ಡಿಕೆಶಿಗೂ ಒಂದು ಚಾನ್ಸ್ ಕೊಡೋಣ

Soma shekhar
ನವದೆಹಲಿ: ರಾಜ್ಯ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ನಾನಾ ಕಸರತ್ತುಗಳು ನಡೆಯುತ್ತಿದ್ದು, ಮಂಗಳವಾರ ಸಿದ್ದರಾಮಯ್ಯ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸೋನಿಯಾ ಗಾಂಧಿ ಡಿಕೆಶಿಗೂ ಒಂದ್ ಚಾನ್ಸ್ ಕೊಟ್ಟು ನೋಡೋಣ ಎಂದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನ್ ಹೇಳಿದ್ದಾರೆ ಗೊತ್ತಾ!? 
 
ಕೆಪಿಸಿಸಿ ಆಧ್ಯಕ್ಷ ಸ್ಥಾನ ಆಯ್ಕೆ ವಿಚಾರವಾಗಿ ರಾಜ್ಯ ನಾಯಕರ ನಡುವೆ ಗೊಂದಲ ತೀವ್ರಗೊಂಡ ವಿಚಾರವಾಗಿ ಹೈಕಮಾಂಡ್‌ ಬುಲಾವಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಸುಮಾರು 45 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಸೋನಿಯಾ ಅವರ ಆಪ್ತ ಅಹಮ್ಮದ್ ಪಟೇಲ್‌ ಹಾಗೂ ಕೆ.ಸಿ ವೇಣುಗೋಪಾಲ್‌ ಜೊತೆಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವ ಕುಮಾರ್ ಬದಲಾಗಿ ಆಪ್ತ ಎಂಬಿ ಪಾಟೀಲ್‌ ಅವರನ್ನು ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
 
ಮಾತುಕತೆಯ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಮುಂದುವರಿಯಿರಿ ಎಂದು ಸೋನಿಯಾಗಾಂಧಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎನ್ನ ಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾಗಿ ಕೇಂದ್ರದ ಮುಖಂಡರ ಜೊತೆಗೆ ಚರ್ಚೆ ನಡೆಸಿ ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಭೇಟಿ ಯಾಗಲಿದ್ದು ಪಕ್ಷ ಸಂಘಟನೆ ಹಾಗೂ ಇನ್ನಿತರ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಚರ್ಚೆ ನಡೆಸಲಿದ್ದಾರೆ. ಈ ಕಾರಣಕ್ಕಾಗಿ ಮಂಗಳವಾರ ಅವರು ಬೆಂಗಳೂರಿಗೆ ಹಿಂತಿರುಗದೆ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ. 
 
ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಶಾಸಕ ಕೃಷ್ಣಭೌರೇಗೌಡ, ಎಂ. ಬಿ ಪಾಟೀಲ್ ರಿಗೆ ಕೆಪಿಸಿಸಿ ನೀಡುವಂತೆ ಹೆಚ್ಚು ಆಸಕ್ತಿ ವಹಿಸಿದ್ದು, ಡಿಕೆಶಿಗೆ ಭೇಡ, ಅವರ ಮೇಲೆ ಇ. ಡಿ ಹಾಗೂ ಐ. ಟಿ ಸಮಸ್ಯೆಗಳು ಬಹಳಯಿವೆ ಆದ್ದರಿಂದ ನೋಡಿ ಎಂದಿದ್ದಾರೆ. ಸದ್ಯಕ್ಕೆ ಕೆಪಿಸಿಸಿ ಮಾತುಕತೆ ಅಲ್ಲಿಗೆ ನಿಂತಿದ್ದ, ಯಾರಿಗೆ ಸಿಗಲಿದೆ ಕೆಪಿಸಿಸಿ ಪಟ್ಟ ಎಂಬುದಕ್ಕೆ ಕಾದು ನೋಡಬೇಕಾಗಿದೆ.

Find Out More:

Related Articles: