ಕುರುಕ್ಷೇತ್ರ ಸಿನಿಮಾ ಪ್ರಮೋಷನ್ ಗತಿಯೇನು?

frame ಕುರುಕ್ಷೇತ್ರ ಸಿನಿಮಾ ಪ್ರಮೋಷನ್ ಗತಿಯೇನು?

somashekhar
ದರ್ಶನ್ ಅಭಿಮಾನಿಗಳಿಗೆ ನಿರಾಸೆ ಆಗೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಕುರುಕ್ಷೇಥ್ರ ರಿಲೀಸ್ ಡೇಟ್ ಮುಂದಕ್ಕೆ ಹೋಗಬಹುದಾ ಅನ್ನೋ ಅನುಮಾನಗಳು ಕಾಡುತ್ತಿವೆ. ಇದಕ್ಕೆಲ್ಲ ಕಾರಣ ಏನಪ್ಪ ಅಂದರೆ, ನಿರ್ಮಾಪಕ ಮುನಿರತ್ನ. ಅವರು ಸಮ್ಮಿಶ್ರ ಸರ್ಕಾರದ ಮೇಲೆ ಮುನಿಸಿಕೊಂಡು ಮುಂಬೈ ಸೇರಿದ್ದಾರೆ.


ಹೌದು, ಮುನಿರತ್ನ ಅವರು ಮೀಡಿಯಾ ಸೇರಿದಂತೆ ಯಾರಿಗೂ ಕೈಗೆ ಸಿಗದಂತೆ ಮುಂಬೈ ಸೇರಿದ್ದಾರೆ. ಹೀಗೆ ತಮ್ಮ ರಾಜಕೀಯ ಜಂಜಾಟದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆದರೆ ಇಲ್ಲಿ ಅವರು ನಿರ್ಮಾಣ ಮಾಡಿದ ದೊಡ್ಡ ಬಜೆಟ್ ಚಿತ್ರ ಕುರುಕ್ಷೇತ್ರಕ್ಕೆ ಸಂಕಟ ಎದುರಾಗಿದೆ. ಪ್ರಮೋಶನ್ ಗೆ ಅವರೇ ಇಲ್ಲದೇ ಸಮಸ್ಯೆ ಆಗುತ್ತಿದೆ.


ಹೀಗಾಗಿ ಕುರುಕ್ಷೇಥ್ರ ಚಿತ್ರದ ನಾಯಕ ದರ್ಶನ್ ಕೂಡ ಇದೀಗ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ನಿರ್ಮಾಪಕರೇ ಈ ಚಿತ್ರದ ಪ್ರಮೋಶನ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವಾಗ ಚಿತ್ರತಂಡ ಕೂಡ ಸುಮ್ಮನಾಗಿದೆ. ಕಲಾವಿದರಿಗಂತೂ ಗೊಂದಲ ಉಂಟಾಗಿದೆ. ದರ್ಶನ್ ಫ್ಯಾನ್ಸ್ ಗಳಿಗೆ ಆತಂಕ ಉಂಟಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.


ಅಲ್ಲದೇ ಒಂದು ವೇಳೆ ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆದರೆ ಅಲ್ಲಿ ಸಾಹೋ ಹಾಗೂ ಪೈಲ್ವಾನ ಎದುರು ಕುರುಕ್ಷೇತ್ರ ಬರ್ಜರಿ ಪೈಪೋಟಿ ಎದುರಿಸಬೇಕಾಗಬಹುದು ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.


Find Out More:

Related Articles:

Unable to Load More