
ಉದ್ಯೋಗಿಗಳಿಗೆ ವರ್ಷಾಂತ್ಯದವರೆಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲು ಮುಂದಾದ ಫೇಸ್ ಬುಕ್
ಕೊರೋನಾ ವೈರಸ್ ಇಡೀ ದೇಶದಾದ್ಯಂತ ದಾಳಿಯನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಮಾನ ಸಂಪನ್ಮೂಲವನ್ನು ಉಳಿಸುವ ಸಲುವಾಗಿ ಪ್ರಪಂಚದ ಅನೇಕ ರಾಷ್ಟ್ರಗಳು ಲಾಕ್ ಡೌನ್ ಮಾಡಲಾಗಿದೆ. ಈ ಲಾಕ್ ಡೌನ್ ಇಂದಾಗಿ ಜಗತ್ತಿನಾದ್ಯಂತ ಸಾಕಷ್ಟು ಕಂಪನಿಗಳು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸವನ್ನು ನಿರ್ವಹಿಸುವಂತೆ ತಿಳಿಸಲಾಗಿದೆ.
ಅದೇ ರೀತಿ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಹಾಗೂ ಗೂಗಲ್ ಸಂಸ್ಥೆಯು ತಮ್ಮ ಹೆಚ್ಚಿನ ಉದ್ಯೋಗಿಗಳಿಗೆ ಈ ವರ್ಷಾಂತ್ಯದವರೆಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲು ಮುಂದಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಏಪ್ರಿಲ್‌ನಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳು ಮೇ ಅಂತ್ಯದವರೆಗೆ ದೂರದಿಂದಲೇ ಕೆಲಸ ಮಾಡುವ ಅಗತ್ಯವಿರುತ್ತದೆ ಎಂದು ಹೇಳಿದ್ದರು. ಅಲ್ಲದೆ ಅಲ್ಪ ಪ್ರಮಾಣದ ಉದ್ಯೋಗಿಗಳಿಗೆ ಮಾತ್ರ ಬೇಗನೆ ಕಚೇರಿಗೆ ಬರಲು ಅವಕಾಶ ಮಾಡಿಕೊಟ್ಟಿತ್ತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಫೇಸ್ ಬುಕ್ ಜಗತ್ತಿನಾದ್ಯಂತ ತನ್ನ ಕಚೇರಿಗಳನ್ನು ಜುಲೈ ತಿಂಗಳಿಗೂ ಮುನ್ನ ತೆರೆಯದೇ ಇರುವುದಕ್ಕೆ ನಿರ್ಧರಿಸಿದೆ. ಜು.06 ರಿಂದ ತನ್ನ ಕಚೇರಿಗಳನ್ನು ತೆರೆಯಲಿರುವ ಫೇಸ್ ಬುಕ್ ಮಾರ್ಚ್ ನಿಂದ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದು ಶೀಘ್ರವೇ ಸಿಇಒ ಮಾರ್ಕ್ ಝುಕರ್ಬರ್ಗ್ ಸಂಸ್ಥೆಯ ಪುನಾರಂಭದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಸ್ತುತ 48,268 ಜನರಿಗೆ ಫೇಸ್ ಬುಕ್ ಉದ್ಯೋಗ ನೀಡಿದೆ. ಫೇಸ್ ಬುಕ್ ಈಗಾಗಲೇ ವ್ಯಕ್ತಿಗಳು ಉಪಸ್ಥಿತರಾಗಿದ್ದುಕೊಂಡು ನಡೆಸುವ ಸಭೆಗಳನ್ನು ರದ್ದುಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ಸಭೆಗಳನ್ನು ನಡೆಸುತ್ತಿದೆ.
ಶೇಕಡವಾರು ಸಣ್ಣ ಪ್ರಮಾಣದಲ್ಲಿ ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಇವರು ಅಗತ್ಯ ಕಾರ್ಯಗಳಲ್ಲಿ ಕೆಲಸ ಮಾಡುವ ನೌಕರರು ಮತ್ತು ಭಯೋತ್ಪಾದನೆ ನಿಗ್ರಹ ಅಥವಾ ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ತಡೆಗಟ್ಟುವಲ್ಲಿ ಕೆಲಸ ಮಾಡುವ ವಿಷಯ ವಿಮರ್ಶಕರು ಮತ್ತು ಸಂಕೀರ್ಣ ಯಂತ್ರಾಂಶದಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳನ್ನು ಒಳಗೊಂಡಿರುತ್ತಾರೆ
ಫೇಸ್‌ಬುಕ್‌ನ ಹೊರತಾಗಿ, ಗೂಗಲ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಈ ವರ್ಷದ ಕೊನೆಯವರಗೂ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಕೇಳಿಬಂದಿದೆ. ಫೇಸ್‌ಬುಕ್‌ನಂತೆಯೇ, ಗೂಗಲ್ ತನ್ನ ಉದ್ಯೋಗಿಗಳಿಗೆ ಕನಿಷ್ಠ ಜೂನ್ 1 ರವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದೆ.
ವರದಿಯ ಪ್ರಕಾರ, ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಅವರು ಸಾಂಕ್ರಾಮಿಕ ರೋಗದಿಂದಾಗಿ ದೂರದಿಂದಲೇ ಕೆಲಸ ಮಾಡಲು ಸಮರ್ಥವಾಗಿರುವ ಎಲ್ಲ ಗೂಗಲರ್‌ಗಳು 2020 ರ ಅಂತ್ಯದವರೆಗೂ ಇದನ್ನು ಮುಂದುವರಿಸಬಹುದು ಎಂದು ಹೇಳಿದ್ದಾರೆ.