾಯಣ ಸಿನಿಮಾ ಬಗ್ಗೆ ಅವರು ಎಂದೂ ಮಾತನಾಡಿಲ್ಲ. ಮಹೇಶ್​ ಬಾಬುನ ಮೌಳಿ ಜೇಮ್ಸ್​ ಬಾಂಡ್​​​​​​ ಅವತಾರದಲ್ಲಿ ಊಹಿಸಿಕೊಂಡು, ಕಥೆ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಆದರೆ, ಯಾವುದು ಈವರೆಗೆ ಯಾವುದು ಪಕ್ಕಾ ಆಗಿಲ್ಲ.

 

ಹಾಲಿವುಡ್​ ಸ್ಟೈಲ್​ ಹೀರೋ ಮಹೇಶ್​ ಬಾಬು. ತಮ್ಮ ಸಿನಿಮಾದಲ್ಲಿ ಇದೇ ರೀತಿ ಮೌಳಿ, ಟಾಲಿವುಡ್ ಪ್ರಿನ್ಸ್​​ನ ಪ್ರಸೆಂಟ್​ ಮಾಡ್ತಾರೆ ಅನ್ನೋ ನಿರೀಕ್ಷೆ ಕೂಡ ಇದೆ. ಇದೆಲ್ಲದರ ಮಧ್ಯೆ ಈ ಫ್ಯಾನ್​ ಮೇಡ್​ ಪೋಸ್ಟರ್​ ಸದ್ದು ಮಾಡ್ತಿದೆ. ಶ್ರೀರಾಮನ ಪಾತ್ರಕ್ಕೆ ಮಹೇಶ್​ ಬಾಬುಗಿಂತ ಒಳ್ಳೆ ಆಯ್ಕೆ ಇಲ್ಲ ಅನ್ನುವ ಚರ್ಚೆ ಕೂಡ ನಡೀತಿದೆ. ​ಸೂಪರ್​ ಸ್ಟಾರ್,​ ಶ್ರೀರಾಮನ ಗೆಟಪ್​ನಲ್ಲಿರೋ ಪೋಸ್ಟರ್​​​​ ಎಲ್ಲರ ಗಮನ ಸೆಳೀತಿದೆ.

 

ರಾಜಮೌಳಿ ತಮ್ಮ ಕಥೆಗೆ ತಕ್ಕ ನಾಯಕನನ್ನ ಆಯ್ಕೆ ಮಾಡಿಕೊಳ್ತಾರೆ. ಹಾಗಾಗಿ ತಮ್ಮ ಮುಂದಿನ ಚಿತ್ರಕ್ಕೆ ಯಾವ ಕಥೆ ಸಿದ್ಧಪಡಿಸ್ತಿದ್ದಾರೆ ಗೊತ್ತಿಲ್ಲ. ಆ ಕಥೆಯಲ್ಲಿ ಮಹೇಶ್​ ಬಾಬು ಪಾತ್ರ ಏನ್​ ಆಗಿರುತ್ತೆ ಅನ್ನೋದು ಹೇಳೋದಕ್ಕೆ ಆಗೋದಿಲ್ಲ. ಈ ಪೋಸ್ಟರ್​ ನೋಡಿದ್ಮೇಲೆ ಮೌಳಿ ರಾಮಾಯಣ ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ರು ಅಚ್ಚರಿಪಡಬೇಕಿಲ್ಲ.

 

 

Find Out More:

Related Articles: